ಬೆಂಗಳೂರು: ಕೊರೊನಾ ಸಂಕಷ್ಟದ ಸಮಯದಲ್ಲಿ ನಟ ಕಿಚ್ಚ ಸುದೀಪ್ ಹಲವು ರೀತಿಯಲ್ಲಿ ಜನರಿಗೆ ಸಹಾಯ ಮಾಡ್ತಿದ್ದಾರೆ. ಇತ್ತೀಚೆಗೆ ಬಿಗ್​ಬಾಸ್​​ ಸ್ಪರ್ಧಿ ಸೋನು ಪಾಟೀಲ್​ ಅವರ ತಾಯಿಯ ಚಿಕಿತ್ಸೆಗೆ ಸಹಾಯ ಮಾಡಿದ್ದ ಕಿಚ್ಚ, ಈಗ ಹಸಿದವರ ಹೊಟ್ಟೆ ತುಂಬಿಸುವ ಮಹತ್ಕಾರ್ಯದಲ್ಲಿ ತೊಡಗಿದ್ದಾರೆ.

ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ಕಡೆಯಿಂದ ಹಸಿದವರ ಹೊಟ್ಟೆ ತುಂಬಿಸುವ ಕಾಯಕ ಶುರುವಾಗಿದೆ. ಕಿಚ್ಚನ ಕೈ ತುತ್ತು ಎಂಬ ಕಾನ್ಸೆಪ್ಟ್​ ಅಡಿ ಇಂದು ಕೊರೊನಾ ವಾರಿಯರ್ಸ್​​ಗೆ ಊಟದ ವ್ಯವಸ್ಥೆ ಮಾಡಲಾಗಿದೆ. ನಾಳೆಯಿಂದ ಕೊರೊನಾ ನಿಯಂತ್ರಣಕ್ಕೆ ಬರೋವರೆಗೂ ಪ್ರತಿನಿತ್ಯ ಅಗತ್ಯ ಇರೋ ಜನರಿಗೆ ಊಟ ವಿತರಿಸಲಾಗುತ್ತದೆ.

ಈಗಾಗಲೇ ಕೊವೀಡ್ ಸೋಂಕಿತರ ನೆರವಿಗೆ ನಿಂತಿರುವ ಕಿಚ್ಚ ಸುದೀಪ್ ಟ್ರಸ್ಟ್, 300 ಆಕ್ಸಿಜನ್ ಸಿಲಿಂಡರ್ ನೆರವು ನೀಡಿ ಹಲವು  ಜೀವಗಳ ರಕ್ಷಣೆ ಮಾಡಿದೆ.

 

The post ಕೊರೊನಾ ಸಂಕಷ್ಟದಲ್ಲಿ ಹೊಟ್ಟೆ ತುಂಬಿಸುವ ಕಾಯಕ ​​..ಹಸಿದವರಿಗೆ ‘ಕಿಚ್ಚನ ಕೈ ತುತ್ತು’ appeared first on News First Kannada.

Source: newsfirstlive.com

Source link