ದೇಶಾದ್ಯಂತ ಕೊರೊನಾ ಪ್ರಕರಣಗಳ ಸಂಖ್ಯೆದ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದ್ದು, ಇಡೀ ದೇಶಕ್ಕೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ. ಹಲವು ಸಂಘ-ಸಂಸ್ಥೆಗಳು, ದಾನಿಗಳು ಈಗಾಗಲೇ ಸಂಕಷ್ಟದಲ್ಲಿರುವ ಜನತೆಯ ನೆರವಿಗೆ ಧಾವಿಸುತ್ತಿದ್ದು, ಬಿಸಿಸಿಯ ಕೂಡ ಇದೀಗ ಜನತೆಯ ನೆರವಿಗೆ ಧಾವಿಸಿದೆ. ಭಾರತೀಯ ಕ್ರಿಕೆಟ್​​ ನಿಯಂತ್ರಣ ಮಂಡಳಿ 10 ಲೀಟರ್​​ ಸಾಮರ್ಥ್ಯದ 2,000 ಆಕ್ಸಿಜನ್​ ಸಿಲೆಂಡರ್​​ಗಳನ್ನ ಸೋಂಕಿತರ ಚಿಕಿತ್ಸೆಗೆ ನೀಡಲು ಮುಂದಾಗಿದೆ. ಈ ಬಗ್ಗೆ ಬಿಸಿಸಿಐ ಟ್ವೀಟ್​​ ಮೂಲಕ ಮಾಹಿತಿ ನೀಡಿದೆ.
‘ಇಡೀ ದೇಶಕ್ಕೆ ದೇಶವೇ ಕೊರೊನಾ 2ನೇ ಅಲೆಯ ಹೊಡೆತಕ್ಕೆ ಸಿಲುಕಿದೆ. ಈ ಸಂದರ್ಭದಲ್ಲಿ ಆಕ್ಸಿಜನ್​ನಂತಹ ಜೀವ ರಕ್ಷಕ ವೈದ್ಯಕೀಯ ಉಪಕರಣಗಳ ಅಗತ್ಯತೆ ಇದೆ. ಹೀಗಾಗಿ ಮುಂದಿನ ಕೆಲ ತಿಂಗಳುಗಳ ಕಾಲ ಮಂಡಳಿಯ ಜೀವ ರಕ್ಷಕ ಉಪಕರಣಗಳನ್ನ ನೀಡಲು ಮುಂದಾಗಿದೆ’

The post ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದ ಬಿಸಿಸಿಐ-ಚಿಕಿತ್ಸೆಗಾಗಿ 2 ಸಾವಿರ ಆಕ್ಸಿಜನ್​ ಸಿಲೆಂಡರ್​​ ನೆರವು..! appeared first on News First Kannada.

Source: newsfirstlive.com

Source link