ಬಳ್ಳಾರಿ: ಕೊರೊನಾ ಸಾಂಕ್ರಾಮಿಕ ದೂರವಾಗಲೆಂದು ಗ್ರಾಮಸ್ಥರು ಸಾಮೂಹಿಕವಾಗಿ ಬೇವಿನ ಸೊಪ್ಪು ಹಾಕಿ ಪೂಜೆ ಮಾಡಿದ ಘಟನೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಿಪ್ಪೇಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೊರೊನಾಮ್ಮ ಹೆಸರಿನಲ್ಲಿ ವೈರಸ್​ಗೆ ಪೂಜೆ ಸಲ್ಲಿಸಲಾಗಿದ್ದು ಕುಡಿಕೆಗೆ ಬೇವಿನ ಸೊಪ್ಪು ಇಟ್ಟು, ತರಹೇವಾರಿ ನೈವೇದ್ಯವನ್ನೂ ಅರ್ಪಿಸಲಾಗಿದೆ. ಅಲ್ಲದೇ ಕೊರೊನಾಮ್ಮ.. ನಮ್ಮೂರಿಗೆ ಬರ್ಬೇಡ.. ನಮ್ಮೂರಿಗೆ ಬಂದು ಸಾವು ನೋವು ತರ್ಬೇಡಾ ತಾಯಿ ಎಂದು ಪ್ರಾರ್ಥಿಸುತ್ತಾ ಪೂಜೆಯ ನಂತರ ಕೊರೊನಾಮ್ಮನನ್ನು ಊರಿನ ಆಚೆ ಬಿಟ್ಟುಬಂದಿದ್ದಾರೆ.

ಜಿಲ್ಲಾಡಳಿತ ಮೌಢ್ಯಾಚರಣೆ ನಿಷೇಧ ಮಾಡಿದ್ರೂ ಕೂಡ, ಜನರು ಗುಂಪಾಗಿ ಸೇರಿ ಕೊರೊನಾಮ್ಮನ ಪೂಜೆ ಮಾಡಿದ್ದಾರೆ.

The post ‘ಕೊರೊನಾ ತಾಯಿ.. ಶಾಂತಳಾಗು’ ಎಂದು ಕೊರೊನಾಮ್ಮನನ್ನು ಊರಾಚೆ ಬಿಟ್ಟು ಬಂದ ಗ್ರಾಮಸ್ಥರು appeared first on News First Kannada.

Source: newsfirstlive.com

Source link