ಕೊರೊನಾ ವೈರಸ್ ಹೊಸ ರೂಪಾಂತರಿ ಹಿಂದಿನ ರೂಪಾಂತರಿಗಳಿಗಿಂತ 30 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ! | Hospitals in Karnataka have been told to stay alert over Corona virus’ new variant Omicron


ಕೊರೊನಾ ವೈರಸ್ ದರಿದ್ರ ಪಿಡುಗು ಮನುಕುಲವನ್ನು ಬಿಡುವ ಹಾಗೆ ಕಾಣುತ್ತಿಲ್ಲ. ಎರಡು ತಿಂಗಳಿಂದ ಸ್ವಲ್ಪ ನಿರಾಳವಾಗಿದ್ದ ವಿಶ್ವಕ್ಕೆ ಮತ್ತೇ ಹೊಸ ವೇರಿಯಂಟ್ ರೂಪದಲ್ಲಿ ಕಂಟಕ ಎದುರಾಗಿದೆ. ವೈದ್ಯಕೀಯವಾಗಿ ಇದನ್ನು ಬಿ 1.1.1.529 ಅಂತ ಕರೆಯಲಾಗಿದ್ದು ವಿಶ್ವ ಆರೋಗ್ಯ ಸಂಸ್ಥೆ ಇದನ್ನು ಒಮಿಕ್ರಾನ್ ಅಂತ ಹೆಸರಿಸಿದೆ. ಕೇಂದ್ರವು ಎಲ್ಲ ರಾಜ್ಯ ಸರ್ಕಾರಗಳಿಗೆ ಹೊಸ ವೇರಿಯಂಟ್ ಬಗ್ಗೆ ಅತಿ ಹೆಚ್ಚು ಜಾಗರೂಕತೆ ವಹಿಸುವಂತೆ ತಿಳಿಸಿದೆ.

ಕರ್ನಾಟಕದಲ್ಲಿ ಕೊವಿಡ್ ಸುರಕ್ಷತೆಗೆ ಸಂಬಂಧಿಸಿದ ಮಾರ್ಗಸೂಚಿ ಮತ್ತು ನಿಯಮಾವಳಿಗಳನ್ನು ಜನ ಎಲ್ಲ ಹಂತಗಳಲ್ಲಿ ಎಲ್ಲ ಸಂದರ್ಭಗಳಲ್ಲಿ ಮತ್ತು ಎಲ್ಲ ಸ್ಥಳಗಳಲ್ಲಿ ಪಾಲಿಸುವಂತೆ ಆರೋಗ್ಯ ಇಲಾಖೆ ಸೂಚನೆ ಹೊರಡಿಸಿದೆ. ಅಸ್ಪತ್ರೆಗಳಿಗೆ ತಕ್ಕ ಏರ್ಪಾಟುಗಳನ್ನು ಮಾಡಿಕೊಳ್ಳುವಂತೆಯೂ ನಿರ್ದೇಶನ ನೀಡಲಾಗಿದೆ.

ಸರ್ಕಾರಗಳು ಮತ್ತು ಸಂಬಂಧಪಟ್ಟ ಇಲಾಖೆಗಳು ಯಾಕಿಷ್ಟು ಅತಂಕಗೊಂಡಿವೆ ಅನ್ನೋದು ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಹೊಸ ರೂಪಾಂತರಿ ಅಕ್ಷರಶಃ ರಾಕೆಟ್ ವೇಗದಲ್ಲಿ ಸೋಂಕನ್ನು ಹರಡುತ್ತದೆ. ಇದಕ್ಕೆ ಮೊದಲು ಭೀತಿ ಮೂಡಿಸಿದ್ದ ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ಗಿಂತ 30 ಪಟ್ಟು ವೇಗವಾಗಿ ಸೋಂಕನ್ನು ಹರಡಿಸುತ್ತದೆ.

ಇದನ್ನು ನಿರ್ವಹಿಸುವುದು ಹೇಗೆ ಅಂತ ವಿಶ್ವ ಆರೋಗ್ಯ ಸಂಸ್ಥೆಯಲ್ಲೂ ಇದುವರೆಗೆ ಯಾವುದೇ ಪ್ಲ್ಯಾನ್ ಸಿದ್ಧವಾಗಿಲ್ಲ. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ವಿಶ್ವಸಂಸ್ಥೆಯ ತಾಂತ್ರಿಕ ಸಲಹಾ ಸಮಿತಿ ಇಷ್ಟರಲ್ಲೇ ಸಭೆ ಸೇರಲಿದೆ.

ದಕ್ಷಿಣ ಆಫ್ರಿಕ, ಬೋಟ್ಸ್ವಾನಾ, ಜಿಂಬಾಬ್ವೇ ಅಲ್ಲದೆ ಹಾಂಗ್ ಕಾಂಗ್ ನಿಂದ ಭಾರತಕ್ಕೆ ಬರುವ ಜನರ ಮೇಲೆ ಮತ್ತು ನಿಗಾ ಇಡುವಂತೆ ವಿಮಾನ ನಿಲ್ದಾಣ ಪ್ರಾಧಿಕಾರಗಳಿಗೆ ಸೂಚಿಸಲಾಗಿದ್ದು, ಅವರಿಗೆ ಆರ್ಟಿ-ಪಿಸಿಆರ್ ಟೆಸ್ಟ್​ಗಳನ್ನು ಮಾಡಿಸಬೇಕೇ ಎನ್ನುವ ನಿರ್ಧಾರವನ್ನು ಕೇಂದ್ರ ಸರ್ಕಾರ ಇಷ್ಟರಲ್ಲೇ ಪ್ರಕಟಿಸಲಿದೆ. ಹಲವಾರು ದೇಶಗಳು ಈ ದೇಶಗಳಿಂದ ಬರುವ ವಿಮಾನಗಳನ್ನು ಈಗಾಗಲೇ ನಿಷೇಧಿಸಿವೆ.

ಇದನ್ನೂ ಓದಿ:  ಒಮಿಕ್ರಾನ್ ಭೀತಿ; ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ನಿಯಮ ಸಡಿಲಿಕೆ ನಿರ್ಧಾರದ ಬಗ್ಗೆ ಪರಿಶೀಲಿಸಲು ಮೋದಿ ಸೂಚನೆ

 

TV9 Kannada


Leave a Reply

Your email address will not be published. Required fields are marked *