ರಾಜ್ಯದಲ್ಲಿ ಕೊರೊನಾ ಚೈನ್ ಕಟ್ ಮಾಡೋಕೆ ಸರ್ಕಾರ 14 ದಿನಗಳು ಲಾಕ್​ಡೌನ್ ಘೋಷಣೆ ಮಾಡಿದೆ. ಇದರ ಪರಿಣಾಮ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರನ್ನ ಹಸಿವು ಕಾಡ್ತಿದೆ. ಇಂತಹ ಸಂಕಷ್ಟದ ಪರಿಸ್ಥಿತಿಯನ್ನ ಅರಿತ ಕಿರುತೆರೆಯ ನಟ ಕಿರಣ್ ರಾಜ್ ಹಾಗೂ ನಿರ್ದೇಶಕ ಸಹನಾ ಮೂರ್ತಿ ಕಷ್ಟದಲ್ಲಿ ಸಿಲುಕಿದವರ ನೆರವಿಗೆ ನಿಂತಿದ್ದಾರೆ.

 

ಕನ್ನಡತಿ ಧಾರವಾಹಿ ಖ್ಯಾತಿಯ ನಟ ಕಿರಣ್ ರಾಜ್ ಹಾಗೂ ನಿರ್ದೇಶಕ ಸಹನಾ ಮೂರ್ತಿ ತಂಡ ಬಡವರ ತುತ್ತಿನ ಚೀಲ ತುಂಬಿಸುವ ಕಾಯಕದಲ್ಲಿ ತಲ್ಲೀನವಾಗಿದೆ. ಕಿರಣ್ ರಾಜ್ ಫೌಂಡೇಶನ್ ಮೂಲಕ ಅವಶ್ಯಕತೆ ಇರುವವರಿಗೆ ಆಹಾರ ಹಂಚುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ.

ಕೊರೊನಾ ಬಂತು ಅಂದ್ರೆ ಸಾಕು ಅವರನ್ನು ನೋಡುವ ರೀತಿ ಬದಲಾಗುತ್ತದೆ. ಅವರ ಹತ್ತಿರ ಹೋದ್ರೆ ನಮಗೂ ಕೊರೊನಾ ಬರುತ್ತೆ ಎಂಬ ಭಯದಲ್ಲಿ ಕೊರೊನಾ ಸೋಂಕಿತರನ್ನು ದೂರವಿಟ್ಟು ಬಿಟ್ಟಿದ್ದಾರೆ. ಆದರೆ ಅವರನ್ನ ನಮ್ಮಂತೆ ಮನುಷ್ಯರು, ಸಾಮಾನ್ಯ ಮನುಷ್ಯರಂತೆ ನೋಡಬೇಕು. ಹೀಗಾಗಿ ನಾವು ಕೊರೊನಾ ಸೋಂಕಿಗೆ ತುತ್ತಾಗಿರುವ ಸೋಂಕಿತರ ಮನೆ ಬಾಗಿಲಿಗೆ ದಿನಸಿ ಕಿಟ್​ಗಳನ್ನ ತಲುಪಿಸುತ್ತಿದ್ದೇವೆ ಎನ್ನುತ್ತಿದ್ದಾರೆ ಕಿರಣ್ ರಾಜ್.

ಇವರ ಜೊತೆಗೆ ರೋಸ್, ತ್ರಿವಿಕ್ರಮ ಸಿನಿಮಾಗಳ ನಿರ್ದೇಶಕ ಸಹನಾ ಮೂರ್ತಿ ಕೂಡ ಹಸಿದವರಿಗೆ ಅನ್ನ ತಲುಪಿಸುವ ಕೆಲಸದಲ್ಲಿ ತಲ್ಲೀನರಾಗಿದ್ದಾರೆ. ಸಹನಾ ಮೂರ್ತಿ ಇಸ್ಕಾನ್ ಸಹಯೋಗದೊಂದಿಗೆ ಪ್ರತಿನಿತ್ಯ 3,000 ಮಂದಿಗೆ ಆಹಾರ ಪೂರೈಕೆ ಮಾಡ್ತಿದ್ದಾರೆ. ನಾಗರಬಾವಿಯ ಸುತ್ತಮುತ್ತಲಿನ ಏರಿಯಾಗಳಲ್ಲಿ ಇರುವ ಬಡವರು, ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳಿಗೆ ಆಹಾರ ಪೂರೈಕೆ ಮಾಡ್ತಿದ್ದಾರೆ.

ಈಗಾಗಲೇ ಚಿತ್ರರಂಗದ ಬೆರಳೆಣಿಕೆ ಮಂದಿ ಕೊರೊನಾ ಸಂಕಷ್ಟಕ್ಕೆ ಮಿಡಿದಿದ್ದಾರೆ. ಸದ್ಯ ಕರ್ನಾಟಕದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದ್ದು, ಚಿತ್ರರಂಗದ ಕಡೆಯಿಂದ ಮತ್ತಷ್ಟು ನೆರವು ಹರಿದು ಬರಲಿ. ಕೊರೊನಾ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಶಕ್ತಿ ಸಿಗಲಿ ಎಂದು ಆಶಿಸೋಣ.

 

The post ಕೊರೊನಾ ಸಂಕಷ್ಟದಲ್ಲಿ ಹಸಿದವರ ಹೊಟ್ಟೆ ತುಂಬಿಸ್ತಿದ್ದಾರೆ ನಿರ್ದೇಶಕ ಸಹನಾ ಮೂರ್ತಿ appeared first on News First Kannada.

Source: newsfirstlive.com

Source link