ಕೊರೊನಾ ವ್ಯಾಕ್ಸಿನ್ ಪಡೆಯಲು ಹುಬ್ಬಳ್ಳಿಯ ಇಸ್ಲಾಂಪುರ್ ವಾಸಿಗಳಿಂದ ಅಡ್ಡಿ; ವಿಡಿಯೋ ನೋಡಿ | Hubli people refused to take coronavirus vaccine


ಹುಬ್ಬಳ್ಳಿ: ಕೊರೊನಾ ಲಸಿಕೆ ಪಡೆಯುವುದಕ್ಕೆ ಹುಬ್ಬಳ್ಳಿ ಜಿಲ್ಲೆಯ ಇಸ್ಲಾಂಪುರ ನಿವಾಸಿಗಳು ನಿರಾಕರಿಸಿದ್ದಾರೆ. ಹೀಗಾಗಿ ಲಸಿಕೆ ನೀಡಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವೈದ್ಯಕೀಯ ಸಿಬ್ಬಂದಿಗಳು ಪರದಾಟ ನಡೆಸುವಂತಾಗಿದೆ. ಅಧಿಕಾರಿಗಳು ಎಷ್ಟೇ ಮನವೊಲಿಸುವ ಪ್ರಯತ್ನ ಮಾಡಿದರೂ ಸ್ಥಳೀಯರು ಲಸಿಕೆ ಪಡೆಯಲು ಒಪ್ಪಿಗೆ ನೀಡಲಿಲ್ಲ. ಕೊನೆಗೆ ಆರೋಗ್ಯದ ಬಗ್ಗೆ ಗ್ಯಾರಂಟಿ ಕೊಡುವುದಾಗಿ ಅಧಿಕಾರಿಗಳು ಭರವಸೆ ನೀಡಿದರೂ ಸ್ಥಳೀಯರು ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ. ಲಸಿಕೆ ನೀಡಲು ಮನೆಮನೆಗೆ ಬರುತ್ತಿರುವ ಪಾಲಿಕೆಯ ವೈದ್ಯಕೀಯ ಸಿಬ್ಬಂದಿಗಳ ಜೊತೆ ಜಟಾಪಟಿ ನಡೆಸುತ್ತಿದ್ದು, 77ನೇ ವಾರ್ಡಿನ ಕೆಲವರಂತು ಯಾವುದೇ ಕಾರಣಕ್ಕೂ ಲಸಿಕೆ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಅವಳಿನಗರದಲ್ಲಿ ಲಸಿಕಾಕರಣ ಅಭಿಯಾನಕ್ಕೆ ಕೊಂಚ ಹಿನ್ನೆಡೆಯಾಗಿದೆ.

ಇದನ್ನೂ ಓದಿ:
Covaxin: ಕೊವ್ಯಾಕ್ಸಿನ್‌ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ

TV9 Kannada


Leave a Reply

Your email address will not be published. Required fields are marked *