ಬ್ರೆಜಿಲ್: ವಿವಿಧ ದೇಶಗಳಲ್ಲಿ ಕೊರೊನಾ ತನ್ನ ಅಟ್ಟಹಾಸ ಮುಂದುವರಿಸುತ್ತಿದೆ. ಈ ನಡುವೆ ಪ್ರತಿಯೊಂದು ದೇಶವು ಕೂಡ ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಡ್ಡಾಯಗೊಳಿಸುತ್ತಿದೆ. ಮಾಸ್ಕ್ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳದವರ ವಿರುದ್ಧ ದಂಡ ಪ್ರಯೋಗ ಚಾಲ್ತಿಯಲ್ಲಿದೆ. ಇದೀಗ ಮಾಸ್ಕ್ ಧರಿಸದೆ ಬ್ರೆಜಿಲ್ ಅಧ್ಯಕ್ಷರೇ ದಂಡ ಕಟ್ಟುವಂತಹ ಸ್ಥಿತಿ ಬಂದಿದೆ.

ಬ್ರೆಜಿಲ್ ಅಧ್ಯಕ್ಷ ಜೈರ್ ಬೊಲ್ಸನಾರೋ ಮರ್ನಾಹೋದಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾಸ್ಕ್ ಧರಿಸಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಅಲ್ಲಿನ ಆರೋಗ್ಯ ಇಲಾಖೆ ಕೊರೊನಾ ನಿಯಮ ಉಲ್ಲಂಘಿಸಿದ ದೇಶದ ಅಧ್ಯಕ್ಷರಿಗೆ ದಂಡ ಪ್ರಯೋಗ ಮಾಡಿ ಕಾನೂನು ಎಲ್ಲರಿಗೂ ಒಂದೇ ಎನ್ನುವುದನ್ನು ಪ್ರತಿಪಾದಿಸಿದೆ.

ಜೈರ್ ಬೊಲ್ಸನಾರೋ ಅವರಿಗೆ ದಂಡದ ವಿರುದ್ಧ ಮೇಲ್ಮನವಿ ಸಲ್ಲಿಸಲು 15ದಿನ ಕಾಲಾವಕಾಶ ಕಲ್ಪಿಸಲಾಗಿದ್ದು, ಬಳಿಕ ದಂಡ ಎಷ್ಟು ಕಟ್ಟಬೇಕು ಎನ್ನುವುದನ್ನು ಕೋರ್ಟ್ ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಯಾಗಿದೆ.

The post ಕೊರೊನಾ ನಿಯಮ ಉಲ್ಲಂಘಿಸಿದ ಬ್ರೆಜಿಲ್ ಅಧ್ಯಕ್ಷರಿಗೆ ದಂಡ ಪ್ರಯೋಗ appeared first on Public TV.

Source: publictv.in

Source link