ಬೆಂಗಳೂರು: ನಗರದಲ್ಲಿ ಕೊರೊನಾ ಟೆಸ್ಟ್ ಮಾಡಿಸಿಕೊಂಡ ಸುಮಾರು 3,000 ಮಂದಿ ತಮಗೆ ಕೊರೊನಾ ಪಾಸಿಟಿವ್ ಅಂತ ಗೊತ್ತಾಗ್ತಿದ್ದಂತೆಯೇ ನಾಪತ್ತೆಯಾಗಿದ್ದಾರೆ ಅಂತ ಇತ್ತೀಚೆಗೆ ಸರ್ಕಾರ ಹೇಳಿತ್ತು. ಇದೀಗ ನಾಪತ್ತೆಯಾದ ಸೋಂಕಿತರನ್ನ ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ.

ನೀವು ಯಾವ ಮೂಲೆಯಲ್ಲಿ ಅಡಗಿದ್ರೂ ಪೊಲೀಸರು ನಿಮ್ಮನ್ನ ಹುಡುಕಿ ತರ್ತಾರೆ. ಪಾಸಿಟಿವ್ ಬಂದ ತಕ್ಷಣ ಫೋನ್ ಸ್ವಿಚ್ ಆಫ್ ಮಾಡಿಕೊಂಡು, ಮನೆ ಖಾಲಿ ಮಾಡಿಕೊಂಡು ನಾಪತ್ತೆಯಾಗಿರೋರನ್ನ ಹುಡುಕಲು ಪೊಲೀಸರು ಸಂಪೂರ್ಣ ತಯಾರಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ನೀಡಿದ ಪಟ್ಟಿ ಇಟ್ಟುಕೊಂಡು ಪೊಲೀಸರು ಕಾರ್ಯಾಚರಣೆ ನಡೆಸಲಿದ್ದಾರೆ. ಈ ಲಿಸ್ಟ್ ಈಗಾಗಲೇ ಆಯಾ ಪೊಲೀಸ್ ಠಾಣೆಗೆ ರವಾನೆಯಾಗಿದ್ಯಂತೆ.

ಹೇಗೆ ನಡೆಯುತ್ತೆ ನಾಪತ್ತೆಯಾದವರ ಸರ್ಚಿಂಗ್..?

  • ಪ್ರತಿ ಠಾಣಾ ವ್ಯಾಪ್ತಿಯ ವಿಳಾಸದ ಮೂಲಕ ಪೊಲೀಸರು ಸೋಂಕಿತರ ಸರ್ಚಿಂಗ್ ಮಾಡ್ತಾರೆ.
  • ಟೆಸ್ಟ್ ವೇಳೆ ನೀಡಿರುವ ಫೋನ್ ನಂಬರ್​ಗಳನ್ನ ಟ್ರೇಸ್ ಮಾಡೋ ಮೂಲಕವೂ ಸೋಂಕಿತರನ್ನ ಹಿಡಿದು ತರಲು ಪೊಲೀಸರು ಮುಂದಾಗಿದ್ದಾರೆ.
  • ಒಂದು ವೇಳೆ ಫೋನ್ ಸ್ವಿಚ್ ಆಫ್ ಆಗಿದ್ರೆ ರೋಗಿ ನೀಡಿರುವ ವಿಳಾಸದಲ್ಲಿ ಹುಡುಕಾಟ ನಡೆಯುತ್ತೆ.
  • ಏರಿಯಾ, ಮನೆಗಳಲ್ಲಿ ಸೋಂಕಿತರ ಹುಡುಕಾಟ ನಡೆಸಲು ಪೊಲೀಸರು ಮುಂದಾಗಿದ್ದಾರೆ.
  • ಅಲ್ಲದೇ ಫೋನ್ ಸಿಡಿಆರ್ ಅಥವಾ ಟವರ್ ಲೋಕೇಷನ್ ಆಧಾರದ ಮೇಲೂ ಪೊಲೀಸರ ಸರ್ಚಿಂಗ್ ನಡೆಯಲಿದೆ.

ಹೇಗೆಲ್ಲಾ ಯಾಮಾರಿಸಿದ್ದಾರೆ ಗೊತ್ತಾ..?

  • ಟೆಸ್ಟ್​ ಮಾಡಿಸಿಕೊಂಡ ಬಹುತೇಕ ಮಂದಿ ರಾಂಗ್ ನಂಬರ್​ಗಳನ್ನ ಕೊಟ್ಟಿದ್ದಾರಂತೆ.
  • ಕೆಲವರು ಒಂದು ನಂಬರ್​ ಕಡಿಮೆ ಕೊಟ್ಟಿದ್ದು ಅವರನ್ನ ಸಂಪರ್ಕಿಸಲು ಸಾಧ್ಯವಾಗ್ತಿಲ್ಲ
  • ಕೆಲವರು ತಮ್ಮ ವಿಳಾಸವನ್ನ ಸಂಪೂರ್ಣವಾಗಿ ಬರೆದಿಲ್ಲ.. ಇನ್ನೂ ಕೆಲವ್ರು ತಪ್ಪು ಅಡ್ರೆಸ್ ಕೊಟ್ಟಿದ್ದಾರೆ.
  • ತಮಗೆ ಮೆಸೇಜ್ ಬಂದ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ.
  • ಮತ್ತೂ ಕೆಲವರು ಪಾಸಿಟಿವ್ ಬರುತ್ತಿದ್ದಂತೆಯೇ ಮನೆಯನ್ನೇ ಖಾಲಿ ಮಾಡಿ ಬೇರೆಡೆ ಹೋಗಿದ್ದಾರೆ.

ನ್ಯೂಸ್​ಫಸ್ಟ್​ ಕಳಕಳಿ
ಕೊರೊನಾದಿಂದ ರಕ್ಷಿಸಿಕೊಳ್ಳಲು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

The post ಕೊರೊನಾ ಪಾಸಿಟಿವ್ ಬರುತ್ತಲೇ ನಾಪತ್ತೆಯಾದವ್ರೇ.. ನೀವು ಯಾವ ಮೂಲೇಲಿದ್ರೂ ಹುಡುಕಿ ತರ್ತಾರೆ ಪೊಲೀಸ್ appeared first on News First Kannada.

Source: newsfirstlive.com

Source link