‘ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ನಡೀರಿ ಜೈಲಿಗೆ’.. ಅಂತಿದ್ದಾರೆ ಫಿಲಿಪೈನ್ಸ್ ಅಧ್ಯಕ್ಷ

‘ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ನಡೀರಿ ಜೈಲಿಗೆ’.. ಅಂತಿದ್ದಾರೆ ಫಿಲಿಪೈನ್ಸ್ ಅಧ್ಯಕ್ಷ

ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ದರೆ ಜೈಲಿಗೆ ಕಳುಹಿಸಲಾಗುವುದು ಎಂದು ಫಿಲಿಪೈನ್ಸ್‌ ಅಧ್ಯಕ್ಷ ರೊಡ್ರಿಗೊ ಡುಟರ್ಟೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಕೊರೊನಾ ವಿರುದ್ಧ ಹೋರಾಡಲು ಲಸಿಕೆ ಒಂದೇ ಮಾರ್ಗವಾಗಿದೆ. ಹೀಗಾಗಿ ವಿಶ್ವಾದ್ಯಾಂತ ಕೊರೊನಾ ಲಸಿಕೆ ಅಭಿಯಾನ ತ್ವರಿತಗತಿಯಲ್ಲಿ ನಡೆಸಲಾಗುತ್ತಿದೆ. ಹೀಗಿದ್ದರೂ ಸಹ ಅನೇಕ ಜನರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಲಸಿಕೆ ಪಡೆಯದೇ ಕೊರೊನಾ ಹರಡುವವರಿಗೆ ಕ್ಷಮೆ ಇಲ್ಲ. ಯಾರು ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸುತ್ತಾರೋ ಅಂತಹವರ ಹೆಸರನ್ನ ಗ್ರಾಮದ ಮುಖಂಡರು ಪಟ್ಟಿ ಮಾಡಬೇಕು. ಅಂತಹವರನ್ನ ಜೈಲಿಗೆ ಕಳಿಸಲಾಗುತ್ತೆ ಎಂದು ರೊಡ್ರಿಗೋ ಎಚ್ಚರಿಸಿದ್ದಾರೆ.

The post ‘ಕೊರೊನಾ ಲಸಿಕೆ ಹಾಕಿಸಿಕೊಳ್ಳದಿದ್ರೆ ನಡೀರಿ ಜೈಲಿಗೆ’.. ಅಂತಿದ್ದಾರೆ ಫಿಲಿಪೈನ್ಸ್ ಅಧ್ಯಕ್ಷ appeared first on News First Kannada.

Source: newsfirstlive.com

Source link