ಬೆಳಗಾವಿ: ಕೊರೊನಾ ಗ್ರಾಮೀಣ ಭಾಗದಲ್ಲಿ ಇನ್ನೂ ಕಡಿಮೆಯಾಗಿಲ್ಲ. ‌ಕೊರೊನಾ ಮಹಾಮಾರಿ ಹೋಗಲಾಡಿಸುವಂತೆ ಹಲವು ಕಡೆ ಭಗವಂತನ ಸ್ಮರಣೆ ಮಾಡುತ್ತಿದ್ದಾರೆ. ಕೊರೊನಾ ಮಾರಿಯಿಂದ ಮುಕ್ತವಾಗಬೇಕು ಎಂದು ಗಿರಿಯಾಲ ಗ್ರಾಮಸ್ಥರು ಭಜನೆ ಮಾಡಿದರು.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಗಿರಿಯಾಲ ಕೆ.ಬಿ ಎಂಬ ಗ್ರಾಮದಲ್ಲಿ ಕೊರೊನಾ ಹೋಗಲಾಡಿಸಲು ಊರಿನ ಜನರು ಶ್ರೀ ವೆಂಕಟೇಶ್ವರನ ಪರಮ ಭಕ್ತನಾದ ಶ್ರೀ ಶರಣ ಅಜ್ಜರ ಭಾವಚಿತ್ರವನ್ನು ಇಡೀ ಊರಿನಲ್ಲಿ ಮೆರವಣಿಗೆ ಮಾಡಿದರು.

ಎತ್ತಿನಗಾಡಿಯಲ್ಲಿ ಶರಣರ ಭಾವಚಿತ್ರ ಇಟ್ಟು ಮೆರವಣಿಗೆ ಮಾಡಿ ಭಕ್ತರಿಗೆ ದರ್ಶನ ಮಾಡಿಸಿದ್ರು. ಮಹಾಮಾರಿ ಕೊರೊನಾವನ್ನು ಆದಷ್ಟು ಬೇಗ ಹೋಗಲಾಡಿಸಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ರು. ಅಷ್ಟೇ ಅಲ್ಲ ಊರಿನ ತುಂಬ ಮೆರವಣಿಗೆ ಮಾಡಿ ಭಜನೆ ಮಾಡಿದ್ರು.

The post ಕೊರೊನಾ ಮಾರಿ‌ ಮುಕ್ತವಾಗಲಿ: ಗ್ರಾಮಸ್ಥರಿಂದ ಶರಣ ಅಜ್ಜರ ಭಾವಚಿತ್ರ ಮೆರವಣಿಗೆ, ಭಜನೆ appeared first on Public TV.

Source: publictv.in

Source link