ಮಕ್ಕಳಾಗಿದ್ದಾಗಲೇ ಎಲ್ಲರೂ ಈ ಒಂದು ಕತೆಯನ್ನ ಕೇಳಿರ್ತೀರಾ. ಆದ್ರೆ ದೊಡ್ಡವರಾಗ್ತಿದ್ದಂತೇ ಅದೆಲ್ಲವೂ ಕಥೆಯಾಗಿ ಕೆಳೋದಕ್ಕೇ ಸೂಕ್ತ, ಜೀವನದಲ್ಲಿ ಅಳವಡಿಸೋಕೆ ಆಗಲ್ಲ ಅನ್ನೋದನ್ನ ನಾವೇ ನಿರ್ಧಾರ ಮಾಡಿ ಬಿಟ್ತೀವಿ. ಸದ್ಯ ನಟ ಉಪೇಂದ್ರ ಆ ಒಂದು ಕಥೆಯನ್ನ ಮತ್ತ ಹೇಳಿ ಎಲ್ಲರಲ್ಲೂ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಕೊರೊನಾ ಅನ್ನೋದು ಭಯ, ಅದನ್ನ ಓಡಿಸೋಕೆ ನಮ್ಮಲ್ಲಿ ಮೊದಲು ಧೈರ್ಯ ಬೇಕು ಅನ್ನೋ ಮಾತು ಹೇಳಿದ್ದಾರೆ. ಅಂದ್ಹಾಗೇ ಉಪ್ಪಿ ಹೇಳಿದ ಕಥೆಯಲ್ಲಿ ಆಗೋದೆಲ್ಲಾ ಒಳ್ಳೆಯದಕ್ಕೆ, ಈ ಕೊರೊನಾದಿಂದಲೂ ಸ್ವಲ್ಪನಾದ್ರೂ ಒಳ್ಳೆಯದು ಆಗಿದೆ ಅನ್ನೋ ನಟ ಉಪೇಂದ್ರ ಮಾತು.

ಕೊರೊನಾ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಟ ಉಪೇಂದ್ರ, ರಾಜ, ಮಂತ್ರಿ ಹಾಗೂ ಬೆರಳಿನ ಕಥೆಯನ್ನ ಜನರಿಗೆ ಮತ್ತೆ ನೆನಪಿಸಿದ್ದಾರೆ. ಈ ಕಥೆಯಂತೆಯೇ ಎಲ್ಲರೂ ಆಗೋದೆಲ್ಲಾ ಒಳ್ಳೆಯದಕ್ಕೆ ಅಂತ ನಂಬಿ ಬದುಕೋದು ಉತ್ತಮ. ಆಗಲೇ ನಾವೆಲ್ಲರೂ ಧೈರ್ಯವಾಗಿ ಎಲ್ಲವನ್ನೂ ಎದುರಿಸಬಹುದು ಅಂದಿದ್ದಾರೆ.

‘ರಾಜ ಬೇಟೆಗೆ ಹೋಗ್ತಾ ಸೈನಿಕರನ್ನ ಬಿಟ್ಟು ಜಿಂಕೆಯ ಹಿಂದೆ ಕಾಡಿನೊಳಗೆ ಹೋಗ್ಬಿಡ್ತಾನೆ. ಆ ಜಿಂಕೆ ಅಂತೂ ಸಿಗೋದಿಲ್ಲ. ಕೊನೆಗೆ ರಾಜ ಕಾಡು ಮನುಷ್ಯರ ಕೈಯಲ್ಲಿ ಸಿಕ್ಕಿ ಹಾಕೊಳ್ತಾನೆ. ಕಾಡು ಮನುಷ್ಯರೆಲ್ಲಾ ರಾಜನನ್ನ ಕಟ್ಟಿಹಾಕಿ ದೇವರಿಗೆ ಬಲಿ ಕೊಡ್ಬೇಕು ಅಂದಾಗ, ರಾಜನ ಕೈಬೆರಳು ತುಂಡಾಗಿರೋದು ಗೊತ್ತಾಗುತ್ತೆ. ಅಯ್ಯೋ ರಾಜ ಅಂಗವಿಕಲ ಅಂತ ಬಿಟ್ಟುಬಿಡ್ತಾರೆ. ಖುಷಿಯಾದ ರಾಜ ಅರಮನೆಗೆ ಬಂದವನೇ ತಾನು ಜೈಲಿಗಟ್ಟಿದ್ದ ಮಂತ್ರಿಯನ್ನ ಬಿಡುಗಡೆ ಮಾಡಿ ಅವನ ಕಾಲಿಗೆ ಬೀಳ್ತಾನೆ. ಆಗೋದೆಲ್ಲಾ ಒಳ್ಳೆಯದಕ್ಕೆ ಅಂತ ಎಂಥಾ ಒಳ್ಳೆಯ ಮಾತು ನೀನು ಆವತ್ತು ಹೇಳಿದ್ದೆ. ಇವತ್ತು ನನ್ನ ಕೈಬೆರಳು ಇರ್ತಿದ್ರೆ ಜೀವನೇ ಉಳಿಯುತ್ತಿರಲಿಲ್ಲ. ನಿನ್ನ ಜೈಲಿಗಟ್ಟಿದ್ದಕ್ಕೆ ಕ್ಷಮಿಸಿಬಿಡು. ಆದ್ರೆ ಆಗಲೂ ಮಂತ್ರಿ ಆಗೋದೆಲ್ಲಾ ಒಳ್ಳೆಯದಕ್ಕೆ ಅಂತಾನೆ. ಅರೇ ಜೈಲಿಗೆ ಹಾಕಿದ್ದೂ ಒಳ್ಳೆಯದಕ್ಕೆ ಅಂತಾನಲ್ಲ ಇವನು ಅಂತ ರಾಜ ಅಂದುಕೊಳ್ತಾನೆ. ಆಗ ಮಂತ್ರಿ, ನೀವು ನನ್ನ ಜೈಲಿಗೆ ಹಾಕಿಲ್ಲ ಅಂತಿದ್ರೆ ನಾನೂ ನಿಮ್ಮ ಜೊತೆ ಭೇಟೆಗೆ ಬರ್ತಿದ್ದೆ. ಆಗ ನನ್ನನ್ನೂ ಕಾಡು ಮನುಷ್ಯರು ಹಿಡಿತಿದ್ರು. ನನಗೆ ಎಲ್ಲಾ ಅಂಗಾಗಳೂ ಚೆನ್ನಾಗಿರೋದ್ರಿಂದ ನನ್ನ ಬಲಿ ಕೊಡ್ತಿದ್ರು. ಆದ್ರೆ ಇಂದು ನಾನು ಬದುಕಿರೋದಕ್ಕೆ ಕಾರಣ ನೀವು ನನ್ನ ಜೈಲಿಗೆ ಹಾಕಿರೋದು.

ಸೋ..ಇದೇ ಥರ ಆಗೋದೆಲ್ಲಾ ಒಳ್ಳೆಯದಕ್ಕೆ ಅಂತ ಅಂದುಕೊಂಡೇ ನಾವು ಜೀವನದಲ್ಲಿ ಮುಂದೆ ಸಾಗಬೇಕು. ಇದೂ ಒಂದು ಕಾಲ. ಈ ಕೋವಿಡ್​ನಿಂದ ಸ್ವಲ್ಪ ಪಾಸಿಟಿವ್​ ಆಗಿ ಯೋಚನೆ ಮಾಡಿದ್ರೆ, ಏನೋ ಒಂದು ಒಳ್ಳೆಯದು ಕುಡ ಆಗ್ತಿದೆ. ಏನಂದ್ರೆ, ಜನ ಹಳ್ಳಿ ಕಡೆ ಹೋಗ್ತಿದ್ದಾರೆ. ಹಳ್ಳಿಯಲ್ಲಿ ಜೀವನ ಕಟ್ಕೊಳ್ತಿದ್ದಾರೆ. ಸಿಟಿಯಲ್ಲಿ ಪಲ್ಯೂಷನ್​ ಕಡಿಮೆಯಾಗ್ತಿದೆ. ಒಂದೇ ಒಂದು ಕೆಟ್ಟದ್ದು ಅಂದ್ರೆ ಅದು ಭಯ. ಆ ಭಯ ಅನ್ನೋದು ಇರಬಾರದು. ನನ್ನ ಪ್ರಕಾರ ಭಯನೇ ಕೊರೊನಾ. ವ್ಯಾಕ್ಸಿನೇಷನ್​ಯೇ ಧೈರ್ಯ. ವ್ಯಾಕ್ಸಿನೇಷನ್​ ತಗೊಳ್ಳೋ ಮುಂಚೆನೂ ನಮಗೆ ಧೈರ್ಯ ಇರಬೇಕು. ಹಾಗಂತ ಆಲಸ್ಯವಾಗಿರಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್​ ಹಾಕೊಳ್ಳಿ, ಶುಚಿಯಾಗಿರಿ. ಎಲ್ಲರಿಗೂ ಒಳ್ಳೆಯದಾಗುತ್ತೆ’ ಅಂತ ಕೊರೊನಾ ಬಗ್ಗೆ ಮತ್ತೆ ಮತ್ತೆ ಜನರಲ್ಲಿ ಜಾಗೃತಿ ಮುಡಿಸುವ ಕೆಲಸವನ್ನ ನಟ ರಿಯಲ್​ ಸ್ಟಾರ್​ ಉಪೇಂದ್ರ ಮಾಡುತ್ತಿದ್ದಾರೆ.

The post ಕೊರೊನಾ ಬಗ್ಗೆ ರಾಜ, ಬೆರಳು, ಮಂತ್ರಿ ಕಥೆ ಮೂಲಕ ಉಪೇಂದ್ರ ಹೇಳಿದ ಸಿಕ್ರೇಟ್ ಏನ್ ಗೊತ್ತಾ? appeared first on News First Kannada.

Source: newsfirstlive.com

Source link