ನವದೆಹಲಿ: ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ಎರಡನೇ ಅಲೆಯ ವಿರುದ್ಧದ ಹೋರಾಟಕ್ಕೆ ಮತ್ತೊಂದು ಅಸ್ತ್ರ ತಯಾರಾಗಿದೆ. ರಷ್ಯಾ ದೇಶ ಕೊರೊನಾ ವೈರಸ್​ಮೇಲೆ ಈ ಅಸ್ತ್ರವನ್ನ ಪ್ರಹಾರ ಮಾಡಲು ಸಿದ್ಧವಾಗಿದೆ.

ಸೋಂಕು ತಡೆಗಟ್ಟಲು ಮಹತ್ವದ ಹೆಜ್ಜೆ ಇಟ್ಟಿರುವ ರಷ್ಯಾ ದೇಶ ಸ್ಪುಟ್ನಿಕ್ ವಿ ಬೆನ್ನಲ್ಲೇ ಮತ್ತೊಂದು ವ್ಯಾಕ್ಸಿನ್​ನ್ನು ಬಿಡುಗಡೆ ಮಾಡಿದ್ದು ಅದಕ್ಕೆ ಸ್ಪುಟ್ನಿಕ್ ಲೈಟ್ ಎಂದು ಹೆಸರಿಟ್ಟಿದೆ. ಈ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್ ಕೊರೊನಾ ವಿರುದ್ಧ ಹೋರಾಡಲು ಶೇ 79. 4 ರಷ್ಟು ಪರಿಣಾಮಕಾರಿಯಾಗಿದೆ. ಅಲ್ಲದೇ ಈ ವ್ಯಾಕ್ಸಿನ್ ತೆಗೆದುಕೊಂಡ ಶೇ.91.7 ರಷ್ಟು ಜನರಲ್ಲಿ 28 ದಿನದಲ್ಲಿ ವೈರಸ್ ಇಲ್ಲವಾಗಿಸುವ ಆ್ಯಂಟಿಬಾಡಿ ಉತ್ಪಾದನೆಯಾಗಿದೆ ಎಂದು ಹೇಳಲಾಗಿದೆ. ಅಷ್ಟೆ ಅಲ್ಲದೆ ಶೇ.96.9 ರಷ್ಟು ಜನರಲ್ಲಿ ಆ್ಯಂಟಿಜೆನ್ ಸ್ಪೆಸಿಫಿಕ್ ಆ್ಯಂಟಿಬಾಡಿಯನ್ನ 28 ದಿನಗಳಲ್ಲಿ ಉತ್ಪಾದನೆ ಮಾಡಿದೆ ಎಂದು ರಷ್ಯಾ ಹೇಳಿದೆ. ವ್ಯಾಕ್ಸಿನ್ ಪಡೆದ 28 ದಿನಗಳಲ್ಲೇ ಈ ಬೆಳವಣಿಗೆ ಕಂಡುಬರುತ್ತಿದೆಯಂತೆ.

ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್​ನ್ನು ಬೇರೆ ವ್ಯಾಕ್ಸಿನ್​ಗಳಂತೆ ಎರಡು ಹಂತಗಳಲ್ಲಿ ಡೋಸ್ ಪಡೆಯುವ ಅನಿವಾರ್ಯತೆ ಇಲ್ಲ. ಯಾಕೆಂದರೆ ಈ ವ್ಯಾಕ್ಸಿನ್​ನ ಒಂದೇ ಡೋಸ್ ಬೇರೆ ಡೋಸ್​ಗಳು ಎರಡು ಬಾರಿ ತೆಗೆದುಕೊಂಡಾಗ ಮಾಡುವಷ್ಟು ಕೆಲಸವನ್ನು ಮಾಡಲಿದೆ. ಕೊರೊನಾ ಸೋಂಕಿನ ವಿರುದ್ಧ ಸಮರ್ಥವಾಗಿ ಹೋರಾಡಲಿದೆ ಎನ್ನಲಾಗಿದೆ.

ಇನ್ನು ಶೇ.100 ರಷ್ಟು ಜನರಲ್ಲಿ ಜೀವಕೋಶ ನಿರೋಧಕ ಪ್ರತಿಕ್ರಿಯೆಯನ್ನು ಈ ವ್ಯಾಕ್ಸಿನ್ ಹೆಚ್ಚಿಸಿದೆ. ಅಲ್ಲದೇ ಕೊರೊನಾ ವೈರಸ್​ನ S-ಪ್ರೋಟಿನ್ನೂ ತಡೆದಿದೆ. ಇಮ್ಯೂನಿಟಿ ಇರೋ ಶೇಕಡಾ 100 ರಷ್ಟು ಜನರಿಗೆ 10 ದಿನಗಳಲ್ಲಿ 40 ಪಟ್ಟು ಆ್ಯಂಟಿಬಾಡಿ ಉತ್ಪಾದನೆಯಾಗಿದೆಯಂತೆ.

ಖುಷಿಯ ವಿಚಾರವೆಂದರೆ ಸ್ಪುಟ್ನಿಕ್ ಲೈಟ್ ವ್ಯಾಕ್ಸಿನ್​ ವಿಷಯದಲ್ಲಿ ಭಾರತ ನಮ್ಮ ಪಾರ್ಟ್​ನರ್ ಎಂದು ಹೇಳಿದೆ. ಕೆಲವೇ ದಿನಗಳಲ್ಲಿ ಭಾರತದಲ್ಲೂ ಸ್ಪುಟ್ನಿಕ್ ಲೈಟ್ ಲಭ್ಯವಾಗಲಿದೆ.

The post ಕೊರೊನಾ ವಿರುದ್ಧ ತಯಾರಾಗಿದೆ ಸಿಂಗಲ್ ಡೋಸ್ ವ್ಯಾಕ್ಸಿನ್.. ಭಾರತ ಇದಕ್ಕೆ ಪಾರ್ಟ್​​ನರ್ appeared first on News First Kannada.

Source: newsfirstlive.com

Source link