ಬೆಂಗಳೂರು: 2-DG ಅಥವಾ 2 ಡಿ-ಆಕ್ಸಿ-ಡಿ-ಗ್ಲುಕೋಸ್​.. ಇದು ಕೊರೊನಾಗೆ ಚಿಕಿತ್ಸೆ ನೀಡಲು ಡಿಆರ್​ಡಿಒ ಅಭಿವೃದ್ದಿಪಡಿಸಿರೋ  ಔಷಧಿ. ಈ ಔಷಧಿ ಕಿಲ್ಲರ್ ಕೊರೊನಾಗೆ ರಾಮ ಬಾಣವಾಗಿದ್ದು, ಅತ್ಯುತ್ತಮ ರಿಸಲ್ಟ್ ಕೊಟ್ಟ ಹಿನ್ನೆಲೆಯಲ್ಲಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ತುರ್ತು ಬಳಕೆಗೆ ಅನುಮತಿ ನೀಡಿದೆ. ಜೊತೆಗೆ ಕರ್ನಾಟಕದಲ್ಲೂ DRDO-2DG ಪ್ರಯೋಗ ಮಾಡಿ ಗೆದ್ದಿದ್ದಾರೆ. ಅಷ್ಟಕ್ಕೂ ಕರ್ನಾಟಕದಲ್ಲಿ ಈ ಸಂಜೀವಿನಿ ಟ್ರಯಲ್ ನಡೆದಿದ್ದು ಎಲ್ಲಿ? ಯಾವ ವೈದ್ಯರು ಈ ಪ್ರಯೋಗ ಮಾಡಿದ್ರು? ಅದರ ರಿಸಲ್ಟ್ ಏನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮಹಾಮಾರಿ ಕೊರೊನಾ ಇಡೀ ವಿಶ್ವವನ್ನೇ ಬೆಚ್ಚಿ ಬೇಳಿಸಿದೆ. ಸಾಕಷ್ಟು ಸಾವು ನೋವುಗಳನ್ನು ಕಂಡ ಜನರು ಭಯದಲ್ಲೇ ಜೀವಿಸುತ್ತಿದ್ದಾರೆ. ಅಲ್ಲದೆ ಯಾವಾಗ ಈ ಮಹಾ ಮಾರಿಯಿಂದ ಮುಕ್ತಿ ಪಡಿಯುತ್ತೀವೋ ಎಂದು ಪರಿತಪಸ್ತಿದ್ದಾರೆ. ಇಂತಹ ಸಂದಿಗ್ಧ ಪರಿಸ್ಥಿಯಲ್ಲಿ ಭಾರತೀಯರಲ್ಲಿ ಆಶಾ ಭಾವವೆ ಮೂಡಿಸಿದ್ದು ಡಾ.ರೆಡ್ಡೀಸ್​ ಲ್ಯಾಬೋರೇಟರಿನಲ್ಲಿ ತಯಾರಾಗಿರುವ DRDO 2DG ಔಷಧಿ. ಈ ಔಷಧಿ ದೇಶದ ಜನರಲ್ಲಿ ಹೊಸ ಬೆಳಕನ್ನು ಮೂಡಿಸಿದೆ.

ವಿಶ್ವದಾದ್ಯಂತ ಅನೇಕ ತಜ್ಞರು ಕೊರೊನಾ ವಿರುದ್ಧ ಹೋರಾಡುವ ಔಷಧಿ ಕಂಡುಹಿಡಿಯಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಈ ಹೋರಾಟದಲ್ಲಿ ಭಾರತ ಗೆಲ್ಲುವ ಎಲ್ಲಾ ಲಕ್ಷಣಗಳು ಗೋಚರಿಸ್ತಿವೆ. ಡಿಆರ್​ಡಿಓ ಔಷದಿ ಕೊರೊನಾ ಸೋಂಕಿತರ ಸಂಜೀವಿನಿಯಾಗಿದೆ. ಭಾರತದಲ್ಲಿ ಸುಮಾರು 11 ನಗರಗಳಲ್ಲಿ ಈ ಔಷಧಿ ಪ್ರಯೋಗ ನಡೆದಿದ್ದು, ಯಶಸ್ವಿಯೂ ಆಗಿದೆ. ಅಂತೆಯೇ ಕರ್ನಾಟಕದಲ್ಲೂ ಈ ಔಷಧಿಯ ಟ್ರಯಲ್ ಸಕ್ಸಸ್ ಆಗಿದೆ. ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಈ ಸಂಜೀವಿನಿಯನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸಲಾಗಿದೆ.

ಡಿಆರ್​ಡಿಓ ಔಷಧಿಯನ್ನು ಬಿಜಿಎಸ್​ ಆಸ್ಪತ್ರೆಯ ಔಷಧಿ ವಿಭಾಗದ ಮುಖ್ಯಸ್ಥರಾದ ಪ್ರೋ. ಡಾ, ಬಾಲಚಂದ್ರನ್ ನೇತೃತ್ವದಲ್ಲಿ ಡಾ.ಅಭಿಜಿತ್, ಡಾ.ಯತೀಶ್, ಡಾ. ಜಯಶ್ರೀ ಹಾಗೂ ಡಾ. ಭಾರ್ಗವಿ ತಂಡದಿಂದ ಟ್ರಯಲ್ ನಡೆದಿದೆ. ಅಚ್ಚರಿ ಎಂಬತೆ ಗಂಭೀರ ಉಸಿರಾಟದ ಸಮಸ್ಯೆ ಇದ್ದವರು ಡಿಆರ್​ಡಿಓ ಔಷಧಿ ಪಡೆದ ನಂತರ ಚೇತರಿಸಿಕೊಂಡಿದ್ದಾರಂತೆ. ಜೊತೆಗೆ ಕೇವಲ ಮೂರೇ ದಿನಗಳಲ್ಲಿ ಡಿಆರ್​ಡಿಓ ಔಷಧಿ ಪಡೆದವರ ಕೊರೊನಾ ವರದಿ ನೆಗೆಟಿವ್ ಬಂದಿದೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ನ್ಯೂಸ್​​ಫಸ್ಟ್​ಗೆ ಲಭ್ಯವಾಗಿದೆ.

ಸದ್ಯ ಈ ಸಂಜೀವಿನಿಯನ್ನ ಏಮ್ಸ್, ಆರ್ಮಿ ಹಾಸ್ಪಿಟಲ್ಸ್​ ಹಾಗೂ ಡಿಆರ್​ಡಿಓ ಸ್ಥಾಪನೆ ಮಾಡಿರುವ ಕೊರೊನಾ ಚಿಕಿತ್ಸಾಲಯಗಳಲ್ಲಿ ಬಳಸಲಾಗ್ತಿದೆ. ಜೊತೆಗೆ ದೇಶದ ಕೆಲ ಆಯ್ದ ಆಸ್ಪತ್ರೆಗಳಿಗೂ ಪೂರೈಕೆ ಮಾಡಲಾಗಿದೆ. ಇನ್ನು ಜೂನ್​​ ಮೊದಲ ವಾರದಿಂದ ದೇಶದ ಎಲ್ಲ ಆಸ್ಪತ್ರೆಗಳಿಗೂ ಈ ಔಷಧವನ್ನು ಸರಬರಾಜು ಮಾಡಲಾಗುತ್ತೆ ಅಂತ ಕೇಂದ್ರ ಸರ್ಕಾರ ತಿಳಿಸಿದೆ.

ಆದರೆ ಈ ಔಷಧಿ ನೇರವಾಗಿ ಜನರಿಗೆ ಸಿಗೋದಿಲ್ಲ. ಕೊರೊನಾಗೆ ಚಿಕಿತ್ಸೆ ನೀಡ್ತಿರುವ ಆಸ್ಪತ್ರೆಗಳು ಡಾ.ರೆಡ್ಡೀಸ್​ ಲ್ಯಾಬೋರೇಟರಿ ಸಂಪರ್ಕ ಮಾಡಿದ್ರೆ, ಡೀಲರ್ಸ್​ ಮುಖಾಂತರ ನೇರವಾಗಿ ಆಸ್ಪತ್ರೆಗೆ ಈ ಔಷಧಿ ಸೇರಲಿದೆ. ಈ ಔಷಧಿಯನ್ನು ಕೊರೊನಾದಿಂದ ಆರೋಗ್ಯ ಗಂಭೀರವಾಗಿರುವ ರೋಗಿಗಳಿಗೆ ಮಾತ್ರ ನೀಡಲಾಗುತ್ತೆ. ದಿನದಲ್ಲಿ ಎರಡು ಬಾರಿ ಈ ಔಷಧಿ ಸೇವಿಸಿದ್ರೆ ಮೂರರಿಂದ ನಾಲ್ಕು ದಿನಗಳಲ್ಲಿ ಸೋಂಕಿತರು ಚೇತರಿಕೆ ಕಾಣ್ತಾರಂತೆ.

ವಿಶೇಷ ವರದಿ: ಸತೀಶ್, ನ್ಯೂಸ್​ಫಸ್ಟ್​​   

The post ‘ಕೊರೊನಾ ಸಂಜೀವಿನಿ’ DRDOದ 2-DG ಔಷಧಿಗೆ ರಾಜ್ಯದಲ್ಲೂ ಯಶಸ್ಸು appeared first on News First Kannada.

Source: newsfirstlive.com

Source link