ಹೈದರಾಬಾದ್: ಮೃಗಾಲಯದಲ್ಲಿನ 8 ಸಿಂಹಗಳಲ್ಲಿ ಕೊರೊನಾ ಸೋಂಕು ತಗುಲಿರೋದು ಈ ಹಿಂದೆ ವರದಿಯಾಗಿತ್ತು.  ಇದೀಗ, ಆ ಎಲ್ಲಾ 8 ಸಿಂಹಗಳಿಗೂ ಕೊರೊನಾ ನೆಗೆಟಿವ್​ ಬಂದಿದೆ.

ಹೈದರಾಬಾದ್​ನ ನೆಹರು ಜೂಲಾಜಿಕಲ್ ಪಾರ್ಕ್​​ನ 8 ಏಷ್ಯಾಟಿಕ್ ಸಿಂಹಗಳಿಗೆ ಏಪ್ರಿಲ್​ನಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತ್ತು.  ಹೀಗಾಗಿ ಮೃಗಾಲಯದ 4 ಹೆಣ್ಣು ಮತ್ತು 4 ಗಂಡು ಸಿಂಹಗಳ ಮಾದರಿಯನ್ನು ಸಿಸಿಎಂಬಿ (Centre for Cellular and Molecular Biology)ಗೆ ಪರೀಕ್ಷೆಗೆಂದು ಕಳುಹಿಸಲಾಗಿತ್ತು. ಆರ್​​ಟಿಸಿಪಿಆರ್ ಪರೀಕ್ಷೆಯಲ್ಲಿ ಸಿಂಹಗಳಿಗೆ ಕೊರೊನಾ ಪಾಸಿಟಿವ್ ಎಂದು ವರದಿಯಾಗಿತ್ತು. ಇಂದು, ಎಲ್ಲಾ 8 ಸಿಂಹಗಳಿಗೂ ಕೊರೊನಾ ನೆಗೆಟಿವ್​ ಬಂದಿದೆ ಅಂತ ಎನ್ನಲಾಗಿದೆ.

The post ಕೊರೊನಾ ಪಾಸಿಟಿವ್​ ಆಗಿದ್ದ 8 ಸಿಂಹಗಳೂ ಕೊರೊನಾದಿಂದ ಗುಣಮುಖ appeared first on News First Kannada.

Source: newsfirstlive.com

Source link