ಮುಂಬೈ: ಮುಂಬೈ ಹೈಕೋರ್ಟ್​​ ಕೇಂದ್ರ ಸರ್ಕಾರಕ್ಕೆ.. ಗಡಿಯಲ್ಲಿ ನಿಂತು ವೈರಸ್ ಹೊರಗೆ ಬರಲೆಂದು ಕಾಯುವ ಬದಲು.. ಕೋವಿಡ್​ 19 ವೈರಸ್​ನ್ನ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾದರಿಯಲ್ಲಿ ಎದುರಿಸಬೇಕು ಎಂದು ಹೇಳಿದೆ.

ಚೀಫ್ ಜಸ್ಟೀಸ್ ದಿಪಾಂಕರ್ ದತ್ತಾ ಮತ್ತು ಜಸ್ಟೀಸ್​ ಜಿ ಎಸ್​ ಕುಲಕರ್ಣಿಯವರ ಪೀಠದಲ್ಲಿ ಇಂದು ನಡೆದ ವಿಚಾರಣೆ ವೇಳೆ.. ಸರ್ಕಾರದ ‘NEAR TO HOME’ ವ್ಯಾಕ್ಸಿನೇಷನ್​ ಸ್ಕೀಮ್.. ಕೇಂದ್ರದ ಬಳಿಗೇ ವೈರಸ್ ಬುರವವರೆಗೂ ಕಾಯುವಂತಿತ್ತು ಎಂದಿದೆ.

ನೀವು ಕೊರೊನಾ ನಮ್ಮ ಅತಿದೊಡ್ಡ ಶತ್ರು ಎಂಬುದನ್ನ ಒಪ್ಪಿಕೊಳ್ಳಬೇಕು, ವೈರಸ್ ಕೇಂದ್ರದವರೆಗೂ ಬರಲಾಗದ ಕೆಲವು ಪ್ರದೇಶಗಳಲ್ಲಿ ಅಥವಾ ಕೆಲವು ವ್ಯಕ್ತಿಗಳಲ್ಲಿ ಉಳಿದುಕೊಂಡಿರಬಹುದು. ನೀವು ಅದನ್ನ ಸರ್ಜಿಲ್ ಸ್ಟ್ರೈಕ್​ನಂತೆ ಎದುರಿಸಬೇಕು. ನೀವು ಗಡಿಗಳಲ್ಲಿ ವೈರಸ್ ನಿಮ್ಮ ಬಳಿಗೆ ಬರಲೆಂದು ಕಾಯುತ್ತಾ ನಿಂತಿದ್ದೀರಿ.. ನೀವು ಶತ್ರುವಿನ ಪ್ರದೇಶವನ್ನ ಪ್ರವೇಶಿಸುತ್ತಿಲ್ಲ. ನೀವು ತೆಗೆದುಕೊಂಡ ನಿರ್ಧಾರವನ್ನ ಈ ಹಿಂದೆಯೇ ತೆಗೆದುಕೊಂಡಿದ್ದರೆ ಕೆಲವು ಜೀವಗಳನ್ನ ಉಳಿಸಬಹುದಿತ್ತು ಎಂದು ಕೋರ್ಟ್ ಇದೇ ವೇಳೆ ಅಭಿಪ್ರಾಯಪಟ್ಟಿದೆ.

 

The post ಕೊರೊನಾ ವ್ಯಾಕ್ಸಿನೇಷನ್ ‘ಸರ್ಜಿಕಲ್ ಸ್ಟ್ರೈಕ್’ ಮಾದರಿಯಲ್ಲಿ ನಡೆಯಬೇಕು- ಕೇಂದ್ರಕ್ಕೆ ಕೋರ್ಟ್ ಸೂಚನೆ appeared first on News First Kannada.

Source: newsfirstlive.com

Source link