ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಸತ್ತೆಗಾಲ ಗ್ರಾಮದ ಗ್ರಾಮಸ್ಥರು ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗಾಗಿ ಕಟ್ಟು ನಿಟ್ಟಿನ ಕ್ರಮಗಳನ್ನ ಜಾರಿ ಮಾಡಿದ್ದಾರೆ.

ಕೊರೊನಾ 2 ನೇ ಅಲೆಯ ಸಂಬಂಧ ನ್ಯಾಯಪಂಚಾಯ್ತಿ ಸಭೆ ನಡೆಸಿದ ಗ್ರಾಮಸ್ಥರು ಗ್ರಾಮಕ್ಕೆ ಸಂಬಂಧಿಸಿದಂತೆ ಕಟ್ಟು ನಿಟ್ಟಿನ ಕ್ರಮಗಳನ್ನ ಕೈ ಗೊಂಡಿದ್ದಾರೆ.

  • ತುರ್ತು ಸಂದರ್ಭ ಹೊರತಾಗಿ ಗ್ರಾಮದಿಂದ ಯಾರೂ ಹೊರ ಹೋಗುವಂತಿಲ್ಲ
  • ಹೊರಗಿನಿಂದಲು ಗ್ರಾಮಕ್ಕೆ ಯಾರು ಬರುವಂತಿಲ್ಲ.
  • ಉದ್ಯೋಗಕ್ಕಾಗಿ ಬೆಂಗಳೂರು ಸೇರಿದಂತೆ ಬೇರೆ ಕಡೆ ಇರುವರು ಸದ್ಯಕ್ಕೆ ಗ್ರಾಮಕ್ಕೆ ಬಾರದು.
  • ಸಾಲ ವಸೂಲಾತಿಗೆ ಫೈನ್ಯಾನ್ಸ್​ ಕಂಪನಿಗಳ ಪ್ರತಿನಿಧಿಗಳು ಕೊರೊನಾ ಕಡಿಮೆ ಆಗುವವರೆಗು ಬರುವಂತಿಲ್ಲ.
  • ಬಡಾವಣೆಯ ಪ್ರತಿಯೊಬ್ಬರು ಕೊರೊನಾ ಲಸಿಕೆಯನ್ನ ಹಾಕಿಸಿಕೊಳ್ಳಬೇಕು.
  • ಜ್ವರ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ತಕ್ಷಣ ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಬೇಕು.
  • ಎಲ್ಲಿಯೂ ಗುಂಪು ಸೇರದೆ ಮಾಸ್ಕ್​ ಹಾಕಿಕೊಂಡು ತಮ್ಮ ತಮ್ಮ ಕೆಲಸ ಮಾಡಿಕೊಳ್ಳಬೇಕು ಎಂದು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

The post ಕೊರೊನಾ ವಿರುದ್ಧ ಯುದ್ಧ; ತಮಗೆ ತಾವೇ ಮಾದರಿ ರೂಲ್ಸ್​ ರೂಪಿಸಿದ ಚಾಮರಾಜನಗರದ ಗ್ರಾಮಸ್ಥರು appeared first on News First Kannada.

Source: News First Kannada
Read More