ಗುರುಗ್ರಾಮ: ಕೊರೊನಾ ವ್ಯಾಕ್ಸಿನ್ ಬಗ್ಗೆ ಇರುವ ಅಪನಂಬಿಕೆ ಹಾಗೇ ಉಳಿದುಬಿಟ್ಟಿದೆ. ದಮ್ಮಯ್ಯ ಅಂದರೂ ಕೆಲವರು ಲಸಿಕೆ ಹಾಕಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹರಿಯಾಣದ ಗುರುಗ್ರಾಮದಲ್ಲಿ ವ್ಯಾಕ್ಸಿನೇಷನ್​​ಗೆ ಉತ್ತೇಜನ ನೀಡುವ ಉದ್ದೇಶದಿಂದ ರೆಸ್ಟೋರೆಂಟ್, ಪಬ್​​​ಗಳಲ್ಲಿ ವಿಶೇಷ ಆಫರ್ ನೀಡಲಾಗಿದೆ.

ಯಾರು ಕೊರೊನಾ ವ್ಯಾಕ್ಸಿನ್​ ಪಡೆದುಕೊಂಡಿದ್ದಾರೋ ಅಂತವರಿಗೆ ಇಲ್ಲಿನ ಪಬ್​ ಹಾಗೂ ರೆಸ್ಟೋರೆಂಟ್​ಗಳಲ್ಲಿ ಹೆಚ್ಚಿನ ಡಿಸ್ಕೌಂಟ್ ನೀಡಲಾಗುತ್ತಿದೆ. ವರದಿಗಳ ಪ್ರಕಾರ ಇಲ್ಲಿನ ಸೈಬರ್​ ಸಿಟಿಯಲ್ಲಿರುವ ರೆಸ್ಟೋರೆಂಟ್ ಮತ್ತು ಪಬ್​​ಗಳು ಎರಡು ಡೋಸ್​ ಲಸಿಕೆ ಪಡೆದುಕೊಂಡವರಿಗೆ ಶೇಕಡಾ 50 ರಷ್ಟು ರಿಯಾಯಿತಿ ಹಾಗೂ ಮೊದಲ ಡೋಸ್​ ಪಡೆದುಕೊಂಡವ್ರಿಗೆ ಶೇಕಡಾ 25 ರಷ್ಟು ರಿಯಾಯಿತಿಯನ್ನ ನೀಡುತ್ತಿವೆ ಎನ್ನಲಾಗಿದೆ.

ಇನ್ನು ಇದೇ ಸಿಟಿಯಲ್ಲಿರುವ Ambience ಮಾಲ್​.. ಕೊರೊನಾ ಫ್ರಂಟ್​ಲೈನ್​ ವರ್ಕರ್ಸ್​​ಗೆ ವಿಶೇಷ ಆಫರ್​ಗಳನ್ನ ನೀಡಿದೆ. ಗುರುಗ್ರಾಮ ಜಿಲ್ಲೆಯಲ್ಲಿ ಪ್ರತಿ ದಿನ 30 ಸಾವಿರ ಮಂದಿಗೆ ವ್ಯಾಕ್ಸಿನೇಷನ್ ಮಾಡುವ ಗುರಿಯನ್ನ ಇಟ್ಟುಕೊಳ್ಳಲಾಗಿದೆ.

The post ಕೊರೊನಾ ಲಸಿಕೆ ಹಾಕಿಸಿಕೊಂಡವ್ರಿಗೆ ಇಲ್ಲಿನ ಪಬ್​​​, ರೆಸ್ಟೋರೆಂಟ್​ಗಳಲ್ಲಿ ಬಂಪರ್ ಆಫರ್ appeared first on News First Kannada.

Source: newsfirstlive.com

Source link