ಕೊರೊನಾ ತೊಲಗಲೆಂದು ಅಣ್ಣಮ್ಮನಿಗೆ ಕುರಿ-ಕೋಳಿ ಬಲಿಕೊಟ್ಟ ಬೆಂಗಳೂರು ಮಂದಿ

ಕೊರೊನಾ ತೊಲಗಲೆಂದು ಅಣ್ಣಮ್ಮನಿಗೆ ಕುರಿ-ಕೋಳಿ ಬಲಿಕೊಟ್ಟ ಬೆಂಗಳೂರು ಮಂದಿ

ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಕೊರೊನಾ ತೊಲಗಿದರೆ ಸಾಕಪ್ಪಾ ಎಂದು ಎಲ್ಲರೂ ಆಶಿಸುತ್ತಿದ್ದಾರೆ. ಅದ್ರೆ ಬೆಂಗಳೂರಿನ ಕೆಪಿ ಅಗ್ರಹಾರದಲ್ಲಿ ಕೊರೊನಾ ತೊಲಗಿಸಲು ಕೋಳಿ ಕುರಿ ಬಲಿ ಕೊಟ್ಟಿದ್ದಾರೆ. ಇದು ನಡೆದಿರುವುದು ಯಾವುದೋ ಹಳ್ಳಿಯಲ್ಲಲ್ಲ, ಕೆಪಿ ಅಗ್ರಹಾರದಲ್ಲಿ. ಹೌದು ಈ ಬಡಾವಣೆಯ 16ನೇ ಕ್ರಾಸ್, 6ನೇ ಕ್ರಾಸ್, 17ನೇ ಕ್ರಾಸ್ ,13ನೇ ಕ್ರಾಸ್ ಸೇರಿ ಹಲವು ಕಡೆಗಳಲ್ಲಿ ಪೂಜೆ ಸಲ್ಲಿಸಲಾಗಿದೆ. ಗಲ್ಲಿಗಲ್ಲಿಯಲ್ಲಿ ನಗರ ದೇವತೆ ಅಣ್ಣಮ್ಮ ಹೆಸರಿನಲ್ಲಿ ಕಲ್ಲು ಸ್ಥಾಪನೆ ಮಾಡಿ ಅದಕ್ಕೆ ಪೂಜೆ ಸಲ್ಲಿಸಿ ಕೊರೊನಾ ನಿವಾರಣೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಏರಿಯಾ ಬೀದಿಗಳಲ್ಲಿ ರಂಗೋಲಿ ಇಟ್ಟು ಮೂರು ಕಲ್ಲುಗಳನ್ನ ಇಟ್ಟು ಅದಕ್ಕೆ ಪೂಜೆ ಮಾಡಿ ಹರಕೆ ಸಲ್ಲಿಸಿದ್ದಾರೆ. ಹಳ್ಳಿಗಳ ಜನರಿಗೆ ವಿಜ್ಞಾನ ತಂತ್ರಜ್ಞಾನದ ಬಗೆಗಿನ ಅರಿವು ಸ್ಪಲ್ಪ ಕಡಿಮೆ ಇರುತ್ತೆ.. ಹಾಗಾಗಿ ಅಲ್ಲಿ ಕೆಲವೊಮ್ಮೆ ಮೌಢ್ಯ ಸಂಪ್ರಾದಾಯದಗಳನ್ನ ಆಚರಿಸುವುದನ್ನ ನಾವು ನೋಡಿದ್ದೇವೆ. ಆದರೆ ಬೆಂಗಳೂರಿಗರಿಗೆ ಕೊರೊನಾ ಹೇಗೆ ಹರಡುತ್ತೆ. ಅದನ್ನ ತಡೆ ಗಟ್ಟಲು ನಾವು ಮಾಡ ಬೇಕಾಗಿರುವುದು ಏನು ಇವೆಲ್ಲದರ ಬಗ್ಗೆಯೂ ಜ್ಞಾನವಿದೆ ಅದ್ರೂ ಕೂಡ ಇಂತಹ ಮೌಢ್ಯತೆ ಪ್ರದರ್ಶಿಸಿರುವುದು ಮಾತ್ರ ದುರಂತ.
ಸ್ಥಳೀಯರು ಪೂಜೆಯನ್ನೇನೋ ಭರ್ಜರಿಯಾಗಿ ಮಾಡಿದ್ದಾರೆ.

ಆದ್ರೆ ಪೂಜೆ ನೆರವೇರಿಸುವ ಸಂದರ್ಭದಲ್ಲಿ ಸಾಮಾಜಿಕ ಅಂತರವನ್ನೇ ಮರೆತಿದ್ದಾರೆ. ಇನ್ನೂ ಕೆಲವರಿಗೆ ಮಾಸ್ಕ್ ಧರಿಸೋದಕ್ಕೂ ನೆನಪಿರಲಿಲ್ಲ. ಇವರು ಸಲ್ಲಿಸಿದ ಹರಕೆಯಿಂದ ಕೊರೊನಾ ಕಡಿಮೆಯಾಗುತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಇವರು ಈರೀತಿ ಗುಂಪು ಗೂಡಿದ್ದರಿಂದ ಕೊರೊನಾ ಹೆಚ್ಚಾಗದಿದ್ರೆ ಸಾಕು.

ವಿಜ್ಞಾನಿಗಳು ಕೊರೊನಾ ಲಸಿಕೆ ಕಂಡು ಹಿಡಿಯಲು ಹಗಲು ರಾತ್ರಿ ಕಷ್ಟ ಪಡುತ್ತಿದ್ದಾರೆ. ವೈದ್ಯರು ಸೋಂಕಿತ ಪ್ರಾಣ ಉಳಿಸಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ನಾವು ಇದನ್ನೆಲ್ಲಾ ಲೆಕ್ಕಿಸದೇ ಈ ರೀತಿ ಮೌಢ್ಯತೆ ಪ್ರದರ್ಶಿಸಿವುದು ಎಷ್ಟರ ಮಟ್ಟಿಗೆ ಸರಿ ಎಂದು ನಾವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ.

The post ಕೊರೊನಾ ತೊಲಗಲೆಂದು ಅಣ್ಣಮ್ಮನಿಗೆ ಕುರಿ-ಕೋಳಿ ಬಲಿಕೊಟ್ಟ ಬೆಂಗಳೂರು ಮಂದಿ appeared first on News First Kannada.

Source: newsfirstlive.com

Source link