ಬೆಂಗಳೂರು: ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ ಅವರು, ಮುಂದಿನ 6 ತಿಂಗಳುಗಳ ಕಾಲ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರುವ ಕಾರ್ಯಕ್ರಮಗಳನ್ನು ನಿಷೇಧಿಸುವುದು ಸೇರಿದಂತೆ ಕೆಲ ಸಲಹೆಗಳನ್ನು ನೀಡಿದ್ದಾರೆ.

ಪ್ರಧಾನಿಗಳಿಗೆ ದೇವೇಗೌಡ ಅವರು ನೀಡಿರುವ ಪ್ರಮುಖ ಸಲಹೆಗಳು ಇಂತಿದೆ..

 • ಆರೋಗ್ಯ ಇಲಾಖೆ ನಿರ್ವಹಣೆ ಮತ್ತು ಕೋವಿಡ್ ನಿರ್ವಹಣೆಯನ್ನು ತ್ವರಿತವಾಗಿ ವಿಕೇಂದ್ರೀಕರಿಸಬೇಕು
 • ಕೊರೊನಾ ನಿರ್ವಹಣೆಗೆ ರಾಜಧಾನಿಯಲ್ಲಿ ಮಾತ್ರ ವಾರ್​ ರೂಂ ಮಾಡದೇ, ಎಲ್ಲಾ ಜಿಲ್ಲಾಕೇಂದ್ರಗಳಲ್ಲಿ ವಾರ್​​ ರೂಂ ಸ್ಥಾಪನೆ ಮಾಡಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ದೊಡ್ಡ ನಗರಗಳ ಮೇಲೆ ನಿಗಾವಹಿಸುವುದು
 • ಕೊರೊನಾ ಲಸಿಕೆ ಪಡೆಯವುದಕ್ಕೆ ಜಾಗೃತಿ ಮೂಡಿಸುವುದು
 • ರಾಜ್ಯ ಸರ್ಕಾರಗಳು ಅಗತ್ಯ ಲಸಿಕೆ ದಾಸ್ತಾನು ಮಾಡಿಕೊಂಡ ಬೆನ್ನಲ್ಲೇ ಕೊರೊನಾ ಲಸಿಕೆ ಪಡೆಯಲು ಡೆಡ್​​ಲೈನ್​​ಗಳನ್ನು ನಿಗದಿ ಪಡಿಸುವುದು
 • ಲಸಿಕೆಗಳ ಬೆಲೆ ಬಗ್ಗೆ ಬಹಳಷ್ಟು ಗೊಂದಲ ಸೃಷ್ಟಿಯಾಗಿದ್ದು, ಬಡವರನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ದರ ನಿಗದಿ ಮಾಡುವುದು
 • ಕೊರೊನಾ ಲಸಿಕೆ ಪಡೆಯಲು ಮುಂದಾಗುವ ಬಡವರಿಗೆ ಯಾವುದೇ ದಾಖಲೆಗಳನ್ನು ಕಡ್ಡಾಯ ಮಾಡುವುದನ್ನು ತೆಗೆದು ಹಾಕುವುದು
 • ಕೊರೊನಾ ಮೊದಲ ಅಲೆ ಸಂದರ್ಭದಲ್ಲಿ ಕೊರೊನಾ ವಾರಿಯರ್ಸ್, ಹೆಲ್ತ್​​ ಕೇರ್​ ವಾರಿಯರ್ಸ್​​ಗೆ ನೀಡುತ್ತಿದ್ದ ವಿಮೆಯನ್ನು ಹೆಚ್ಚಿಸುವುದು
 • ಸರ್ಕಾರಿ ವಲಯದಲ್ಲಿ ಕೆಲಸ ಮಾಡುತ್ತಿರುವ ಗರ್ಭಿಣಿಯರಿಗೆ ಸಂಬಳ ಸಹಿತ ಮೂರು ತಿಂಗಳು ರಜೆ ನೀಡುವುದು
 • ಶೈಕ್ಷಣಿಕ ವರ್ಷದ ಸಂದರ್ಭದಲ್ಲಿ ಕೋವಿಡ್​ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಮೆಡಿಕಲ್​ ವಿದ್ಯಾರ್ಥಿಗಳಿಗೆ, ಡಾಕ್ಟರ್​​ಗಳಿಗೆ ನೀಟ್​ ಪರೀಕ್ಷೆಯಲ್ಲಿ ಗ್ರೇಸ್​​ ಮಾರ್ಕ್ಸ್​​ ನೀಡುವುದು
 • ಸೇವೆಯ ಸಂದರ್ಭದಲ್ಲಿ ಜೀವ ಕಳೆದುಕೊಂಡ ಕೊರೊನಾ ವಾರಿಯರ್​ ಕುಟುಂಬಸ್ಥರಲ್ಲಿ ಒಬ್ಬರಿಗೆ ಉದ್ಯೋಗ ಅವಕಾಶ ನೀಡಬೇಕು
 • ಪರಸ್ಪರ ಸಹಕಾರಿ ಆಗುವಂತೆ ರಾಜ್ಯ ಸರ್ಕಾರಗಳು ಅನೌಪಚಾರಿಕ ಸಂವಹನ ಜಾಲವನ್ನು ರೂಪಿಸುವುದು
 • ಶೈಕ್ಷಣಿಕ ವರ್ಷ ಆರಂಭದ ಸಂದರ್ಭದಲ್ಲಿ 12 ರಿಂದ 15 ವರ್ಷದೊಳಗಿನ ಮಕ್ಕಳಿಗೆ ವ್ಯಾಕ್ಸಿನೇಷನ್​​ ನೀಡಲು ಮಾರ್ಗ ಕಂಡುಕೊಳ್ಳುವುದು

The post ಕೊರೊನಾ ನಿಯಂತ್ರಣಕ್ಕೆ ಮೋದಿಗೆ 4 ಪುಟಗಳ ಸುದೀರ್ಘ ಪತ್ರ ಬರೆದ ಹೆಚ್​​ಡಿಡಿ appeared first on News First Kannada.

Source: News First Kannada
Read More