ಕೋವಿಶೀಲ್ಡ್ ವ್ಯಾಕ್ಸಿನ್ ತಯಾರಿಸುವ ಪುಣೆಯ ಸೀರಂ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ದೇಶದ ಜನರಿಗೆ ದೊಡ್ಡ ಗಿಫ್ಟ್ ನೀಡಿದ್ದು, ರಾಜ್ಯ ಸರ್ಕಾರಗಳಿಗೆ ನೀಡುವ ಕೊರೊನಾ ವ್ಯಾಕ್ಸಿನ್ ಕೋವಿಶೀಲ್ಡ್ ಬೆಲೆಯನ್ನು ಇಳಿಕೆ ಮಾಡಿದ್ದಾರೆ.

ಮೇ 1 ನೇ ತಾರೀಖಿನಿಂದ ದೇಶಾದ್ಯಂತ ಯೂನಿವರ್ಸಲ್ ವ್ಯಾಕ್ಸಿನೇಷನ್ ಶುರುವಾಗಲಿದೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಇಟ್ಟುಕೊಂಡಿದೆ. ಈ ನಡುವೆ ಕೇಂದ್ರ ಸರ್ಕಾರಕ್ಕೆ ಒಂದು ರಾಜ್ಯ ಸರ್ಕಾರಕ್ಕೆ ಒಂದು ಬೆಲೆಯನ್ನು ನಿಗದಿ ಮಾಡಲಾಗಿದೆ ಅನ್ನೋ ಟೀಕೆ ಹಲವು ರಾಜ್ಯ ಸರ್ಕಾರಗಳಿಂದ ಕೇಳಿ ಬಂದಿತ್ತು. ಅಲ್ಲದೇ, ನಿನ್ನೆ ತಾನೆ ಕೇಂದ್ರ ಸರ್ಕಾರ ಕೂಡ ವ್ಯಾಕ್ಸಿನ್ ದರ ಮರು ಪರಿಗಣಿಸುವಂತೆ ಈ ಸಂಸ್ಥೆಗಳಿಗೆ ಪತ್ರ ಕೂಡ ಬರೆದಿತ್ತು.

ಈ ಹಿನ್ನೆಲೆಯಲ್ಲಿ ಈಗಷ್ಟೇ ಟ್ವೀಟ್ ಮಾಡಿರುವ ಆದಾರ್ ಪೂನಾವಾಲಾ, ಜನ ಸೇವಾ ಮನೋಭಾವದಿಂದ ರಾಜ್ಯ ಸರ್ಕಾರಗಳಿಗೆ ನೀಡಲಾಗುತ್ತಿದ್ದ ಕೋವಿಶೀಲ್ಡ್ ವ್ಯಾಕ್ಸಿನ್ ದರವನ್ನು 400 ರೂಪಾಯಿಯಿಂದ 300 ರೂಪಾಯಿಗೆ ಇಳಿಕೆ ಮಾಡುತ್ತಿರೋದಾಗಿ ಹೇಳಿದ್ದಾರೆ. ತಕ್ಷಣದಿಂದಲೇ ಅನುವಾಗುವಂತೆ ಈ ದರ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

The post ಕೊರೊನಾ ವ್ಯಾಕ್ಸಿನ್ ಬೆಲೆ ಇಳಿಸಿದ ಆದಾರ್ ಪೂನಾವಾಲಾ; ರಾಜ್ಯ ಸರ್ಕಾರಗಳಿಗೆ ರಿಲೀಫ್ appeared first on News First Kannada.

Source: newsfirstlive.com

Source link