ಕೊರೊನಾ ಎರಡನೇ ಅಲೆ ಸಿನಿಮಾರಂಗಕ್ಕೆ ಸಂದಿಗ್ಧ ಪರಿಸ್ಥಿತಿಯನ್ನ ತಂದೊಡ್ಡಿದೆ. ಥಿಯೇಟರ್​ಗಳು ಬೀಗ ಜಡೆದುಕೊಂಡಿವೆ. ಸಿನಿಮಾ ಶೂಟಿಂಗ್​ಗಳು ಪ್ಯಾಕಪ್​ ಆಗಿವೆ. ಚಿತ್ರೀಕರಣಕ್ಕೆ ಅವಕಾಶವಿದ್ದರೂ ಹೆದರುವಂತ ಪರಿಸ್ಥಿತಿ ಸಿನಿಮಾರಂಗಕ್ಕೆ ಬಂದೊದಗಿದೆ.

ಮದಗಜ ರೋರಿಂಗ್​ ಸ್ಟಾರ್​ ಶ್ರೀಮುರಳಿ ನಟನೆಯ ಬಹುನಿರೀಕ್ಷಿತ ಸಿನಿಮಾ. ಮಹೇಶ್​ ಕುಮಾರ್​ ಸಾರಥ್ಯದಲ್ಲಿ ಮೂಡಿಬರುತ್ತಿರುವ ಮದಗಜ ಇಷ್ಟೊತ್ತಿಗಾಗಲೇ ಶೂಟಿಂಗ್​ ಮುಗಿಸಿಕೊಂಡು ಎಡಿಟಿಂಗ್​ ಟೇಬಲ್ ಸೇರಬೇಕಿತ್ತು. ಆದ್ರೆ ಅನೇಕ ಕಾರಣಗಳಿಂದ ಶೂಟಿಂಗ್​​ ಸೆಟ್​​ನಲ್ಲೆ ಸ್ಟಕ್​​ ಆಗಿದೆ ಚಿತ್ರತಂಡ.
ಮದಗಜ ಫಿಲ್ಮ್​​ ಟೀಮ್ ಇನ್ನೇನು ಕಡೆಯ ಹಂತದ ಶೂಟಿಂಗ್​​ಗೆ ಸಜ್ಜಾಗಿತ್ತು​. ಆ್ಯಕ್ಷನ್​​ ಸಿಕ್ವೇನ್ಸ್​​​ಗೆಂದು ಶೂಟಿಂಗ್​​ಗೂ ಇಳಿದಿತ್ತು. ಆದ್ರೆ ಅಚಾನಕ್​ ಆಗಿ ಶ್ರೀಮುರಳಿ ಕಾಲಿಗೆ ಪೆಟ್ಟು ಬಿದ್ದ ಕಾರಣ 15 ದಿನ ಶೂಟಿಂಗ್​ ಮುಂದೆ ಹಾಕಲಾಯ್ತು. ಇನ್ನೇನು ಎಲ್ಲವೂ ಸರಿ ಆಯ್ತು, ಶೂಟಿಂಗ್​​ಗೆ ಹೊಗಬಹುದು ಅನ್ನುವಷ್ಟರಲ್ಲಿ ಕೊರೊನಾ ಎರಡನೇ ಅಲೆ ಹೆಚ್ಚಾಗಿ ಮದಗಜ ಫಿಲ್ಮ್​ ಶೂಟಿಂಗ್​ ಕನಸು ಭಗ್ನವಾಗಿದೆ. ಹಳ್ಳಿಗಳಲ್ಲಿ ಶೂಟಿಂಗ್​​ಗೆ ಪರ್ಮಿಷನ್​ ಸಿಕ್ತಿಲ್ಲ , ಹಿರಿಯ ನಟರು ಬರ್ತಿಲ್ಲ, 50 ಜನರಿಗಿಂತ ಹೆಚ್ಚು ಜನ ಸೇರೋ ಹಾಗಿಲ್ಲ, ಊರಿಗೆಂದು ಹೋದ ಸಿನಿಮಾ ಕೆಲಸಗಾರು ವಾಪಸ್​ ಬಂದಿಲ್ಲ. ಹೀಗೆ ನಾನಾ ಕಾರಣಗಳಿಂದ ಮದಗಜ ಫಿಲ್ಮ್​ ಶೂಟಿಂಗ್​ ತಡವಾಗ್ತಿದೆ.
ಆಗಸ್ಟ್​ 20ನೇ ತಾರೀಖು ಪ್ರೇಕ್ಷಕರ ಮುಂದೆ ಬರೋ ಪ್ಲಾನ್​​ನಲ್ಲಿತ್ತು ಮದಗಜ ಫಿಲ್ಮ್​ ಟೀಮ್.​ ಈಗ ಸೆಪ್ಟೆಂಬರ್​ ತಪ್ಪಿದ್ರೆ ಅಕ್ಟೋಬರ್​ ತಿಂಗಳು ಪ್ರೇಕ್ಷಕರ ಮುಂದೆ ಬರೋ ಯೋಜನೆಯಲ್ಲಿದೆ.

The post ಕೊರೊನಾ ಸಂಕಷ್ಟ: ವಿಳಂಬವಾದ ರೋರಿಂಗ್ ಸ್ಟಾರ್​ ಮುರಳಿಯ ಮದಗಜ ಶೂಟಿಂಗ್ appeared first on News First Kannada.

Source: News First Kannada
Read More