ಮುಂಬೈ: ಅವಶ್ಯಕತೆ ಎಲ್ಲಾ ಆವಿಷ್ಕಾರಗಳ ತಾಯಿ ಎಂಬ ಮಾತು ನಿಜ ಅಂತಾ ಮುಂಬೈನ ವಿದ್ಯಾರ್ಥಿ ಸಾಬೀತುಪಡಿಸಿದ್ದಾರೆ. ವೈದ್ಯೆಯಾಗಿರುವ ತಾಯಿಯ ಅವಕಶ್ಯಕತೆಯನ್ನು ಅರಿತ ನಿಹಾಲ್​​ ಸಿಂಗ್​ ಆದರ್ಶ್ ಎಂಬವರು, ಕೋವ್​​-ಟೆಕ್​ ಹೆಸರಿನ ತಣ್ಣನೆಯ ಅನುಭವ ನೀಡುವ ಪಿಪಿಇ ಕಿಟ್​​ ಅಳವಡಿಸುವ ವೆಂಟಿಲೇಷನ್​​ ಸಿಸ್ಟಮ್  ಅಭಿವೃದ್ಧಿಪಡಿಸಿದ್ದಾರೆ.

ಕೊರೊನಾದ ಸಂದಿಗ್ಧ ಸಂದರ್ಭದಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪಿಪಿಇ ಕಿಟ್​​ ಧರಿಸುವುದು ಅನಿವಾರ್ಯವಾಗಿದೆ. ಕೊರೊನಾ ವಿರುದ್ಧ ಯುದ್ಧದಲ್ಲಿ ಪಿಪಿಇ ಕಿಟ್​ ವೈದ್ಯರಿಗೆ ಅತ್ಯಗತ್ಯವಾದ ವಸ್ತುವಾಗಿದೆ. ಆದರೆ ಸತತವಾಗಿ ಪಿಪಿಇ ಕಿಟ್​ ಧರಿಸಿ ಕಾರ್ಯ ನಿರ್ವಹಿಸುವ ವೈದ್ಯರು ಸಾಕಷ್ಟು ಸವಾಲುಗಳನ್ನು ಎದುರಿಸುತ್ತಿದ್ದಾರೆ.

ಅಮ್ಮ ಪಡುತ್ತಿದ್ದ ಕಷ್ಟ ನೋಡಲಾಗದೆ ಹೊಸ ಅವಿಷ್ಕಾರ
ಅಂತೆಯೇ ಮುಂಬೈನಲ್ಲಿ ಎರಡನೇ ವರ್ಷದ ಇಂಜಿನಿಯರಿಂಗ್​​ ಮಾಡುತ್ತಿರುವ ನಿಹಾಲ್​​ ಅವರ ತಾಯಿ ಡಾ. ಪೂನಮ್​​ ಕೌರ್​ ಆದರ್ಶ್​​ ಕೂಡ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದರು. ಪ್ರತಿದಿನ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ವಾಪಸ್​ ಆದ ಬಳಿಕ ತನ್ನಂತೆ ವೈದ್ಯರು ಪಿಪಿಇ ಕಿಟ್ ಧರಿಸಲು ಎದುರಿಸುತ್ತಿರುವ ಸಮಸ್ಯೆಗಳನ್ನು ಮಗನಿಗೆ ಹೇಳುತ್ತಿದ್ದರು. ತಾಯಿಯ ಮಾತುಗಳನ್ನು ಆಲಿಸಿದ 19 ವರ್ಷದ ನಿಹಾಲ್, ಹೇಗಾದ್ರೂ ಮಾಡಿ ಅಮ್ಮನ ಸಮಸ್ಯೆಗೆ ಪರಿಹಾರ ಹುಡುಕಬೇಕೆಂದು ಯೋಚಿಸಿದ್ರು.

ಇದು ನಿಹಾಲ್​​ ಕೋವಿಡ್​ ಸಂಬಂಧಿತ ಸಾಧನಗಳ ವಿನ್ಯಾಸ ಅಭಿವೃದ್ಧಿಯ ಬಗ್ಗೆ ರಿಸರ್ಚ್ ಇನ್ನೋವೇಶನ್ ಇನ್ಕ್ಯುಬೇಷನ್ ಡಿಸೈನ್ ಲ್ಯಾಬೊರೇಟರಿ ಏರ್ಪಡಿಸಿದ್ದ ಟೆಕ್ನಾಲಜಿಕಲ್ ಬ್ಯುಸಿನೆಸ್ ಇನ್ಕ್ಯುಬೇಟರ್​​ ಸಭೆಯಲ್ಲಿ ಭಾಗವಹಿಸಲು ಕಾರಣವಾಗಿತ್ತು.

100 ಸೆಕಂಡ್​​ಗಳಲ್ಲಿ ಪಿಪಿಇ ಕಿಟ್​​​ ಒಳಗೆ ಗಾಳಿ ವ್ಯವಸ್ಥೆ..!
ತಾವು ಅಭಿವೃದ್ಧಿಪಡಿಸಿರುವ ಕೂಲ್ ಪಿಪಿಇ ಕಿಟ್ ಕುರಿತು ಮಾತನಾಡಿರುವ ನಿಹಾಲ್​​, ಕೋಚ್​​-ಟೆಕ್​​​ ವೆಂಟಿಲೇಷನ್​​ ವ್ಯವಸ್ಥೆ ಪಿಪಿಇ ಸೂಟ್​​​ ಧರಿಸುವ ಅನುಭವವನ್ನು ಸಂಪೂರ್ಣವಾಗಿ ಬದಲಿಸುತ್ತದೆ. ಪಿಪಿಇ ಕಿಟ್​ ಧರಿಸಿದರು ಸುಲಭವಾಗಿ, ಉತ್ತಮವಾಗಿ ಫ್ಯಾನ್​​ ಕೆಳಗೆ ಕುಳಿತಿರುವಂತಹ ಅನುಭವ ಆಗುತ್ತದೆ. ಸಾಮಾನ್ಯವಾಗಿ ಪಿಪಿಇ ಕಿಟ್​ ಧರಿಸಿದರೆ ವಿಪರೀತ ಸೆಕೆ, ಬೆವರಿನಿಂದ ಸಮಸ್ಯೆಯಾಗುತ್ತದೆ. ಈ ಸಮಸ್ಯೆ ದೂರ ಮಾಡಲು ನಾವು ಹೊಸ ಅವಿಷ್ಕಾರ ಮಾಡಿದ್ದೇವೆ. ಇದರಿಂದ ಸೂಟ್​ ಧರಿಸಿರುವವರಿಗೆ ಕ್ರಮಬದ್ಧವಾಗಿ ಗಾಳಿ ಬೀಸುವಂತೆ ಮಾಡಿದ್ದೇವೆ. ಧರಿಸಿದ 100 ಸೆಕೆಂಡ್​​ಗಳಲ್ಲಿ ಸೂಟ್​ ಧರಿಸಿದವರಿಗೆ ಗಾಳಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಿದ್ದೇವೆ. ಪಿಪಿಇ ಕಿಟ್​​ಗೆ ಇದನ್ನ ಸುಲಭವಾಗಿ ಅಳವಡಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.

The post ಕೊರೊನಾ ವಾರಿಯರ್ಸ್​​​ಗಾಗಿ ‘ಕೂಲ್​​’ PPE ಕಿಟ್​​​- ತಾಯಿ ಕಷ್ಟ ನೋಡಿ ಮಗನ ಹೊಸ ಅವಿಷ್ಕಾರ appeared first on News First Kannada.

Source: newsfirstlive.com

Source link