ದೇಶದಲ್ಲಿ ಕೊರೊನಾ ಎರಡನೇ ಅಲೆ ದಿನೇ ದಿನೇ ಹೆಚ್ಚಾಗಿ ದೊಡ್ಡ ಪ್ರಮಾಣದಲ್ಲಿ ಬಾಧಿಸುತ್ತಿದೆ. ಮಹಾರಾಷ್ಟ, ದೆಹಲಿ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಈಗಾಗಲೇ ಲಾಕ್​ಡೌನ್​ ಆಗಿವೆ. ಲಕ್ಷಾಂತರ ಜನ ಮತ್ತೆ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಸದ್ಯ ಕೊರೊನಾದಿಂದ ಬಳಲುತ್ತಿರುವ ಮುಂಗಡ ಕಾರ್ಮಿಕರಿಗೆ ಬಾಲಿವುಡ್​ ಮೋಸ್ಟ್​ ಎಲಿಜಿಬಲ್​ ಬ್ಯಾಚುಲರ್​ ಸಲ್ಮಾನ್​ ಖಾನ್​ ಆಹಾರ ಪೂರೈಕೆ ಮಾಡಿದ್ದಾರೆ. ಅಷ್ಟೇ ಅಲ್ಲದೇ, ತಾವು ತಲುಪಿಸುವ ಆಹಾರವನ್ನ ಮೊದಲು ತಾವೇ ರುಚಿ ನೋಡಿ ಬಳಿಕ ಗ್ರೀನ್​ ಸಿಗ್ನಲ್​ ಕೊಟ್ಟಿದ್ದಾರೆ.

ಹೌದು.. ಸದ್ಯ ತಮ್ಮ ಮುಂದಿನ ಸಿನಿಮಾ ‘ರಾಧೆ’ ಬಿಡುಗಡೆಗೆ ರೆಡಿಯಾಗ್ತಿರುವ ಸಲ್ಮಾನ್​ ಖಾನ್​​, ಕೋವಿಡ್​ನಿಂದ ಬಳಲುತ್ತಿರುವ ಮುಂಗಡ ಕಾರ್ಮಿಕರಿಗೆ 5000 ಆಹಾರದ ಪ್ಯಾಕೆಟ್​​ಗಳನ್ನ ನೀಡುವ ಮೂಲಕ ನೆರವಿಗೆ ಬಂದಿದ್ದಾರೆ. ಆಹಾರ ಸಂಬಂಧ ಪಟ್ಟವರಿಗೆ ತಲುಪುವ ಮೊದಲು ಅದು ತಿನ್ನಲು ಯೋಗ್ಯವಾಗಿದೆಯಾ, ಒಳ್ಳೆಯ ಕ್ವಾಲಿಟಿ ಆಹಾರನಾ ಅನ್ನೋದನ್ನ ಖುದ್ದು ಸಲ್ಮಾನ್​ ಪರೀಕ್ಷಿಸಿರೋದು ಸದ್ಯ ಮೆಚ್ಚುಗೆ ಪಾತ್ರವಾಗಿದೆ.

The post ಕೊರೊನಾ ಸಂಕಷ್ಟದ ವೇಳೆ ಆಹಾರ ಪೂರೈಕೆ; ತಾವೇ ರುಚಿ ನೋಡಿ ಓಕೆ ಅಂದ ಸಲ್ಮಾನ್​ ಖಾನ್​ appeared first on News First Kannada.

Source: News First Kannada
Read More