ಬೆಳಗಾವಿ: ಗ್ರಾಮಕ್ಕೆ ವಕ್ಕರಿಸಿದ್ದ ಕೊರೊನಾ ಮಹಾಮಾರಿಯನ್ನ ಕಟ್ಟಿಹಾಕಲು ಗ್ರಾಮೀಣ ಪ್ರದೇಶದ ಜನ ದೇವರ ಮೊರೆ ಹೋಗುತ್ತಿರುವುದು ಎಲ್ಲೆಡೆ ಕಂಡುಬರುತ್ತಿವೆ. ಇಲ್ಲೊಂದು ಗ್ರಾಮದಲ್ಲಿ ಇದೇ ರೀತಿ ಕೊರೊನಾ ಕಟ್ಟಿ ಹಾಕಲು ಬಿಟ್ಟಿದ್ದ ಮರಡಿಮಠದ ಕುದುರೆ ಬೆಳಗಾಗುವುದರಲ್ಲಿಯೇ ಮೃತಪಟ್ಟಿದೆ.

ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಕೊಣ್ಣೂರ ಗ್ರಾಮದ ಇತಿಹಾಸಪ್ರಸಿದ್ಧ ಮರಡಿಮಠದ ಸೌರ್ಯ ಕುದುರೆಯನ್ನು ಬುಧವಾರ ಮಧ್ಯರಾತ್ರಿ 12 ಗಂಟೆಯಿಂದ ಗುರುವಾರ ಬೆಳಗ್ಗೆ 4 ಗಂಟೆಯವರೆಗೆ ಗ್ರಾಮದಲ್ಲಿ ತಿರುಗಾಡಲು ಬಿಟ್ಟಿದ್ದರು. ಈ ಮಠದ ಕುದುರೆ ಗ್ರಾಮದಲ್ಲಿ ರಾತ್ರಿ‌ ವೇಳೆ ಓಡಾಡಿದ್ರೆ, ಕಾಯಿಲೆಯಿಂದ ಗ್ರಾಮ ಮುಕ್ತವಾಗುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ

ಈ ಹಿಂದೆ ದೂರವಾಗಿತ್ತಂತೆ ಪ್ಲೇಗ್
ಕಳೆದ 51 ವರ್ಷಗಳ ಹಿಂದೆಯೂ ಮಲೇರಿಯಾ, ಪ್ಲೇಗ್ನಂತಹ ಮಾರಕ ರೋಗಗಳು ಬಂದ ಸಂದರ್ಭದಲ್ಲಿ ಕುದರೆ ಬಿಟ್ಟಾಗ ರೋಗ ದೂರವಾಗಿತ್ತಂತೆ. ಅಲ್ಲದೇ ಕೊರೊನಾದ ಮೊದಲ ಅಲೆಯಲ್ಲೂ ದೈವ ಕುದುರೆಯನ್ನು ಬಿಟ್ಟಿದ್ದರಿಂದ ಗ್ರಾಮಗಳಲ್ಲಿ ಯಾವುದೇ ಸಾವು ನೋವುಗಳಾಗಿಲ್ಲ ಎನ್ನುವುದು ಜನರ ನಂಬಿಕೆಯಾಗಿದೆ.

ಕೊರೊನಾ ಎರಡನೇ ಅಲೆಯಿಂದ ಪಾರಾಗಲು ಏನು ಮಾಡಬೇಕೆಂದು ತಿಳಿಯದೆ, ಸಾವು ನೋವುಗಳಿಂದ ತತ್ತರಿಸಿದ ಜನರು ಕೊನೆಗೆ ಶ್ರೀಗಳನ್ನು ಭೇಟಿ ಮಾಡಿದ್ದರು. ರೋಗ ನಿವಾರಣೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದರು. ಶ್ರೀಗಳು ತಮ್ಮ ಕುದುರೆಯನ್ನು ಊರಲ್ಲಿ ಬಿಡುವುದಾಗಿ ತಿಳಿಸಿದ್ದರು ಎನ್ನಲಾಗಿದೆ.

ಆಗ ಗ್ರಾಮಸ್ಥರು ತಮ್ಮ ಇಚ್ಛೆಯಂತೆ ನಡೆಯಲಿ ಎಂದು.. ಕುದುರೆ ಪ್ರದಕ್ಷಿಣೆ ಹಾಕಿದ ನಂತರ ಸಾವು-ನೋವುಗಳು ಕಡಿಮೆಯಾಗುತ್ತವೆ ಎಂದು ನಂಬಿದ್ದರು. ಆದ್ರೀಗ ಕುದುರೆ ಸಾವನ್ನಪ್ಪಿರೋದ್ರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

The post ಕೊರೊನಾ ದೂರವಾಗಲೆಂದು ಗ್ರಾಮದಲ್ಲಿ ಬಿಟ್ಟಿದ್ದ ಕುದುರೆ ಬೆಳಗಾಗುವುದರೊಳಗೆ ಸಾವು appeared first on News First Kannada.

Source: newsfirstlive.com

Source link