ಬೆಳಗಾವಿ: ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟಿಕೆ ಮೆರೆದಿದ್ದು, ಬ್ರಿಮ್ಸ್ ಆಸ್ಪತ್ರೆಗೆ ನುಗ್ಗಿ ಬೆಡ್‍ಗಳ ಬಳಿ ನೀಂತಿ ವೀಡಿಯೋ ಮಾಡಿಕೊಂಡು, ಪೋಸ್ ನೀಡಿದ್ದಾರೆ.

ನಗರದ ಬಿಮ್ಸ್ ಆಸ್ಪತ್ರೆಗೆ ನುಗ್ಗಿ ಬೆಡ್‍ಗಳ ಪರಿಶೀಲನೆ ನಡೆಸಿದ್ದು, ಬೆಳಗಾವಿ ಲೋಕಸಭಾ ಉಪಚುನಾವಣೆ ಪರಾಜಿತ ಎಂಇಎಸ್ ಅಭ್ಯರ್ಥಿ ಶುಭಂ ಶೆಲ್ಕೆ ನೇತೃತ್ವದಲ್ಲಿ ಪುಂಡರು ಬಿಮ್ಸ್ ಆಸ್ಪತ್ರೆಗೆ ನುಗ್ಗಿದ್ದಾರೆ. ಬಿಮ್ಸ್ ಆಸ್ಪತ್ರೆಯಲ್ಲಿ ನಿರುಪಯುಕ್ತ ಬೆಡ್‍ಗಳ ಬಳಿ ನಿಂತು ವೀಡಿಯೋ ಮಾಡಿಕೊಂಡು ಪೋಸ್ ನಿಡಿದ್ದಾರೆ. ಎಂಇಎಸ್ ಪುಂಡ ಶುಭಂ ಶೆಲ್ಕೆ ಸಹ ವೀಡಿಯೋ ಮಾಡಿ ಪೋಸ್ ಕೊಟ್ಟಿದ್ದಾನೆ.
ಎಂಇಎಸ್ ಪುಂಡರು ಆಸ್ಪತ್ರೆ ನುಗ್ಗಿದ್ದ ಬಗ್ಗೆ ಜಿಲ್ಲಾಧಿಕಾರಿ ಬಿಮ್ಸ್ ನಿರ್ದೇಶಕ ಡಾ.ವಿನಯ್ ದಾಸ್ತಿಕೊಪ್ಪ ದೂರು ನೀಡಿದ್ದಾರೆ.

ಪುಂಡರ ವರ್ತನೆ ಬಗ್ಗೆ ಬ್ರಿಮ್ಸ್ ನಿರ್ದೇಶಕರು ಡಿಸಿಗೆ ದೂರು ನೀಡಿದ್ದು, ಯಾವ ರೀತಿ ಕ್ರಮ ಕೈಗೊಳ್ಳಿದ್ದಾರೆ ಕಾದು ನೋಡಬೇಕಿದೆ. ಹೀಗೆ ಏಕಾಏಕಿ ಆಸ್ಪತ್ರೆಗೆ ನುಗ್ಗಿ, ಪುಂಡಾಟಿಕೆ ಮೆರೆದರೆ ಐಸಿಯುನಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತದೆ. ಅಲ್ಲದೆ ರೋಗಿಗಳಿಗೆ ಭಾಬರಿಯಾಗುತ್ತದೆ ಎಂದು ಸ್ಥಳೀಯರು ದೂರಿದ್ದಾರೆ.

The post ಕೊರೊನಾ ವಿಚಾರದಲ್ಲೂ ಎಂಇಎಸ್ ಪುಂಡಾಟ- ಆಸ್ಪತ್ರೆಗೆ ನುಗ್ಗಿ ವೀಡಿಯೋ appeared first on Public TV.

Source: publictv.in

Source link