ಹೈದರಾಬಾದ್​: ದೇಶದಲ್ಲಿ ಕೊರೊನಾ ಎರಡನೇ ತೀವ್ರತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಈ ಬಾರಿ ಪರೀಕ್ಷೆ ಎದುರಿಸಬೇಕಿದ್ದ 5,,21,393 ವಿದ್ಯಾರ್ಥಿಗಳನ್ನು ಯಾವುದೇ ಪರೀಕ್ಷೆ ಇಲ್ಲದೇ ಪಾಸ್​ ಮಾಡಿ ಆದೇಶ ನೀಡಿದೆ.

ತೆಲಂಗಾಣ ಶಿಕ್ಷಣ ಸಚಿವೆ ಸಬಿತಾ ಇಂದ್ರ ರೆಡ್ಡಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಸದ್ಯ ಪಾಸ್​ ಮಾಡಿರುವ ವಿದ್ಯಾರ್ಥಿಗಳಲ್ಲಿ ಶಾಲೆಗಳಲ್ಲಿ ಈಗಾಗಲೇ ನಡೆಸಿರುವ ಪರೀಕ್ಷೆಗಳಲ್ಲಿ 10 ಜಿಪಿಎ ಅಂಕಗಳನ್ನು ಪಡೆದ ಅನ್ವಯ 2,10,647 ವಿದ್ಯಾರ್ಥಿಗಳಿಗೆ ಎಫ್​​ಎ-1 ಮಾರ್ಕ್ಸ್​ ನೀಡಿದ್ದು, 535 ಶಾಲೆಗಳು ಹೊಸ ಉತ್ತಮ ಫಲಿತಾಂಶ ಪಡೆದಿವೆ. ರಚನಾತ್ಮಕ ಮೌಲ್ಯಮಾಪನ ಅನ್ವಯ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಸಿಎಂ ಕೆ ಚಂದ್ರ ಶೇಖರ್ ರಾವ್ ಅವರ ತೀರ್ಮಾನ ಮೇರೆಗೆ ಪರೀಕ್ಷೆಗಳಿಲ್ಲದೇ ವಿದ್ಯಾರ್ಥಿಗಳನ್ನು ಪಾಸ್​ ಮಾಡಲಾಗಿದೆ. ಫಲಿತಾಂಶಗಳು ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನವನ್ನು ಆಧರಿಸಿವೆ. ಸಂಜೆ ಮೂರು ಗಂಟೆಯ ಬಳಿಕ ವಿದ್ಯಾರ್ಥಿಗಳ ಫಲಿತಾಂಶವನ್ನ ಶಿಕ್ಷಣ ಇಲಾಖೆಯ ವೆಬ್​​ಸೈಟ್ ನೋಡಬಹುದು ಎಂದು ತಿಳಿಸಿದ್ದಾರೆ.

The post ಕೊರೊನಾ ಸಂಕಷ್ಟ; SSLC ವಿದ್ಯಾರ್ಥಿಗಳನ್ನು ಪಾಸ್​​ ಮಾಡಿ ತೆಲಂಗಾಣ ಸರ್ಕಾರದ ಆದೇಶ appeared first on News First Kannada.

Source: newsfirstlive.com

Source link