ಪುಣೆ: ವೈದ್ಯರೊಬ್ಬರು ತಮ್ಮ ಕುಟುಂಬಸ್ಥರೇ ಸಂಕಷ್ಟದಲ್ಲಿರೂವಾಗಲೂ ಕೆಲಸ ಮಾಡುತ್ತಾ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯನಿಷ್ಠೆ ಮೆರೆದಿದ್ದಾರೆ.

ಮಹಾರಾಷ್ಟ್ರದ ಪುಣೆಯಲ್ಲಿನ ಸಂಜೀವನ್ ಆಸ್ಪತ್ರೆಯ ನಿರ್ದೇಶಕರಾದ ಡಾ.ಮುಕುಂದ್ ಅವರ ತಂದೆ ಕೋವಿಡ್ ನಿಂದ ಸಾವನ್ನಪ್ಪಿದ್ದಾರೆ. ಇವರ ತಾಯಿ ಮತ್ತು ಅಣ್ಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಂತ ಮುಕುಂದ್ ಅವರು ತಮ್ಮ ಕೆಲಸಕ್ಕೆ ಗೈರಾಗಿಲ್ಲ. ತಮ್ಮವರು ಹಾಸಿಗೆ ಹಿಡಿದಿದ್ದರು ಬೇರೆ ರೋಗಿಗಳಿಗೆ ತೊಂದರೆಯಾಗಬಾರದು ಎಂದು ತಮ್ಮ ಕೆಲಸದಲ್ಲಿ ಮುಕುಂದ ತೊಡಗಿಕೊಂಡಿದ್ದಾರೆ.

ಪರಿಸ್ಥಿತಿ ತುಂಬಾ ಕಠಿಣವಾಗಿದೆ. ನಾವು ರೆಸ್ಟ್ ಮಾಡುತ್ತಾ ಕುಳಿತರೆ ರೋಗಿಗಳ ಸಂಕಷ್ಟ ನೋಡಲು ಆಗಲ್ಲ ಎಂದು ವೈದ್ಯ ಮುಕುಂದ್ ಅವರು ಹೇಳಿದ್ದಾರೆ. ವೈದ್ಯ ಮುಕುಂದ್ ಅವರ ಕರ್ತವ್ಯ ನಿಷ್ಠೆಗೆ ಸಾಮಾಜಿಕ ಜಾಲತಾಣದಲ್ಲಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನೀವೇ ನಿಜವಾದ ಹೀರೋ ನಿಮಗೊಂದು ಸೆಲ್ಯೂಟ್ ಎಂದು ಕಮೇಂಟ್ ಮಾಡಿ ಧನ್ಯವಾದ ತಿಳಿಸುತ್ತಿದ್ದಾರೆ.

The post ಕೊರೊನಾ ದಿಂದ ತಂದೆ ಸಾವನ್ನಪ್ಪಿದ್ರೂ ಕರ್ತವ್ಯಕ್ಕೆ ಹಾಜರಾದ ವೈದ್ಯ appeared first on Public TV.

Source: publictv.in

Source link