ನವದೆಹಲಿ: ಕೊರೊನಾ ಸೋಂಕು ನಿವಾರಿಸಲು ಸಂಜೀವಿನಿಯಾಗಿ ಡಿಆರ್​​ಡಿಓ ಅಭಿವೃದ್ಧಿಪಡಿಸಿರುವ ಆ್ಯಂಟಿ ಕೋವಿಡ್​ ಔಷಧಿ 2ಡಿಜಿ ಯ ಎರಡನೇ ಬ್ಯಾಚ್​ ಬಿಡುಗಡೆಯಾಗಿದ್ದು, ಒಂದು ಶ್ಯಾಸೆಗೆ 990 ರೂಪಾಯಿ ಬೆಲೆ ನಿಗದಿ ಪಡಿಸಲಾಗಿದೆ. ಹೀಗಾಗಿ ಸಹಜವಾಗಿ ಈ ಔಷಧ ಬಡವರಿಗೆ ಸಿಗೋದೆ ಇಲ್ವಾ? ಅನ್ನೋ ಪ್ರಶ್ನೆ ಮೂಡಿದೆ.

ಔಷಧಿಯ ಉತ್ಪಾದನೆ ಮಾಡ್ತಿರೋ ಡಾ. ರೆಡ್ಡೀಸ್​ ಲ್ಯಾಬೋರೇಟರಿ 10,000 2ಡಿಜಿ ಸ್ಯಾಶೆಗಳನ್ನ ಗುರುವಾರವಷ್ಟೇ ವಿತರಣೆ ಮಾಡಿದೆ. ಕಂಪನಿಯೇ ಸರ್ಕಾರಿ ಆಸ್ಪತ್ರೆಗಳು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳಿಗೆ ಪೂರೈಕೆ ಮಾಡಲಿದೆ. ಸದ್ಯ 2ಡಿಜಿ ಡ್ರಗ್​​ ವಾಣಿಜ್ಯ ಮಾರಾಟಕ್ಕೆ ಲಭ್ಯವಿದೆ ಎಂದು ಕಂಪನಿಯ ಅಧಿಕಾರಿಗಳು ಹೇಳಿದ್ದಾರೆ.

2 ಡಿಜಿ ಅಥವಾ 2 ಡಿ-ಆಕ್ಸಿ-ಡಿ-ಗ್ಲುಕೋಸ್,​ ಗಂಭೀರ ಸ್ಥಿತಿಯಲ್ಲಿರುವ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಡಿಆರ್​ಡಿಓ ಅಭಿವೃದ್ದಿಪಡಿಸಿರೋ ಔಷಧಿ. ಇದು ಕಿಲ್ಲರ್ ಕೊರೊನಾಗೆ ರಾಮ ಬಾಣವಾಗಿದ್ದು, ಅತ್ಯುತ್ತಮ ರಿಸಲ್ಟ್ ನೀಡ್ತಿದೆ. ರಾಜ್ಯದಲ್ಲೂ ಕೂಡ ಈ ಔಷಧವನ್ನ ನೀಡಲಾಗಿದ್ದು, ಸೋಂಕಿತರನ್ನ ಗುಣಮುಖರಾಗಿಸುವಲ್ಲಿ 2ಡಿಜಿ ಯಶಸ್ವಿಯಾಗಿದೆ. ಇತ್ತೀಚೆಗಷ್ಟೇ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ 2-ಡಿಜಿಗೆ ಅನುಮತಿ ನೀಡಿತ್ತು. ಈ ಔಷಧಿ ಕೋವಿಡ್ ರೋಗಿಗಳು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ವೈದ್ಯಕೀಯ ಆಮ್ಲಜನಕದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಇದನ್ನೂ ಓದಿ: ‘ಕೊರೊನಾ ಸಂಜೀವಿನಿ’ DRDOದ 2-DG ಔಷಧಿಗೆ ರಾಜ್ಯದಲ್ಲೂ ಯಶಸ್ಸು

The post ಕೊರೊನಾ ವಿರುದ್ಧ DRDO ಸಂಜೀವಿನಿ ಬೆಲೆ ನಿಗದಿ; 2-ಡಿಜಿ ಬಡವರಿಗೆ ಸಿಗೋದೇ ಇಲ್ವಾ? appeared first on News First Kannada.

Source: newsfirstlive.com

Source link