ಹುಬ್ಬಳ್ಳಿ: ಕೊರೊನಾ ಎರಡನೆ ಅಲೆಯ ನಿಯಂತರಣಕ್ಕೆ ಸರ್ಕಾರ ಲಾಕ್​​ಡೌನ್​ ಜಾರಿ ಮಾಡಿದ್ದು, ಸಾರ್ವಜನಿಕರವಾಗಿ ಯಾವುದೇ ಆಚರಣೆ ಮಾಡದಂತೆ ಸೂಚನೆ ನೀಡಿದೆ. ಆದರೆ ಕೋವಿಡ್​ ಮಾರ್ಗಸೂಚಿಗಳನ್ನು ಉಲ್ಲಂಘಟನೆ ಮಾಡಿ ಮಾಜಿ ಕಾರ್ಪೋರೆಟರ್​​ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಮಾಜಿ ಪಾಲಿಕೆ ಸದಸ್ಯ ಅಲ್ತಾಫ್ ಕಿತ್ತೂರ ತಮ್ಮ ಬೆಂಬಲಿಗರೊಂದಿಗೆ ಬರ್ತ್ ಡೇ ಆಚರಣೆ ಮಾಡಿದ್ದು, ಈ ವೇಳೆ ಕೊರೊನಾ ನಿಯಮ ಗಾಳಿಗೆ ತೂರಿ ಸಂಭ್ರಮಾಚರಣೆ ಮಾಡಿದ್ದಾರೆ. ಹಳೆ ಹುಬ್ಬಳ್ಳಿಯ ಮಸೀದಿಯಲ್ಲಿ ಬತ್೯ಡೇ ಸೆಲೆಬ್ರೇಷನ್ ನಡೆದಿದೆ ಎನ್ನಲಾಗಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ನೂರಾರು ಜನ ಮಾಸ್ಕ್​, ಸಾಮಾಜಿಕ ಅಂತರ ಇಲ್ಲದೇ ಕೇಕ್​​ ಕಟ್​​ ಮಾಡಿದ್ದಾರೆ. ಸದ್ಯ ಹುಬ್ಬಳಿಯಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಇಳಿಮುಖವಾಗಿದ್ದರೂ, ಕಠಿಣ ಲಾಕ್​​ಡೌನ್​ ಜಾರಿಯಲ್ಲಿದೆ. ಲಾಕ್ ಡೌನ್​​​ನಲ್ಲೂ ಸರ್ಕಾರದ ನಿಯಮ ಗಾಳಿಗೆ ತೂರಿ ಮಾಜಿ ಕಾರ್ಪೋರೆಟರ್ ಹುಟ್ಟುಹಬ್ಬ ಆಚರಣೆ ಮಾಡಿರುವುದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

The post ಕೊರೊನಾ ನಿಯಮ ಗಾಳಿಗೆ ತೂರಿ ಅಲ್ತಾಫ್ ಕಿತ್ತೂರ್ ಬರ್ತ್​​​ಡೇ ಸೆಲೆಬ್ರೇಷನ್ appeared first on News First Kannada.

Source: newsfirstlive.com

Source link