ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್‌ನ ಎರಡನೇ ತಾಂಡವವಾಡುತ್ತಿದ್ದು, ಸೋಂಕಿತರು ಹಾಗೂ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಸಮನ್ವಯದಿಂದ ಕಾರ್ಯ ನಿರ್ವಹಿಸಿ ಜನರ ನೆರವಿಗೆ ಆಗಮಿಸಬೇಕಿದ್ದ ಸಚಿವರೇ ಸಿಎಂ ಬಿಎಸ್​​ ಯಡಿಯೂರಪ್ಪ ಎದುರೇ ಟಾಕ್​​ವಾರ್​ ನಡೆಸಿದ್ದಾರೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ಲಭಿಸಿದೆ.

ಇಷ್ಟು ದಿನ ತೆರೆಮರೆಯಲ್ಲಿ ನಡೆಯುತ್ತಿದ್ದ ಅಸಮಾಧಾನ ಸಿಎಂ ಸಮ್ಮುಖದಲ್ಲೇ ಬಹಿರಂಗವಾಗಿದ್ದು, ಡಿಸಿಎಂ ಡಾ. ಸಿ.ಎನ್​​ ಅಶ್ವಥ್​​ನಾರಾಯಣ್ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ನಡುವೆ ಟಾಕ್ ವಾರ್ ನಡೆದಿದೆಯಂತೆ.

ಏನಿದು ಟಾಕ್ ವಾರ್?
ಸಿಎಂ ನಿವಾಸದಲ್ಲಿ ಬಿಎಸ್​ವೈ ಅವರು ಸಚಿವರು ಹಾಗೂ ಅಧಿಕಾರಿಗಳೊಂದಿಗೆ ಕೋವಿಡ್​ ರಿವ್ಯೂ ಸಭೆ ನಡೆಸಿದ ಸಂದರ್ಭದಲ್ಲಿ ಘಟನೆ ನಡೆದಿದೆ. ನ್ಯೂಸ್‌ಫಸ್ಟ್​ಗೆ ಡಿಸಿಎಂ V/s ಸಚಿವರ ನಡುವೆ ನಡೆದ ಟಾಕ್ ವಾರ್‌ನ ಕಂಪ್ಲೀಟ್ ಇನ್​​ಸೈನ್ ಮಾಹಿತಿ ಲಭ್ಯವಾಗಿದೆ. ಸಭೆಗೆ ಆಗಮಿಸುತ್ತಿದಂತೆ ಡಿಸಿಎಂ ಅಶ್ವತ್ಥ್​ ನಾರಾಯಣ್ ಅವರು ಸಭೆಗೆ ಆಗಮಿಸುತ್ತಿದಂತೆ ಆರೋಗ್ಯ ಸಚಿವರ ವಿರುದ್ಧ ಅಸಮಾಧಾನ ಹೊರಹಾಕಿದ್ದರು ಎನ್ನಲಾಗಿದೆ.

ಡಿಸಿಎಂ ಅಶ್ವತ್ಥ್‌ನಾರಾಯಣ್: ಸಾಹೇಬ್ರೇ, ನಾವು ಬೆಂಗಳೂರಿನಲ್ಲಿ ತಲೆ ಎತ್ಕೊಂಡು ಓಡಾಡೋಕೆ ಆಗ್ತಾಯಿಲ್ಲ. ಎರಡನೇ ಆಲೆ ಇಷ್ಟು ವ್ಯಾಪಕವಾಗಿ ಹರಡೋಕೆ ಡಾ.ಕೆ. ಸುಧಾಕರ್‌ ಕಾರಣ.

ಡಾ.ಕೆ.ಸುಧಾಕರ್: Shut up.

ಡಿಸಿಎಂ ಅಶ್ವತ್ಥ್‌ನಾರಾಯಣ್: You Shut Up.

ಡಿಸಿಎಂ ಅಶ್ವತ್ಥ್‌ನಾರಾಯಣ್: ನಾನೊಬ್ಬ ಉಪ-ಮುಖ್ಯಮಂತ್ರಿ. ಡಿಸಿಎಂ ಬಗ್ಗೆಯೇ ಹೇಗೆ ಮಾತು ಆಡ್ತ್ಯಾ?

ಸಿಎಂ ಯಡಿಯೂರಪ್ಪ: (ಇಬ್ಬರು ಏರು ದನಿಯಲ್ಲಿ ಮಾತನ್ನಾಡಿದ್ದನ್ನು ಕಂಡು) ಸಮಾಧಾನ ಮಾಡಿಕೊಳ್ಳಿ ಇಬ್ಬರು. ಇದು ಜಗಳವಾಡುವ ಸಂದರ್ಭ ಅಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ನಮ್ಮಲ್ಲಿ Difference ಬೇಡ. ಮೊದಲು ನಾವು ಸಂಕಷ್ಟದಿಂದ ಹೊರ ಬರಬೇಕು. ಈ ಸಂದರ್ಭದಲ್ಲಿ ಜಗಳ ಮಾಡಿಕೊಳ್ಳುವುದು ಸರಿಯಲ್ಲ. ಡಿಸಿಎಂ ಅಶ್ವತ್ಥ್‌ನಾರಾಯಣ್ ಹಾಗೂ ಸಚಿವ ಸುಧಾಕರ್‌‌ರನ್ನು ಸಮಾಧಾನ ಮಾಡಿಕೊಳ್ಳಿ ಎಂದು ಇಬ್ಬರನ್ನು ಸಮಾಧಾನಪಡಿಸಿದರು.

ಸಿಎಂ ಸರ್ಕಾರಿ ನಿವಾಸ ಕವೇರಿಯಲ್ಲಿ ನಡೆದ ಸಭೆಯಲ್ಲಿ ಕಂದಾಯ ಸಚಿವ ಆರ್​.ಅಶೋಕ್​​, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಆರೋಗ್ಯ ಇಲಾಖೆಯ ಹಲವು ಅಧಿಕಾರಿಗಳು ಭಾಗಿಯಾಗಿದ್ದರು.

The post ಕೊರೊನಾ ನಿರ್ವಹಣೆಯಲ್ಲಿ ಸರ್ಕಾರ ವಿಫಲ; ಬಾಯ್ಮುಚ್ಚು ಅಂತ ಸಿಎಂ ಎದುರೇ ಸಚಿವರ ಕಿತ್ತಾಟ appeared first on News First Kannada.

Source: newsfirstlive.com

Source link