ಡೆಹ್ರಾಡೂನ್: ಕೊರೊನಾ ವೈರಸ್ ಒಂದು ಜೀವಿಯಾಗಿದ್ದು ಅದಕ್ಕೆ ಬದುಕುವ ಹಕ್ಕು ಇದೆ ಎಂಬ ಅಸಹಜ ಹೇಳಿಕೆಯನ್ನು ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ನೀಡಿದ್ದಾರೆ.

ತಾತ್ವಿಕ ದೃಷ್ಟಿ ಕೋನದಿಂದ ನೋಡಿದಾಗ ಕೊರೊನಾವೈರಸ್ ಸಹ ಜೀವಂತ ಜೀವಿ. ನಮ್ಮಂತೆ ಅದಕ್ಕೂ ಬದುಕುವ ಹಕ್ಕಿದೆ. ಆದರೆ ನಾವು (ಮಾನವರು) ನಮ್ಮನ್ನು ಅತ್ಯಂತ ಬುದ್ಧಿವಂತರು ಎಂದು ಭಾವಿಸಿ ಅದನ್ನು ತೊಡೆದುಹಾಕಲು ಹೊರಟಿದ್ದೇವೆ. ಹೀಗಾಗಿ ಅದು ನಿರಂತರವಾಗಿ ತನ್ನನ್ನು ತಾನೇ ಪರಿವರ್ತಿಸಿಕೊಳ್ಳುತ್ತಿದೆ. ಆದರೆ ಮನುಷ್ಯ ಸುರಕ್ಷಿತವಾಗಿರಲು ವೈರಸ್ ನ್ನು ಮೀರಿ ಬದುಕಬೇಕಾಗಿದೆ ಎಂದು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುವಾಗ ಹೇಳಿದ್ದಾರೆ.

ಇಂದು ಇಡೀ ದೇಶ ಕೊರೊನಾ ಎರಡನೇ ಅಲೆಗೆ ತತ್ತರಿಸಿ ಹೋಗುತ್ತಿರುವಾಗ ಉತ್ತರಾಖಂಡ್ ಮಾಜಿ ಸಿಎಂ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

The post ಕೊರೊನಾ ವೈರಸ್ ಒಂದು ಜೀವಂತ ಜೀವಿ, ಅದಕ್ಕೆ ಜೀವಿಸುವ ಹಕ್ಕಿದೆ: ತ್ರಿವೇಂದ್ರ ಸಿಂಗ್ ರಾವತ್ appeared first on Public TV.

Source: publictv.in

Source link