ಬೆಂಗಳೂರು: ಕೊರೊನಾದ ಎರಡನೇ ಅಲೆಯು ದೇಶವನ್ನ ಬಿಟ್ಟು ಬಿಡದೇ ಕಾಡಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಕೂಡ ಹೊರತಾಗಿಲ್ಲ, ಬೆಂಗಳೂರು ಸಹ ಕೊರೊನಾದ ಎರಡನೇ ಅಲೆಯ ಹೊಡೆತಕ್ಕೆ ಜರ್ಜರಿತಗೊಂಡಿತ್ತು. ಇಂತಹ ಸಂಕಷ್ಟದಲ್ಲಿ ಬಿಇಎಲ್​ (Bharat Electronics) ತನ್ನ ನೌಕರರ ಬೆನ್ನುಲುಬಾಗಿ ನಿಂತಿರೋದು ವಿಶೇಷವಾಗಿದೆ.

ಸರ್ಕಾರದ ಕೊರೊನಾ ನಿಯಮದ ಪ್ರಕಾರವೇ ಉದ್ಯೋಗಿಗಳ ರಕ್ಷಣೆಗೆ ನಿಂತ ಬಿಇಎಲ್​.. 2021 ಮಾರ್ಚ್​ 29 ರಿಂದ ಲಸಿಕೆಗೆ ಹಾಕಿಸಲು ಗಮನ ಹರಿಸಿತು. ಬಿಇಎಲ್ ಟೌನ್‌ಶಿಪ್‌ನಲ್ಲಿ ಲಸಿಕೆ ಕೇಂದ್ರವನ್ನು ಪ್ರಾರಂಭಿಸಿತು. 30.04.2021ರವರೆಗೂ ತನ್ನ ಲಸಿಕೆ ಕೇಂದ್ರವನ್ನ ಮುಂದುವರಿಸಿತ್ತು. ಈ ವೇಳೆ ಸುಮಾರು 6500ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಹಾಗೂ ಕುಟುಂಬಸ್ಥರಿಗೆ ಲಸಿಕೆಯನ್ನ ನೀಡಿದೆ. ಈಗಲೂ ಕೂಡ ಕೊರೊನಾ ವಿರುದ್ಧ ಹೋರಾಟವನ್ನ ಬಿಇಎಲ್ ಸಂಸ್ಥೆ ಮುಂದುವರಿಸಿದೆ.

ಜೊತೆಗೆ ನೌಕರರ ವ್ಯಾಕ್ಸಿನೇಷನ್‌ಗಾಗಿ ರಾಜ್ಯ ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಬಿಇಎಲ್ ನೌಕರರನ್ನು ಸೇರಿಸುವ ಪ್ರಯತ್ನಗಳು ಯಶಸ್ವಿಯಾಗಿದೆ. ಈ ಮೂಲಕ ಬಿಇಎಲ್ ಆವರಣದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಅನ್ನು ಪುನರಾರಂಭಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತದೆ. ಇನ್ನು 2020 ಜೂನ್​ನಿಂದ ಬಿಇಎಲ್ ಬಿಜಿ ಟೌನ್‌ಶಿಪ್‌ನಲ್ಲಿ ಕ್ಯಾರೆಂಟೈನ್ ಸೌಲಭ್ಯವನ್ನ ತೆರೆಯಲಾಗಿದೆ. ಇಲ್ಲಿ ರೋಗಲಕ್ಷಣ/ ಲಕ್ಷಣರಹಿತ ಪ್ರಕರಣಗಳಿಗೆ ಪ್ರತ್ಯೇಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಇಲ್ಲಿ ಸಂಸ್ಥೆಯಿಂದ ಉಚಿತವಾಗಿ ಆಹಾರ ಸೌಲಭ್ಯವನ್ನು ಕೂಡ ನೀಡಲಾಗಿದೆ.

ಬಿಇಎಲ್​ ಕೈಗೊಂಡಿರುವ ಪ್ರಮುಖ ಕ್ರಮಗಳು

 • ಕೋವಿಡ್ ಟಾಸ್ಕ್ ಫೋರ್ಸ್ ಮತ್ತು ಕೋವಿಡ್ ವಾರ್ ರೂಮ್ ಸ್ಥಾಪನೆ
 • ಕೋವಿಡ್ ವಾರ್ ರೂಮ್ ಆಸ್ಪತ್ರೆಯಲ್ಲಿ ಸೂಕ್ತ ಹಾಸಿಗೆಗಳು/ಆಮ್ಲಜನಕ ವ್ಯವಸ್ಥೆ
 • ಬಿಇಎಲ್ ವೈದ್ಯರ ಜೊತೆ ಸಮಾಲೋಚನೆಗಾಗಿ 24/7 ಸಹಾಯವಾಣಿ
 • ಕೊರೊನಾ ಸೋಂಕಿತರಿಗಾಗಿ ಟೆಲಿ-ಕನ್ಸಲ್ಟಿಯನ್
 • ಬಿಇಎಲ್ ಮ್ಯಾನೇಜ್‌ಮೆಂಟ್ ಆಸ್ಪತ್ರೆಗಳಿಗೆ 50% ಮುಂಗಡ ಪಾವತಿಸಲು ಅನುಮೋದನೆ
 • ಉದ್ಯೋಗಿಗಳು/ ಕುಟುಂಬಸ್ಥರ ಹಣಕಾಸು ಅಡಚಣೆಗೆ ಸ್ಪಂದನೆ
 • ಬಿಇಎಲ್ ಸಂಸ್ಥೆಯಿಂದ ನೌಕರರಿಗಾಗಿ ಆ್ಯಂಬುಲೆನ್ಸ್​ ಸೇವೆ
 • ಕೊರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರೋರಿಗಾಗಿ ಫಾಲೋ ಅಪ್ ತಂಡದಿಂದ ಮೇಲ್ವಿಚಾರಣೆ ವ್ಯವಸ್ಥೆ
 • ಈ ಎಲ್ಲಾ ವ್ಯವಸ್ಥೆಗಳನ್ನ ಮಾಡಿದರೂ ಕೆಲ ಉದ್ಯೋಗಿಗಳನ್ನ ಸಂಸ್ಥೆ ಕಳೆದುಕೊಂಡಿದೆ

ಕೊರೊನಾಗಿ ಜಾಗೃತಿ

 • ಕೊರೊನಾ ಎಚ್ಚರಿಕೆ ಸಂಬಂಧಿಸಿದಂತೆ ಕರಪತ್ರಗಳ ಹಂಚಿಕೆ
 • ಸಂಸ್ಥೆಯ ಪ್ರಮುಖ ಸ್ಥಳಗಳಲ್ಲಿ ಕೊರೊನಾ ನಿಯಮಗಳನ್ನ ಅಂಟಿಸಲಾಗಿದೆ
 • ಊಟ ಮಾಡುವ ಸ್ಥಳಗಳಲ್ಲಿ ಕೊರೊನಾ ಕುರಿತು ಜಾಗೃತಿ, ಮೊಬೈಲ್ ವ್ಯಾನ್‌ಗಳ ಮೂಲಕವೂ ಸಾರ್ವಜನಿಕ ಪ್ರಕಟಣೆ
 • ಆಂತರಿಕ ವೆಬ್‌ಸೈಟ್ ಮೂಲಕ ಕೋವಿಡ್ ಮುನ್ನೆಚ್ಚರಿಕೆ ವಿವರಣೆಗಳು ಮತ್ತು ಪೋಸ್ಟರ್‌ಗಳ ಪ್ರದರ್ಶನ
 • ನೌಕರರಿಗೆ ಹಾಗೂ ಕುಟುಂಬಸ್ಥರಿಗೆ ಅನುಕೂಲ ಆಗಲಿ ಅಂತಾ ವಿವಿಧ ಭಾಷಗಳಲ್ಲಿ ಕೊರೊನಾ ಬಗ್ಗೆ ಎಚ್ಚರಿಕೆ ಸಂದೇಶ
 • ಕೋವಿಡ್ ಪರೀಕ್ಷೆ ಮತ್ತು ತಪಾಸಣಾ ಶಿಬಿರ

ಎರಡನೇ ಅಲೆಯ ಟ್ರ್ಯಾಕಿಂಗ್ 

 • ಮೇಲಿನ ಕ್ರಮಗಳ ಜೊತೆಗೆ, ಸಾಮಾಜಿಕ ಅಂತರವನ್ನ ಕಾಪಾಡಿಕೊಳ್ಳುವುದು ಮತ್ತು ಕೆಲಸ ಶಿಫ್ಟ್​ಗಳಲ್ಲಿ ಬದಲಾವಣೆ
 • ಜನಸಂದಣಿಯನ್ನು ತಪ್ಪಿಸೋದು
 • ನಿಗದಿತ ಕರ್ತವ್ಯಗಳನ್ನು ನಿರ್ವಹಿಸಲು ಸರ್ಕಾರದಿಂದ ಅನುಮತಿ ಪಡೆಯುವುದು
 • ಕೊವಿಡ್ ಟಾಸ್ಕ್ ಫೋರ್ಸ್ ರಚನೆ, ಸಹಾಯ ಸಾಲು ಸಂಖ್ಯೆ. 24/7
 • ರೋಗಿಗಳಿಗೆ ನೀಡಬೇಕಾಗಿರುವ ಔಷಧಿ ಮತ್ತು ಸಮಾಲೋಚನೆ
 • ಕೊರೊನಾ ನಿಯಂತ್ರಣಕ್ಕಾಗಿ ಕೆಲವು ಸಿಬ್ಬಂದಿಗೆ ತರಬೇತಿ, ಅದಕ್ಕಾಗಿ ಪ್ರತ್ಯೇಕ ಕೊಠಡಿ ಸ್ಥಾಪನೆ

ವ್ಯಾಕ್ಸಿನೇಷನ್

 • ಬಿಬಿಎಂಪಿ ಸಹಕಾರದೊಂದಿಗೆ ವಿಶೇಷ ವ್ಯಾಕ್ಸಿನೇಷನ್ ಕೇಂದ್ರ ಸ್ಥಾಪನೆ, ಬಿಇಎಲ್ ಉದ್ಯೋಗಿಗಳು, ಗುತ್ತಿಗೆ ಕೆಲಸಗಾರರು ಮತ್ತು ಪ್ರಶಿಕ್ಷಣಾರ್ಥಿಗಳಿಗೆ ಲಸಿಕೆಗಳನ್ನು ನೀಡಲಾಗುತ್ತದೆ
 • ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನ ನೀಡಲಾಗುತ್ತಿದೆ
 • 15 ಸಾವಿರ ಡೋಸ್​ ವ್ಯಾಕ್ಸಿನೇಷನ್ ಮೂಲಕ ಬಿಇಎಲ್​ ಶೇಕಡ 90 ರಷ್ಟು ಉದ್ಯೋಗಿಗಳಿಗೆ ವ್ಯಾಕ್ಸಿನ್ ನೀಡುವಲ್ಲಿ ಯಶಸ್ವಿಯಾಗಿದೆ.

The post ಕೊರೊನಾ ಸಂಕಷ್ಟದಲ್ಲಿ ನೌಕರರ ಬೆನ್ನಿಗೆ ನಿಂತ BEL; ಶೇ.90 ರಷ್ಟು ವ್ಯಾಕ್ಸಿನೇಷನ್ appeared first on News First Kannada.

Source: newsfirstlive.com

Source link