ಬೆಂಗಳೂರು: ಕೊರೊನಾ ಸೋಂಕು ತೀವ್ರವಾಗಿ ಹರಡುತ್ತಿದ್ದರು ಕೊರೊನಾ ವಾರಿಯರ್​ಗಳಿರುವ ಪೊಲೀಸರು ನಿತ್ಯ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ರೈಲ್ವೇಸ್ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಭಾಸ್ಕರ್ ರಾವ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಕೋವಿಡ್-19 2ನೇ ಅಲೆಯು ಅತಿವೇಗವಾಗಿ ಹರಡುತ್ತಿರುವುದರಿಂದ, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ನಾವುಗಳೆಲ್ಲ ಪಾಲಿಸಲೇ ಬೇಕು ಎಂದು ಭಾಸ್ಕರ್​ ರಾವ್​​ ತಿಳಿಸಿದ್ದಾರೆ.

1. ಈ ಸಮಯದಲ್ಲಿ ದೈಹಿಕವಾಗಿ ಅಷ್ಟೇ ಅಲ್ಲದೆ ಮಾನಸಿಕವಾಗಿಯೂ ನಾವು ಸ್ವಸ್ಥರಾಗಿರಬೇಕು ಹಾಗಾಗಿ ಪ್ರಾಣಾಯಾಮ ಮತ್ತು ಯೋಗ ಅಭ್ಯಾಸ ಮಾಡುವುದನ್ನು ರೂಡಿಸಿಕೊಳ್ಳಿ.

2.ಮಹಿಳಾ ಮತ್ತು ಪುರುಷ ಸಿಬ್ಬಂದಿಗಳು ಕರ್ತವ್ಯನಿರತ ಸಮಯದಲ್ಲಿ ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿಕೊಳ್ಳಬೇಕಾಗುತ್ತದೆ ಹಾಗಾಗಿ ಪ್ರತಿದಿನವೂ ಕಷಾಯ ಮತ್ತು ಬಿಸಿ ನೀರನ್ನು ಸೇವಿಸಿ.

ಕೈಗವಸು ಮತ್ತು ಮುಖಗವಸುಗಳನ್ನು ಧರಿಸುವುದು, ಆಗಾಗ್ಗೆ ಸ್ಯಾನಿಟೈಸರ್ ಅನ್ನು ಬಳಸುವುದು ಹಾಗೂ ಸಾರ್ವಜನಿಕರೊಂದಿಗೆ ಸಂವಹನ ಮಾಡುವಾಗ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅತಿಮುಖ್ಯ.

3. ಈಗಾಗಲೇ ಲಸಿಕೆ ಪಡೆದಿದ್ದರೂ ಸಹ ಕೆಲ ಪೊಲೀಸರಲ್ಲಿ ಕೋವಿಡ್ ಸೋಂಕು ಕಂಡು ಬಂದಿರುವುದರಿಂದ ನಿರ್ಲಕ್ಷವಹಿಸದೇ ನಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಮ್ಮ ಕುಟುಂಬದವರ ಸುರಕ್ಷತೆಯ ಕಡೆಗೂ ಹೆಚ್ಚಿನ ಗಮನವಹಿಸುವುದು ಅತಿ ಮುಖ್ಯ. ಆದಷ್ಟು ತ್ವರಿತವಾಗಿ ನಿಮ್ಮ ಕುಟುಂಬ ಸದಸ್ಯರಿಗೂ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಿಕೊಳ್ಳುವುದು ಉತ್ತಮ.

4.ಸಾರ್ವಜನಿಕರಲ್ಲಿ ಹಾಗೂ ನಿಮ್ಮ ಕುಟುಂಬದವರುಗಳಲ್ಲಿ ಧೈರ್ಯ ಮೂಡಿಸುವುದು ನಿಮ್ಮ ಜವಾಬ್ದಾರಿಯೇ ಆಗಿದೆ. ಎಷ್ಟೇ ಸಮಸ್ಯೆ ಬಂದರೂ ಧೈರ್ಯಗೆಡದೆ ಮತ್ತು ತಾಳ್ಮೆ ಕಳೆದುಕೊಂಡು ವರ್ತಿಸದಿರಿರುವುದು ಬಹಳ ಮುಖ್ಯ ಹಾಗೂ ನಾವು ಮಾಡುತ್ತಿರುವ ಕರ್ತವ್ಯ ಅತಿ ಮುಖ್ಯವಾದದ್ದು ಎಂಬುದನ್ನು ನಮ್ಮ ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ.

ಸಾರ್ವಜನಿಕ ಸೇವೆಗಾಗಿಯೇ ಇರುವ ನಾವು ಕಂಕಣ ಬದ್ಧರಾಗಿ ಜನರನ್ನು ರಕ್ಷಿಸುವ ಸಮಯವಿದು ಎಲ್ಲರೂ ಸೇರಿ ಉತ್ತಮವಾಗಿ ಕಾರ್ಯನಿರ್ವಹಿಸೋಣ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

The post ಕೊರೊನಾ ಸಂಕಷ್ಟದಲ್ಲಿಯೂ ಕಾರ್ಯನಿರ್ವಹಿಸುತ್ತಿರೋ ಪೊಲೀಸರಿಗೆ ಭಾಸ್ಕರ್ ರಾವ್ ಸಲಹೆ appeared first on News First Kannada.

Source: newsfirstlive.com

Source link