ಕೆಲ ದಿನಗಳ ಹಿಂದಷ್ಟೆ ಟಾಲಿವುಡ್​ ನಟ ಜ್ಯೂನಿಯರ್​ NTRಗೆ ಕೊರೊನಾ ದೃಢಪಟ್ಟಿತ್ತು. ಈ ಬಗ್ಗೆ ಟ್ವೀಟ್​ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದ ತಾರಕ್​ ಇದೀಗ ಮತ್ತೊಮ್ಮೆ ಪತ್ರದ ಮೂಲಕ ಮತ್ತೊಂದು ಸಂದೇಶ ನೀಡಿದ್ದಾರೆ. ಮೇ 20ನೇ ತಾರೀಖು ಅಂದ್ರೆ ನಾಳೆ ಜ್ಯೂನಿಯರ್​ NTRಗೆ 38ನೇ ಹುಟ್ಟುಹಬ್ಬ. ತಮ್ಮ ಪತ್ರದಲ್ಲಿ, ‘ಈ ಬಾರಿ ಹುಟ್ಟುಹಬ್ಬ ಆಚರಿಸೋದಿಲ್ಲ. ಈ ಬಾರಿ ಎಲ್ಲರೂ ಮನೆಯಲ್ಲಿಯೇ ಸೇಫಾಗಿದ್ದು ಲಾಕ್​ಡೌನ್​ ನಿಯಮಗಳನ್ನ ಪಾಲಿಸಿದ್ರೆ ಅದೇ ನನಗೆ ದೊಡ್ಡ ಗಿಫ್ಟ್’​ ಅಂತ ತಿಳಿಸಿದ್ದಾರೆ.

‘ನನ್ನ ಆರೋಗ್ಯ ವಿಚಾರಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಗೆ ನಾನೆಂದೂ ಚಿರಋಣಿ. ನಿಮ್ಮಲ್ಲರ ಮೆಸೇಜ್​, ವಿಡಿಯೋಗಳು ಹಾಗೂ ವಿಶ್​​ಗಳನ್ನ ನೋಡಿದ್ದೇನೆ. ನಿಮ್ಮೆಲ್ಲರ ಪ್ರಾರ್ಥನೆ ನನ್ನನ್ನ ಕಾಪಾಡಿದೆ. ನಾನು ಈಗ ಸುಧಾರಿಸಿಕೊಳ್ತಿದ್ದೇನೆ, ಆದಷ್ಟು ಬೇಗ ನೆಗೆಟಿವ್​ ರಿಪೋರ್ಟ್​ ಪಡೆದುಕೊಳ್ಳಲು ಎದುರು ನೋಡ್ತಿದ್ದೇನೆ. ಸದ್ಯ ನಮ್ಮ ದೇಶ ಕೊರೊನಾ ವಿರುದ್ಧ ಹೋರಾಟದಲ್ಲಿ ನಿರತವಾಗಿದೆ.

ನಮ್ಮ ಮೆಡಿಕಲ್​ ಸಿಬ್ಬಂದಿ ಹಾಗೇ ಪ್ರಂಟ್​ಲೈನ್ ಕಾರ್ಮಿಕರು ಎಲ್ಲೂ ನಿಲ್ಲದೇ ತಮ್ಮ ಕಾರ್ಯವನ್ನ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದಾರೆ. ಅದೆಷ್ಟೋ ಜನ ಅವರ ಮನೆಯವರು, ಪ್ರೀತಿ ಪಾತ್ರರನ್ನ ಕಳೆದುಕೊಂಡಿದ್ದಾರೆ. ಇದು ಸೆಲೆಬ್ರೇಟ್​ ಮಾಡುವ ಸಮಯವಲ್ಲ. ನೆರವಿಗೆ ಎದುರು ನೋಡ್ತಿರುವವರಿಗೆ ಜೊತೆಯಾಗಿ ನಿಲ್ಲುವ ಸಂದರ್ಭವಿದು. ನಿಮ್ಮ ಮನೆಯವರು ಹಾಗೇ ಪ್ರೀತಿ ಪಾತ್ರರನ್ನ ಚೆನ್ನಾಗಿ ನೋಡಿಕೊಳ್ಳಿ. ಕೋವಿಡ್​ ವಿರುದ್ಧದ ಈ ಯುದ್ಧ ಗೆದ್ದ ಮೇಲೆ ಎಲಲ್ರೂ ಒಟ್ಟಿಗೆ ಸಂಭ್ರಮಿಸೋಣ. ಈ ಬಾರಿ ಹುಟ್ಟುಹಬ್ಬ ಆಚರಿಸೋದಿಲ್ಲ. ಈ ಬಾರಿ ಎಲ್ಲರೂ ಮನೆಯಲ್ಲಿಯೇ ಸೇಫಾಗಿದ್ದು ಲಾಕ್​ಡೌನ್​ ನಿಯಮಗಳನ್ನ ಪಾಲಿಸಿದ್ರೆ ಅದೇ ನನಗೆ ದೊಡ್ಡ ಗಿಫ್ಟ್’.

ಜ್ಯೂನಿಯರ್​ NTR, ನಟ.

ಸದ್ಯ ಕೊರೊನಾ ಪಾಸಿಟಿವ್​ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ತಾರಾಕ್, ಇತ್ತೀಚೆಗಷ್ಟೆ ಕನ್ನಡದಲ್ಲಿ ಮಾತನಾಡಿ ಇಡೀ ದೇಶದ ಜನತೆಗೆ ಕೊರೊನಾ ವಿರುದ್ಧ ಸುರಕ್ಷಿತಾ ಕ್ರಮಗಳನ್ನ ಪಾಲಿಸುವಂತೆ ಮನವಿ ಮಾಡಿದ್ದರು.

The post ಕೊರೊನಾ ಪಾಸಿಟಿವ್​ ಆಗಿದ್ದ ಜೂ.NTR ರಿಂದ ಅಭಿಮಾನಿಗಳಿಗೆ ಮನವಿ ಪತ್ರ appeared first on News First Kannada.

Source: newsfirstlive.com

Source link