ಸಿನಿಮಾ ಕಲಾವಿದರಿಗೆ ಇಂದು ಮತ್ತು ನಾಳೆ ಉಚಿತವಾಗಿದೆ ವ್ಯಾಕ್ಸಿನೇಷನ್​ ನೀಡಲಾಗ್ತಿದ್ದು, ಈಗಾಗಲೇ ಬಹಳಷ್ಟು ಕಲಾವಿದರು ವ್ಯಾಕ್ಸಿನ್​ಗಾಗಿ ಕಲಾವಿದರ ಸಂಘದಲ್ಲಿ ಸೇರಿದ್ದಾರೆ. ಇದೇ ಸಂದರ್ಭ ಭೇಟಿ ನೀಡಿದ್ದ ಸಂಸದೆ ಸುಮಲತಾ ಅಂಬರೀಶ್​ ಕಲಾವಿದರನ್ನ ಉದ್ದೇಶಿಸಿ ಮಾತನಾಡಿದರು.

ಲಾಕ್​ಡೌನ್​ನಿಂದ ಉಪಯೋಗ ಆಗಿದೆ ಅಂದಿರುವ ಸುಮಲತಾ, ಇದರಿಂದ ರೈತರು, ವ್ಯಾಪಾರ- ವಹಿವಾಟುಗಳಿಗೆ ಕಷ್ಟ ಕೂಡ ಆಗುತ್ತೆ. ‘ಜೂನ್ 7ರ ಹೊತ್ತಿಗೆ ಪರಿಸ್ಥಿತಿ ನೋಡಿಕೊಂಡು ಲಾಕ್​ಡೌನ್​ ಬಗ್ಗೆ ತೀರ್ಮಾನ ಮಾಡಲಾಗುತ್ತೆ. ಲಾಕ್​ಡೌನ್​ನಿಂದ ಖಂಡಿತಾ ಸಹಕಾರಿ ಆಗಿದೆ. ಕೋವಿಡ್ ನಿಯಂತ್ರಣಕ್ಕೆ ಬಂದಿದೆ. ಸದ್ಯ ನಮಗೆ ಕೋವಿಡ್ ನಿಯಂತ್ರಣ ಮುಖ್ಯ. ಲಾಕ್​ಡೌನ್​ ವಿಸ್ತರಣೆ ಬಗ್ಗೆ ಪರಿಸ್ಥಿತಿ ಅವಲೋಕಿಸಿ ನಿರ್ಧರಿಸಬೇಕಾಗುತ್ತೆ. ಇದು ಜಿಲ್ಲಾಡಳಿತ ಕೈಗೊಳ್ಳಬೇಕಾದ ನಿರ್ಧಾರ ಅಂತಾ ಸುಮಲತಾ ಅಂಬರೀಶ್ ಹೇಳಿದ್ರು.

ಕಲಾವಿದರಿಗೂ, ತಂತ್ರಜ್ಞರಿಗೆ, ಕಾರ್ಮಿಕರಿಗೆ ಲಸಿಕೆ ಹಾಕಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. ಉಚಿತ ಲಸಿಕೆಗೆ ಸರ್ಕಾರ ವ್ಯವಸ್ಥೆ ಮಾಡಿದೆ. ಎರಡು ದಿನಗಳ ಕಾಲ ಲಸಿಕೆ ಕೊಡಲಾಗುತ್ತೆ ಎಂದರು.

The post ‘ಕೊರೊನಾ ನಿಯಂತ್ರಣವೇ ಆದ್ಯತೆ ಆಗಿರಬೇಕು, ಲಾಕ್ಡೌನ್ ಸಹಕಾರಿಯಾಗಿದೆ’ appeared first on News First Kannada.

Source: newsfirstlive.com

Source link