-ಲಕ್ಷ ಗಟ್ಟಲೆ ಬಿಲ್ ಫೋಟೋ ವೈರಲ್

ಕೋಲಾರ: ಕೊರೊನಾ ಹೆಸರಲ್ಲಿ ಕೋಲಾರದ ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ಲಕ್ಷ ಲಕ್ಷ ಹಣ ಲೂಟಿ ಮಾಡುತ್ತಿವೆ. ಇಡೀ ದೇಶ ಕೊರೊನಾ ಸಂಕಷ್ಟದಲ್ಲಿದ್ದರೆ ಇತ್ತ ಖಾಸಗಿ ಆಸ್ಪತ್ರೆಗಳು ಕೊರೊನಾ ಸೋಂಕಿತರಿಂದ ಹಣ ಸುಲಿಗೆ ಮಾಡುತ್ತಿರುವುದು ಇದೀಗ ಬೆಳೆಕಿಗೆ ಬಂದಿದೆ.

ಕೋಲಾರ ನಗರದ ಡೂಂ ಲೈಟ್ ವೃತ್ತದಲ್ಲಿರುವ ಲಕ್ಷ್ಮಿ ಆಸ್ಪತ್ರೆಯಲ್ಲಿ 11 ದಿನಕ್ಕೆ 3 ಲಕ್ಷ 18 ಸಾವಿರ ಬಿಲ್ ಮಾಡಿ ಲಕ್ಷ ಗಟ್ಟಲೆ ಹಣ ಪಡೆದ ಬಿಲ್‍ವೊಂದು ಎಲ್ಲೆಡೆ ವೈರಲ್ ಆಗಿದೆ. ಕೊರೊನಾ ಸೋಂಕಿತ ಅರವಿಂದ್ ಎಂಬವರಿಗೆ ಲಕ್ಷ ಗಟ್ಟಲೆ ಬಿಲ್ ಮಾಡಿ ಸದ್ಯ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಅದರಲ್ಲೂ ವೈದ್ಯರ ಫೀಸ್ ಅರ್ಧ ಲಕ್ಷ ಹಾಗೂ ಐಸೋಲೇಷನ್ ವಾರ್ಡ್‍ಗೆ ಒಂದೂವರೆ ಲಕ್ಷ ಬಿಲ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ಕೊರೊನಾ ನೆಪದಲ್ಲಿ ದುಡ್ಡಿಗಾಗಿ ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯರು ಜನರ ರಕ್ತ ಹಿಂಡುತ್ತಿದ್ದಾರೆ. ಇದೀಗ ಬಿಲ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಸರ್ಕಾರ ಹಾಗೂ ಆರೋಗ್ಯ ಸಚಿವರನ್ನು ನೆಟ್ಟಿಗರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

The post ಕೊರೊನಾ ಸಂಕಷ್ಟದ ಮಧ್ಯೆ ಖಾಸಗಿ ಆಸ್ಪತ್ರೆಗಳಿಂದ ಸುಲಿಗೆ appeared first on Public TV.

Source: publictv.in

Source link