ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಒಪ್ಪದ ಟೀಂ ಇಂಡಿಯಾ ಸ್ಟಾರ್ ಆಟಗಾರ! ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಔಟ್ | Murali Vijay refuses to take Covid 19 vaccine pulls out of Syed Mushtaq Ali Trophy


ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಒಪ್ಪದ ಟೀಂ ಇಂಡಿಯಾ ಸ್ಟಾರ್ ಆಟಗಾರ! ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಔಟ್

ಮುರುಳಿ ವಿಜಯ್, ಶಿಖರ್ ಧವನ್

ಭಾರತದ ಬ್ಯಾಟ್ಸ್‌ಮನ್ ಮುರಳಿ ವಿಜಯ್ ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಭಾಗವಹಿಸುತ್ತಿಲ್ಲ. 37 ವರ್ಷದ ವಿಜಯ್ ತಮಿಳುನಾಡು ಪರ ಆಡುತ್ತಿದ್ದಾರೆ. ಆದರೆ, ಈ ಬಾರಿ ಅವರಿಗೆ ಅವಕಾಶ ಸಿಕ್ಕಿಲ್ಲ. ತಂಡದ ಆಯ್ಕೆಗೆ ಆಯ್ಕೆಗಾರರು ವಿಜಯ್ ಹೆಸರನ್ನು ಪರಿಗಣಿಸಿರಲಿಲ್ಲ. ಈ ಅನುಭವಿ ಬ್ಯಾಟ್ಸ್​ಮನ್​ಗೆ ಅವಕಾಶ ಸಿಗದಿರಲು ಮುರಳಿ ವಿಜಯ್ ನಿರ್ಧಾರವೇ ಕಾರಣ. ಕೋವಿಡ್-19 ಲಸಿಕೆ ತೆಗೆದುಕೊಳ್ಳಲು ಮುರಳಿ ವಿಜಯ್ ನಿರಾಕರಿಸಿದ್ದಾರೆ. ಈ ಕಾರಣದಿಂದ ಯಾವುದೇ ಟೂರ್ನಿಯಲ್ಲಿ ಭಾಗವಹಿಸುವುದು ಅವರಿಗೆ ಕಷ್ಟವಾಗಿದೆ.

37 ವರ್ಷದ ಮುರಳಿ ವಿಜಯ್ ಕೋವಿಡ್ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ. ಇದರೊಂದಿಗೆ, ಅವರು ಬಯೋ ಬಬಲ್‌ನಲ್ಲಿರಲು ಒಲ್ಲೆ ಎಂದಿದ್ದಾರೆ ಮತ್ತು BCCI ಯ SOP ಅನ್ನು ಸ್ವೀಕರಿಸಲು ಸಿದ್ಧರಿಲ್ಲ. ಕೊರೊನಾ ವೈರಸ್ ಬಂದ ನಂತರ ಕ್ರಿಕೆಟ್‌ಗೆ ಮರಳಲು ಬಿಸಿಸಿಐ ನಿರ್ಧರಿಸಿತ್ತು. ಅದರ ಫಲವಾಗಿ ಆಟಗಾರರು ಕೋವಿಡ್ -19 ಗಾಗಿ ತಯಾರಿಸಿದ ಲಸಿಕೆಯನ್ನು ಪಡೆಯುವುದು ಕಡ್ಡಾಯವಾಗಿದೆ. ಅದೇ ಸಮಯದಲ್ಲಿ, ಅವರು ಬಯೋ ಬಬಲ್‌ನಲ್ಲಿ ಉಳಿಯುವ ಮೂಲಕ ಕ್ರಿಕೆಟ್ ಆಡಬೇಕಾಗುತ್ತದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಡಳಿಯು ರಾಜ್ಯ ಸಂಘಗಳಿಗೆ ಆದೇಶ ನೀಡಿತ್ತು.

ತಮಿಳುನಾಡು ಆಯ್ಕೆಗಾರರು ವಿಜಯ್ ಹೆಸರನ್ನು ಪರಿಗಣಿಸಿಲ್ಲ
ಟೈಮ್ಸ್ ಆಫ್ ಇಂಡಿಯಾದ ಪ್ರಕಾರ, ಮುರಳಿ ವಿಜಯ್ ಅವರ ನಿರ್ಧಾರದ ಬಗ್ಗೆ ತಮಿಳುನಾಡು ಮಂಡಳಿಯ ಅಧಿಕಾರಿ, ‘ಮುರಳಿ ವಿಜಯ್ ಅವರು ಲಸಿಕೆ ತೆಗೆದುಕೊಳ್ಳಲು ಬಯಸುವುದಿಲ್ಲ ಮತ್ತು ಬಿಸಿಸಿಐ ನಿಯಮಗಳ ಪ್ರಕಾರ, ಆಟಗಾರರಿಗೆ ಲಸಿಕೆ ಹಾಕುವುದು ಅವಶ್ಯಕ. ಇದಲ್ಲದೆ, ಯಾವುದೇ ಪಂದ್ಯಾವಳಿ ಪ್ರಾರಂಭವಾಗುವ ಒಂದು ವಾರದ ಮೊದಲು, ಅವರು ಬಯೋ ಬಬಲ್‌ಗೆ ಸೇರಬೇಕಾಗುತ್ತದೆ ಮತ್ತು ಆ ತಂಡವು ಪಂದ್ಯಾವಳಿಯಲ್ಲಿ ಉಳಿಯುವವರೆಗೆ ಈ ಬಬಲ್‌ನಲ್ಲಿಯೇ ಇರಬೇಕಾಗುತ್ತದೆ. ಆದರೆ ವಿಜಯ್ ಇದಕ್ಕೆ ಸಿದ್ಧರಿರಲಿಲ್ಲ, ಹೀಗಾಗಿ ತಮಿಳುನಾಡು ಕ್ರಿಕೆಟ್ ಸಂಸ್ಥೆ ಅವರ ಹೆಸರಿನಲ್ಲಿ ಆಯ್ಕೆಯನ್ನು ಪರಿಗಣಿಸಲಿಲ್ಲ ಎಂದಿದ್ದಾರೆ.

ಲಸಿಕೆ ತೆಗೆದುಕೊಂಡ ನಂತರವೂ ವಿಜಯ್ ಫಿಟ್ನೆಸ್ ಸಾಬೀತು ಮಾಡಬೇಕಿತ್ತು
ಅದೇ ಸಮಯದಲ್ಲಿ, ಅವರು ಲಸಿಕೆ ತೆಗೆದುಕೊಳ್ಳಲು ಸಿದ್ಧರಿದ್ದರೂ, ತಂಡದಲ್ಲಿ ಸ್ಥಾನ ಪಡೆಯಲು ಈ ವಯಸ್ಸಿನಲ್ಲಿ ಮತ್ತೊಮ್ಮೆ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕು ಎಂದು ಅವರು ಹೇಳಿದರು. ಮುರಳಿ ವಿಜಯ್ ಟೀಮ್ ಇಂಡಿಯಾದಿಂದ ಬಹಳ ದಿನಗಳಿಂದ ಹೊರಗಿದ್ದಾರೆ. ಅವರು 2018 ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದರು. ಅವರು ಆಸ್ಟ್ರೇಲಿಯಾ ಪ್ರವಾಸದಲ್ಲಿ ಈ ಪಂದ್ಯವನ್ನು ಆಡಿದರು. ವಿಜಯ್ ಅವರು ಈ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗಾಗಿ ಆಡಿದ್ದರೂ ಸಹ ಪ್ಲೇಯಿಂಗ್ ಇಲೆವೆನ್ ಅಲ್ಲಿ ಅವಕಾಶ ಸಿಕ್ಕಿರಲಿಲ್ಲ.

TV9 Kannada


Leave a Reply

Your email address will not be published. Required fields are marked *