ಕೊರೊನಾ ಬಂದಾಗ ಮನೆಯಲ್ಲೇ ಇದ್ರೆ ಸೇಫ್ ಅಂದುಕೊಂಡಿದ್ದೀರಾ..? ಈ ಅಂಕಿ-ಅಂಶ ನೋಡಿ

ಕೊರೊನಾ ಬಂದಾಗ ಮನೆಯಲ್ಲೇ ಇದ್ರೆ ಸೇಫ್ ಅಂದುಕೊಂಡಿದ್ದೀರಾ..? ಈ ಅಂಕಿ-ಅಂಶ ನೋಡಿ

ಬೆಂಗಳೂರು: ಕೊರೊನಾ ಸೋಂಕು ತಗುಲಿದ್ರೆ ಅದ್ರಲ್ಲೂ ನಾವು ಮನೆಯಲ್ಲೇ ಇರ್ತೀವಿ.. ಮನೆಯಲ್ಲೇ ನಾವು ಎಲ್ಲವನ್ನ ಸರಿ ಮಾಡಿಕೊಳ್ತೀವಿ ಅಂತ ನೀವೇನಾದ್ರೂ ಪ್ಲಾನ್​ ಮಾಡಿಕೊಳ್ತಿದ್ರೆ ಎಚ್ಚರ. ಯಾಕಂದ್ರೆ ಮನೆಯಲ್ಲೇ ಇದ್ದು, ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಪ್ರಮಾಣ ಕೇಳಿದ್ರೆ ಶಾಕ್​ ಆಗುವಂತಿದೆ.

ಮನೆಯಲ್ಲೇ ಐಸೋಲೇಶನ್​ನಲ್ಲಿದ್ದು ಸಾವಿಗೀಡಾದವರ ಸಂಖ್ಯೆ ಸಾವಿರದ ಸಮೀಪದಲ್ಲಿದೆ. ಕೇವಲ ಒಂದೂವರೆ ತಿಂಗಳಲ್ಲಿ ಅಂದ್ರೆ ಮೇ 1 ರಿಂದ ಜೂನ್ 15ರವರೆಗೆ 910 ಜನ ಸಾವನ್ನಪ್ಪಿದ್ದಾರೆ.

ಬಿಬಿಎಂಪಿ ಡೆತ್ ಆಡಿಟ್​ನಲ್ಲಿ ಸೋಂಕಿತರ ಸಾವಿನ ವಿವರ ಹೀಗಿದೆ..

* ಯಾವುದೇ ಖಾಯಿಲೆಗಳಿಲ್ಲದೆ ಆರೋಗ್ಯವಾಗಿದ್ದ 410 ಸೋಂಕಿತರು ಸಾವು

* ಅನ್ಯ ಖಾಯಿಲೆಗಳಿದ್ದು ಸೋಂಕಿತರಾಗಿ ಹೋಂ ಐಸೋಲೇಶನ್​ನಲ್ಲಿದ್ದ 500 ಮಂದಿ ಸಾವು

* ವೈದ್ಯರನ್ನು ತಲುಪುವುದು ವಿಳಂಬವಾದ ಕಾರಣ 333 ಸೋಂಕಿತರು ದಾರಿ ಮಧ್ಯೆ ಸಾವು

* ಆಸ್ಪತ್ರೆಗೆ ದಾಖಲಿಸಲು ನಿರಾಕರಿಸಿದ ಕಾರಣ 475 ಮಂದಿ ಸಾವು

* ಐಸಿಯು, ವೆಂಟಿಲೇಟರ್ ಬೆಡ್​ಗಳು ಸಮಯಕ್ಕೆ ಸರಿಯಾಗಿ ಸಿಗದೆ 365 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ

The post ಕೊರೊನಾ ಬಂದಾಗ ಮನೆಯಲ್ಲೇ ಇದ್ರೆ ಸೇಫ್ ಅಂದುಕೊಂಡಿದ್ದೀರಾ..? ಈ ಅಂಕಿ-ಅಂಶ ನೋಡಿ appeared first on News First Kannada.

Source: newsfirstlive.com

Source link