ನವದೆಹಲಿ: ಕೋವಿಡ್​ ಎರಡನೇ ಅಲೆಗೆ ಭಾರತ ತತ್ತರಿಸುತ್ತಿದ್ದು, ಹಲವು ದೇಶಗಳು ಹಾಗೂ ವಿದೇಶಿ ಸಂಸ್ಥೆಗಳು ಭಾರತಕ್ಕೆ ಸಹಾಯ ನೀಡೋಕೆ ಮುಂದಾಗಿವೆ.

ಈ ಹಿನ್ನೆಲೆ ಗೂಗಲ್​ ಸಿಇಒ ಸುಂದರ್​ ಪಿಚ್ಚೈ ಕೂಡ ಭಾರತಕ್ಕೆ ಕೋವಿಡ್​ ಸಮರವನ್ನ ಎದುರಿಸಲು ಸಹಾಯ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವಿಟ್​ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, ಭಾರತವು ಕೋವಿಡ್​ ಮಹಾಸಮರವನ್ನ ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಗೂಗಲ್​ 135 ಕೋಟಿ ಹಣವನ್ನ ಯೂನಿಸೆಫ್​ಗೆ ನೀಡುವ ಮೂಲಕ ಭಾರತಕ್ಕೆ ಅಗತ್ಯವಿರುವ ಲಸಿಕೆ, ಆಕ್ಸಿಜನ್​ ಮುಂತಾದ ವೈದ್ಯಕೀಯ ಸೌಲಭ್ಯಗಳಿಗೆ ನೆರವಾಗಲಿದ್ದೇವೆ ಎಂದಿದ್ದಾರೆ.

The post ಕೊರೊನಾ ವಿರುದ್ಧ ಹೋರಾಡಲು ಭಾರತಕ್ಕೆ 135 ಕೋಟಿ ನೆರವು ನೀಡಿದ ಗೂಗಲ್ appeared first on News First Kannada.

Source: News First Kannada
Read More