ಬೆಂಗಳೂರು: ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ರಾಜ್ಯದಲ್ಲಿ ವಿಶೇಷ ಪ್ಯಾಕೇಜ್​ ಘೋಷಿಸುವ ಬಗ್ಗೆ ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಜೊತೆ ಮಾತನಾಡುವುದಾಗಿ ಕಂದಾಯ ಸಚಿವ R. ಅಶೋಕ್ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಬೆಡ್ ವ್ಯವಸ್ಥೆಯಲ್ಲಿ ಸುಧಾರಣೆ ಆಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್ ಪಡೆಯಲು ರಿಯಾಲಿಟಿ ಚೆಕ್ ನಡೆಸಲು ಅಧಿಕಾರಿಗಳನ್ನ ನೇಮಿಸಲಾಗಿದೆ. PPE ಕಿಟ್ ಹಾಕಿಕೊಂಡು ಅಧಿಕಾರಿಗಳು ವೈದ್ಯರ ಜೊತೆ ಬೆಡ್​​ಗಳ ಪರಿಶೀಲನೆಗೆ ತೆರಳಬೇಕು ಎಂದರು.

ನಗರದಲ್ಲಿ 1800 ಬೆಡ್ ಖಾಲಿ ಇದೆ. ಕೊವಿಡ್ ಕೇರ್ ಸೆಂಟರ್​ಗೆ ಬಂದು ದಾಖಲಾಗಿ. ಆಕ್ಸಿಜನ್ ಕಾನ್ಸಂಟ್ರೇಟರ್​ಗಳನ್ನ ಕೊವಿಡ್ ಕೇರ್ ಸೆಂಟರ್​ನಲ್ಲಿ ಅಳವಡಿಸಲಾಗಿದೆ. ಇನ್ನೂ 1500 ಅಕ್ಸಿಜನ್ ಕಾಂನ್ಸಂಟ್ರೇಟರ್ಸ್​​ ಬರಲಿದೆ. ಪ್ರತಿ ತಾಲೂಕಿಗೂ ಕಾನ್ಸಟ್ರೇಟರ್​ಗಳನ್ನ ನೀಡಲಾಗುವುದು ಎಂದು ತಿಳಿಸಿದ್ರು.

ಕೇಂದ್ರದಿಂದ ಬಂದಿರುವ ರೆಮ್ಡೆಸಿವಿರ್ ಔಷಧಿ ಹಾಗೂ ಕೊರೊನಾ ಲಸಿಕೆಗಳನ್ನ ಹಂಚಿಕೆ ಮಾಡಲಾಗಿದೆ ಎಂದು ಇದೇ ವೇಳೆ ಅವರು ಹೇಳಿದರು.

The post ಕೊರೊನಾ ವಿಶೇಷ ಪ್ಯಾಕೇಜ್ ವಿಚಾರವಾಗಿ CM ಜೊತೆ ಇಂದು ಚರ್ಚಿಸುವೆ -ಅಶೋಕ್ appeared first on News First Kannada.

Source: newsfirstlive.com

Source link