ಬೆಂಗಳೂರು: ನಮ್ಮ ಬೆಂಗಳೂರು, ನಮ್ಮ ರಕ್ಷಣೆಯಡಿ ನ್ಯೂಸ್​ಫಸ್ಟ್​ ಇಂದು ಅಭಿಯಾನ ಮಾಡ್ತಿದೆ. ತುಂಬಾ ಖುಷಿಯ ವಿಚಾರ ಏನಂದ್ರೆ ಇಲ್ಲಿನ ಅಪಾರ್ಟ್​ಮೆಂಟ್​ ಒಂದು.. ‘ನಮ್ಮ ಅಪಾರ್ಟ್​​ಮೆಂಟ್,​ ನಮ್ಮ ರಕ್ಷಣೆ’ ಅನ್ನೋ ರೀತಿಯಲ್ಲಿ ಕೊರೊನಾವನ್ನ ಎದುರಿಸುತ್ತಿದೆ.

ಸರ್ಕಾರ, ಆಸ್ಪತ್ರೆಗಳು, ಸಂಘ ಸಂಸ್ಥೆಗಳು, ಕೊರೊನಾ ವಾರಿಯರ್ಸ್​​ ಎಷ್ಟೇ ಸೋಂಕಿನ ವಿರುದ್ಧ ಎಷ್ಟೇ ಹೋರಾಟ ನಡೆಸಿದ್ರೂ, ಜನರು ಜಾಗೃತರಾಗಿಲ್ಲ ಅಂದ್ರೆ ಏನೂ ಮಾಡೋಕೆ ಆಗಲ್ಲ. ಜನರು ಮನಸು ಮಾಡಿದ್ರೆ ಎಲ್ಲವೂ ಸಾಧ್ಯ ಅನ್ನೋದನ್ನ ಬೆನ್ನೇರುಘಟ್ಟ ಬಳಿಯ ಕ್ಲಾಸಿಕ್ ಬೆಂಚ್ ​ಮಾರ್ಕ್​ ಅಪಾರ್ಟ್​ಮೆಂಟ್​ನ ನಿವಾಸಿಗಳು ಮಾಡಿ ತೋರಿಸಿದ್ದಾರೆ.

ಅಪಾರ್ಟ್​​ಮೆಂಟ್​ನ ಅಧ್ಯಕ್ಷ ಡಾ.ಅಶ್ವಿನ್ ನೀಡಿರುವ ಮಾಹಿತಿ ಪ್ರಕಾರ ಇಲ್ಲಿ 200 ಫ್ಲ್ಯಾಟ್​​ಗಳಿವೆ. ಒಟ್ಟು ಸರಿಸುಮಾರು 600ಕ್ಕೂ ಹೆಚ್ಚುಮಂದಿ ವಾಸವಿದ್ದಾರೆ. ಸದ್ಯ ಈ ಅಪಾರ್ಟ್ಮೆಂಟ್​​ನಲ್ಲಿ ಯಾವೊಬ್ಬ ಕೊರೊನಾ ಸೋಂಕಿತರೂ ಇಲ್ಲ. ಅದಕ್ಕೆ ಕಾರಣ ನಾವು ತೆಗೆದುಕೊಳ್ಳುತ್ತಿರುವ ಮುಂಜಾಗೃತಕೃಮಗಳು ಎನ್ನುತ್ತಿದ್ದಾರೆ ಡಾ.ಅಶ್ವಿನ್.

ಕೊರೊನಾದಿಂದ ದೂರ ಇರಲು ಇಲ್ಲಿ ಮಾಡ್ತಿರೋದೇನು..?

  • ಅಪಾರ್ಟ್ಮೆಂಟ್​ನಲ್ಲಿರುವ ಹಾಗೂ ಅಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿಗೂ ಎನ್​-95 ಮಾಸ್ಕ್​ ಕಡ್ಡಾಯ
  • ಪ್ರತಿದಿನ ಸ್ಯಾನಿಟೈಜೇಷನ್, ಸೋಡಿಯಂ ಹೈಫೋ ಪ್ಲೋರೈಡ್​ 0.5 ಸ್ಯಾನಿಟೈಸ್ ಮಾಡಲಾಗುತ್ತಿದೆ
    ದಿನಕ್ಕೆ ಎರಡೆರಡು ಬಾರಿ ಕ್ಲೀನಿಂಗ್
  • ಮನೆಗಳನ್ನ ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಸೂಚನೆ
  • ವ್ಯಾಕ್ಸಿನೇಷನ್, ಅಪಾರ್ಟ್ಮೆಂಟ್​ನಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಗರಿಕರಿಗೂ ವ್ಯಾಕ್ಸಿನ್ ನೀಡಲಾಗಿದೆ
  • ಮೊದಲನೇ ಅಲೆಯಲ್ಲಿ 36 ಫ್ಲ್ಯಾಟ್​ಗಳಲ್ಲಿ ಕೊರೊನಾ ಕಾಣಿಸಿಕೊಂಡಿತ್ತು, ಸುಮಾರು 70 ರಿಂದ 80 ಮಂದಿ ಸೋಂಕಿಗೆ ಒಳಗಾಗಿದ್ದರು
  • ಎರಡನೇ ಅಲೆಯಲ್ಲಿ ಜಾಸ್ತಿ ಕೇಸ್ ಪತ್ತೆಯಾಗಿದ್ದರೂ ವ್ಯಾಕ್ಸಿನೇಷನ್ ಹಾಕಿಕೊಂಡ ಹಿನ್ನೆಲೆಯಲ್ಲಿ ಯಾರಿಗೂ ಕೂಡ ಸಿರಿಯಸ್​ ಆಗಿಲ್ಲ
  • ಲಕ್ಷಣಗಳು​ ಕಂಡು ಬಂದ ಕೂಡಲೇ ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಲಾಗುತ್ತದೆ

The post ಕೊರೊನಾ ವಿರುದ್ಧ ನಿವಾಸಿಗಳ ಯುದ್ಧ; 600 ಜನ ವಾಸವಿರುವ ಈ ಅಪಾರ್ಟ್ಮೆಂಟ್ ಕೊರೊನಾ ಮುಕ್ತ  appeared first on News First Kannada.

Source: newsfirstlive.com

Source link