ಕೊರೊನಾ ಸಂಕಷ್ಟದಲ್ಲಿ ಕನ್ನಡಿಗರ ನೆರವಿಗೆ ಬಂದ ಕಪಿಲ್​ ಶರ್ಮಾ, ಭೂಮಿ ಪೆಡ್ನೆಕರ್

ಕೊರೊನಾ ಸಂಕಷ್ಟದಲ್ಲಿ ಕನ್ನಡಿಗರ ನೆರವಿಗೆ ಬಂದ ಕಪಿಲ್​ ಶರ್ಮಾ, ಭೂಮಿ ಪೆಡ್ನೆಕರ್

ಕೊರೊನಾ ಎರಡನೇ ಅಲೆಯ ತೀವ್ರತೆಗೆ ಕಡಿವಾಣ ಹಾಕಿ ಸೋಂಕಿಗೆ ಒಳಗಾಗಿರುವ ಜನರಿಗೆ ಉತ್ತಮ ಚಿಕಿತ್ಸೆ ಒದಗಿಸಲು ಸರ್ಕಾರ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಇದರ ನಡುವೆಯೇ ಸರ್ಕಾರವೊಂದರಿಂದಲೇ ಎಲ್ಲವೂ ಮಾಡಲು ಸಾಧ್ಯವಿಲ್ಲ, ನಮ್ಮ ಕೈಲಾದಷ್ಟು ಸಹಾಯ ಮಾಡೋಣ ಅಂತಾ ಹಲವು ಸಂಘ, ಸಂಸ್ಥೆಗಳು, ಉದ್ಯಮಿಗಳು ಸೇರಿದಂತೆ ಸಿನಿ ತಾರೆಯರು ಪ್ರಯತ್ನಿಸುತ್ತಿದ್ದಾರೆ. ಸದ್ಯ ಈ ಸಾಲಿಗೆ ಬಾಲಿವುಡ್​ ನಟಿ ಭೂಮಿ ಪೆಡ್ನೆಕರ್​​, ಹಾಸ್ಯ ನಟ ಕಪಿಲ್​ ಶರ್ಮಾ ಸೇರಿಕೊಂಡಿದ್ದು, ರಾಜ್ಯದಲ್ಲಿ ಆಕ್ಸಿಜನ್​ ಬಸ್​ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದಾರೆ.

ರವಿಶಂಕರ್ ಮಿಷನ್ ಜಿಂದಗಿ ಅಭಿಯಾನಕ್ಕೆ ಭೂಮಿ ಪೆಡ್ನೆಕರ್​​, ಕಪಿಲ್​ ಶರ್ಮಾ ಕೈ ಜೋಡಿಸಿದ್ದಾರೆ. ಈ ಕಾರ್ಯಕ್ರಮದ ಅಡಿ ಕರ್ನಾಟಕದ ಹೊಸಕೋಟೆ, ದೇವನಹಳ್ಳಿ, ನೆಮಮಂಗಲ-1. ನೆಮಮಂಗಲ-2 ಕಡೆ ಆಕ್ಸಿಜನ್ ಬಸ್​​ ಸೇವೆ ನೀಡಲು ಮುಂದಾಗಿದ್ದಾರೆ.

ಈ ಕುರಿತು ಮಾತನಾಡಿರುವ ಭೂಮಿ, ದೇಶದ ಗ್ರಾಮೀಣ ಭಾಗದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಸಣ್ಣ ಸಣ್ಣ ಪಟ್ಟಣ, ಹಳ್ಳಿಗಳಿಂದಲೂ ಹೆಚ್ಚು ಪಾಸಿಟಿವ್ ಕೇಸ್​ ವರದಿಯಾಗುತ್ತಿದೆ. ಆದರೆ ಈ ಭಾಗದಲ್ಲಿ ಅಗತ್ಯವಿರುವಷ್ಟು ವೈದ್ಯಕೀಯ ಸೌಲಭ್ಯಗಳು ಇಲ್ಲ. ಆದ್ದರಿಂದ ಮಿಷನ್​ ಜಿಂದಗಿ ಅಡಿ ಅಗತ್ಯವಿರುವ ಭಾಗಗಳಲ್ಲಿ ಆಕ್ಸಿಜನ್​ ಪೂರೈಕೆ ಮಾಡಲು ಮುಂದಾಗಿದ್ದೇವೆ. ಗ್ರಾಮೀಣ ಪ್ರದೇಶಗಳನ್ನು ತಲುಪುವುದು ನಮ್ಮ ಉದ್ದೇಶವಿದೆ. ಕರ್ನಾಟಕದಲ್ಲಿ ಇದು ಆರಂಭವಾಗಿದ್ದು, ಬಳಿಕ ಬೇರೆ ಬೇರೆ ರಾಜ್ಯಗಳಲ್ಲೂ ವಿಸ್ತರಿಸುವ ಚಿಂತನೆ ಇದೆ ಎಂದು ವಿವರಿಸಿದ್ದಾರೆ.

ಮನುಷ್ಯರಾಗಿ ಸಂಕಷ್ಟದ ಸಮಯದಲ್ಲಿ ಒಬ್ಬರಿಗೆ ಒಬ್ಬರೂ ಬೆಂಬಲ ನೀಡುವ ಅಗತ್ಯವಿದೆ. ನನ್ನಿಂದ ಆಗೋ ಅಲ್ಪ ಕಾರ್ಯ ಮಾಡಲು ಮುಂದಾಗಿದ್ದು, ಗುರುದೇವ್ ಮತ್ತು ಭಾರತೀಯ ಜೈನ್​​ ಸಂಘಟನೆಯೊಂದಿಗೆ ಕಾರ್ಯನಿರ್ವಹಿಸುವುದು ಹೆಮ್ಮೆ ಎನಿಸುತ್ತಿದೆ ಎಂದು ಕಪಿಲ್ ಶರ್ಮಾ ತಿಳಿಸಿದ್ದಾರೆ.

 

View this post on Instagram

 

A post shared by Bhumi 🌻 (@bhumipednekar)

The post ಕೊರೊನಾ ಸಂಕಷ್ಟದಲ್ಲಿ ಕನ್ನಡಿಗರ ನೆರವಿಗೆ ಬಂದ ಕಪಿಲ್​ ಶರ್ಮಾ, ಭೂಮಿ ಪೆಡ್ನೆಕರ್ appeared first on News First Kannada.

Source: newsfirstlive.com

Source link