ನವದೆಹಲಿ: ಜಗತ್ತನ್ನೇ ಕಾಡಿದ ಕೊರೊನಾಗೆ ಸದ್ಯ ಲಸಿಕೆ ಲಭ್ಯವಾಗಿದ್ದು ದೇಶದಾದ್ಯಂತ ಲಸಿಕಾ ಅಭಿಯಾನ ನಡೆಸಲಾಗುತ್ತಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕಾ ಅಭಿಯಾನ ಪ್ರಾರಂಭವಾಗಿದ್ದು ದೇಶದಾದ್ಯಂತ ಈವರೆಗೂ 33 ಕೋಟಿಗೂ ಹೆಚ್ಚು ಡೋಸ್ ವ್ಯಾಕ್ಸಿನ್ ವಿತರಣೆ ಮಾಡಲಾಗಿದೆ.

ಈ ಮಧ್ಯೆ ದೇಶೀಯವಾಗಿ ವ್ಯಾಕ್ಸಿನ್ ತಯಾರಿಸಿದ ವಿಜ್ಞಾನಿಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕೆಂದು ಜಾರ್ಖಂಡ್ ಆರೋಗ್ಯ ಮಂತ್ರಿ ಬನ್ನಾ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ. ಅಷ್ಟೇ ಅಲ್ಲದೆ ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಬನ್ನಾ ಗುಪ್ತಾ ವ್ಯಾಕ್ಸಿನ್ ತಯಾರಿಸಿದ ವಿಜ್ಞಾನಿಗಳಿಗೆ ಭಾರತ ರತ್ನ ನೀಡಿ ಗೌರವಿಸಿ ಎಂದು ಮನವಿ ಮಾಡಿದ್ದಾರೆ.

The post ಕೊರೊನಾ ವ್ಯಾಕ್ಸಿನ್ ತಯಾರಿಸಿದ ವಿಜ್ಞಾನಿಗಳಿಗೆ ‘ಭಾರತ ರತ್ನ’ ನೀಡಲು ಆಗ್ರಹ appeared first on News First Kannada.

Source: newsfirstlive.com

Source link