ನವದೆಹಲಿ: ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ಪರಿಸ್ಥಿತಿ, ವ್ಯಾಕ್ಸಿನೇಷನ್ ಹಾಗೂ ತೌಕ್ತೆ ಚಂಡಮಾರುತ ಎದುರಿಸಲು ಮಾಡಿಕೊಳ್ಳಲಾಗ್ತಿರೋ ಸಿದ್ಧತೆ ಬಗ್ಗೆ ಚರ್ಚಿಸಲು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಲಿದೆ.

ಬೆಳಗ್ಗೆ 11 ಗಂಟೆಗೆ  ಸಭೆ ಆರಂಭವಾಗಲಿದ್ದು, ದೇಶದಲ್ಲಿ ವ್ಯಾಕ್ಸಿನೇಷನ್​​​​ ಬಗ್ಗೆ, ಕೊರೊನಾ ಪ್ರಕರಣಗಳ ಬಗ್ಗೆ ಹಾಗೂ ಗ್ರಾಮೀಣ ಭಾಗದಲ್ಲಿ ಸೋಂಕು ಹೆಚ್ಚಳವಾಗುತ್ತಿರೋ ಬಗ್ಗೆ ಪ್ರಧಾನಿ ಮಾಹಿತಿ ಸಂಗ್ರಹಿಸಲಿದ್ದಾರೆ. ಜೊತೆಗೆ ಚಂಡಮಾರುತದ ಹಿನ್ನೆಲೆ ಸಿದ್ಧತೆ ಹೇಗಿದೆ ಎಂದು ಚರ್ಚಿಸಲಿದ್ದಾರೆ.

ಎನ್​ಡಿಎಂಎ(National Disaster Management Authority) ಅಧಿಕಾರಿಗಳು,  ಕೇಂದ್ರ ಗೃಹ ಸಚಿವರು, ಆರೋಗ್ಯ ಸಚಿವರು ಮತ್ತು ಸಚಿವಾಲಯದ ಅಧಿಕಾರಿಗಳು ಹಾಗೂ ನೀತಿ ಆಯೋಗದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.

The post ಕೊರೊನಾ, ತೌಕ್ತೆ ಸೈಕ್ಲೋನ್​​​ ಕುರಿತು ಪ್ರಧಾನಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ appeared first on News First Kannada.

Source: newsfirstlive.com

Source link