ಕೊರೊನಾ ವಿರುದ್ಧದ ಸಮರದಲ್ಲಿ ಭಾರತೀಯ ವಾಯುಸೇನೆ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಆಕ್ಸಿಜನ್ ಟ್ಯಾಂಕರ್ಗಳನ್ನು ತ್ವರಿತಗತಿಯಲ್ಲಿ ಸಾಗಿಸಲು ಎಲ್ಲಾ ಕಡೆ ಸನ್ನದ್ಧವಾಗಿವೆ. ಈಗಾಗಲೇ ದೇಶ-ವಿದೇಶಗಳಲ್ಲಿ ಆಕ್ಸಿಜನ್ ಟ್ಯಾಂಕರ್ ಹೊತ್ತ ಫ್ಲೈಟ್ ಗಳು ಹಾರಾಟ ನಡೆಸುತ್ತಿವೆ. ಈ ಆಪರೇಷನ್ ಹೇಗೆ ನಡೆಯುತ್ತೆ, ಯಾವೆಲ್ಲ ಸ್ಪೆಷಲ್ ಫ್ಲೈಟ್ಗಳನ್ನ ಬಳಸಿಕೊಳ್ಳಲಾಗ್ತಾ ಇದೆ ಅನ್ನೋ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಕೊರೊನಾ ವಿಪರೀತವಾಗಿ ಹರಡ್ತಾ ಇದ್ದಂತೆ ಇದನ್ನು ಕಂಟ್ರೋಲ್ ಮಾಡಲು ಸೇನೆಯೇ ಮುಂದಾಗ್ತಾ ಇದೆ. ಒಂದು ಕಡೆ ವೈದ್ಯಕೀಯ ವಲಯ ಅಹೋರಾತ್ರಿ ಶ್ರಮಿಸ್ತಾ ಇದ್ರೆ, ಇನ್ನೊಂದು ಕಡೆ ವಾಯುಸೇನೆಯ ವಿಮಾನಗಳಲ್ಲಿ ಆಕ್ಸಿಜನ್ ಟ್ಯಾಂಕರ್ಗಳನ್ನು ತಂದಿಳಿಸಲಾಗ್ತಾ ಇದೆ. ದೇಶದ ವಿವಿಧ ಕಡೆ ಆಕ್ಸಿಜನ್ ಕೊರತೆ ಆಗ್ತಾ ಇದ್ದಂತೆ ,ಬೇಡಿಕೆ ಹೆಚ್ಚಾಗ್ತಾ ಇದ್ದಂತೆ ಇದನ್ನು ಶೀಘ್ರಗತಿಯಲ್ಲಿ ಒಂದೆಡೆಯಿಂದ ಇನ್ನೊಂದು ಕಡೆಗೆ ಸಾಗಿಸಲು ಏರ್ಫೋರ್ಸ್ ನಿತ್ಯ ಶ್ರಮಿಸ್ತಾ ಇದೆ. ಇದರಿಂದ ಗಂಟೆ ಗಂಟೆಗೂ ಆಕ್ಸಿಜನ್ ಟ್ಯಾಂಕರ್ಗಳು ವಿವಿಧ ಕಡೆ ಹೋಗಿ ತಲುಪ್ತಾ ಇದೆ. ಇದು ಕೊರೊನಾ ವಿರುದ್ಧ ಹೋರಾಟದಲ್ಲಿ ಇಂಡಿಯನ್ ಏರ್ಫೋರ್ಸ್ ನ ಮಹತ್ವದ ಕೊಡುಗೆ.

ಆಕ್ಸಿಜನ್ ಟ್ಯಾಂಕರ್ಗಳನ್ನು ಟ್ರೈನ್ನಲ್ಲಿ ಸಾಲು ಸಾಲಾಗಿ ಸಾಗಿಸ್ತಾ ಇದ್ದ ದೃಶ್ಯಗಳನ್ನು ನೋಡಿದ್ದೇವೆ. ಹಾಗೆಯೇ ಏರ್ ಫೋರ್ಸ್ ಫ್ಲೈಟ್ನಲ್ಲಿ ತಂದಿಳಿಸಿದ ದೃಶ್ಯಗಳನ್ನು ನೋಡಿದ್ದೇವೆ. ಆಕ್ಸಿಜನ್ ತುಂಬಿರುವ ಈ ಭಾರವಾದ ಟ್ಯಾಂಕರ್ಗಳನ್ನು ಹೊತ್ತೊಯ್ಯೋದು ಸುಲಭವಲ್ಲ. ಇಷ್ಟು ಭಾರವಾಗಿರುವ ಟ್ಯಾಂಕರ್ಗಳನ್ನು ಹೊತ್ತು ಆಕಾಶದಲ್ಲಿ ಹಾರಾಡಬೇಕಾದರೆ ಈ ಫ್ಲೈಟ್ ಗಳು ಅದೆಷ್ಟು ಬಲಿಷ್ಠವಾಗಿರಬೇಕು ಅಂತ ಯೋಚಿಸಿ. ಈ ಆಕ್ಸಿಜನ್ ಆಪರೇಷನ್ನಲ್ಲಿ ತೊಡಗಿಸಿಕೊಂಡ ಫ್ಲೈಟ್ಗಳು ಹೇಗಿರ್ತಾವೆ ಅಂತ ತಿಳಿಯೋ ಕುತೂಹಲ ಕೂಡ ಎಲ್ಲರಿಗೂ ಇದ್ದೇ ಇರುತ್ತೆ.

ಇಂಡಿಯನ್ ಏರ್ ಫೋರ್ಸ್ನ ಆ ಫ್ಲೈಟ್​ಗಳು ಯಾವ್ಯಾವು..?
ವಾಯುಸೇನೆ ಬಳಿ ಇರುವ ಸಿ-17 ಗ್ಲೋಬ್ ಮಾಸ್ಟರ್
ಆಕ್ಸಿಜನ್ ಪೂರೈಕೆಗೆ ಸಿ-17ನದ್ದು ಮೇಜರ್ ರೋಲ್

ಸಿಂಗಾಪುರ್​ನಿಂದ ಭಾರತಕ್ಕೆ ತಡರಾತ್ರಿ ಕಂಟೈನರ್ಗಳನ್ನು ಹೊತ್ತು ತಂದ ವಿಮಾನ ಸಿ-17. ಅಮೆರಿಕದಲ್ಲಿ ತಯಾರಾದ ಈ ವಿಮಾನ ಭಾರತೀಯ ವಾಯುಸೇನೆಗೆ ಸೆಪ್ಟೆಂಬರ್ 2019ರಲ್ಲಿ ಸೇರಿಕೊಂಡಿತ್ತು. ಈ ವಿಮಾನವನ್ನು ಯಾವುದೇ ತರಹದ ಎಮರ್ಜೆನ್ಸಿ ಟೈಮ್ನಲ್ಲಿ ಅನುಕೂಲವಾಗುವಂತೆಯೇ ಡಿಸೈನ್ ಮಾಡಲಾಗಿದೆ. ಬರೋಬ್ಬರಿ 77 ಟನ್​​​ಗಳಷ್ಟು ತೂಕದ ಸಾಮಗ್ರಿಗಳನ್ನು ಹೊತ್ತು ಹಾರಬಲ್ಲ ಈ ಗ್ಲೋಬ್ ಮಾಸ್ಟರ್ ಗಂಟೆಗೆ 1080 ಕಿಲೋಮೀಟರ್  ವೇಗವಾಗಿ ಹಾರಾಡುವ ಸಾಮರ್ಥ್ಯ ಹೊಂದಿದೆ. ಅಮೆರಿಕದ ವಾಯುಸೇನೆ ಬಳಿ 222 ಸಿ-17 ವಿಮಾನಗಳಿದ್ದರೆ, ಭಾರತಿಯ ವಾಯುಪಡೆಯ ಬಳಿ 11 ವಿಮಾನಗಳಿದ್ದು ವಿಶ್ವದಲ್ಲೇ ಎರಡನೆ ಸ್ಥಾನದಲ್ಲಿದೆ.

ಟ್ಯಾಂಕರ್ ಗಳ ಸಾಗಾಟಕ್ಕೆ ಇಲ್ಯೂಶನ್ ಐಎಲ್-76

ಭಾರತೀಯ ವಾಯುಪಡೆಯ ಬಳಿ 17 ಇಲ್ಯೂಶನ್ ಐಎಲ್-76 ವಿಮಾನಗಳಿವೆ. ಭಾರತ-ರಷ್ಯಾದ ಸಂಬಂಧ ವೃದ್ಧಿಸಲು ಈ ವಿಮಾನವನ್ನು ರಷ್ಯಾದಿಂದ ಭಾರತ ಖರೀದಿಸಿತ್ತು. ದೇಶದಲ್ಲಿ ಯಾವುದೇ ನೈಸರ್ಗಿಕ ವಿಪತ್ತು ಸಂಭವಿಸಿದ್ರೂ, ಸಂಕಷ್ಟದಲ್ಲಿ ಇರುವ ಜನರ ನೆರವಿಗೆ ಮೊದಲು ಬರುವ ವಿಮಾನವೇ ಐಎಲ್-76. ಕೋವಿಡ್ ವಿರುದ್ಧ ಹೋರಾಟದಲ್ಲಿ ದೇಶದ ವಿವಿಧೆಡೆಗೆ ಆಕ್ಸಿಜನ್ ಪೂರೈಕೆ ಮಾಡಿದ ಈ ವಿಮಾನ 48 ಟನ್ಗಳಷ್ಟು ತೂಕವನ್ನು ಹೊರುವ ಸಾಮರ್ಥ್ಯ ಹೊಂದಿದೆ. ಅಲ್ಲದೆ ಗಂಟೆಗೆ 900 ಕಿಲೋಮೀಟರ್ ವೇಗವಾಗಿ ಹಾರಬಲ್ಲದು ಇಲ್ಯೂಶನ್-76.

ವಾಯುಪಡೆಯ ಫೇವರೇಟ್ ಸೂಪರ್ ಹರ್ಕ್ಯುಲಸ್ ಸಿ-130 ಜೆ
ಅಗತ್ಯ ಸೇವೆ ಎಂದರೆ ವಾಯುಪಡೆಗೆ ನೆನಪಾಗೋದೆ ಸಿ-130 ಜೆ

1998ರಿಂದ ವಿಶ್ವದೆಲ್ಲೆಡೆ ಹೆಸರುವಾಸಿ ಆಗಿರುವ ಕಾರ್ಗೋ ವಿಮಾನ ಸಿ-130 ಜೆ. ಈ ವಿಮಾನವನ್ನು ನಿರ್ಮಾಣ ಮಾಡಿರುವುದು ಅಮೆರಿಕ. ಭಾರತೀಯ ವಾಯುಪಡೆಯ ಪಾಲಿಗೂ 12 ಸಿ-130 ಜೆ ವಿಮಾನಗಳು ಆಲ್-ಟೈಂ- ಫೇವರೇಟ್. ಇದರ ಸೇವಾ ಸಾಮರ್ಥ್ಯವನ್ನು ತಿಳಿದು ಇದಕ್ಕೆ ಸೂಪರ್ ಹರ್ಕ್ಯುಲಸ್ ಎನ್ನುವ ಬಿರುದು ಸಹ ಇದೆ. ಈ ವಿಮಾನವನ್ನು ಕಳೆದ ವರ್ಷದ ಕೋವಿಡ್ ಸಮಯದಲ್ಲಿ ಮೆಡಿಕಲ್ ಸಲಕರಣೆಗಳನ್ನು ಹೊತ್ತು ತರಲು ಬಳಸಲಾಗಿತ್ತು. ಇದೀಗ ದೇಶದ ಎಲ್ಲ ಕಡೆ ಕೊರತೆ ಇರುವ ವೈದ್ಯಕೀಯ ಉಪಕರಣಗಳನ್ನು ಹೊತ್ತು ತರಲು ಬಳಸಲಾಗುತ್ತಿದೆ. ಇದರ ಸಾಮರ್ಥ್ಯ 19 ಟನ್ಗಳಿದ್ದು ಗಂಟೆಗೆ 670 ಕಿಲೋಮೀಟರ್ ವೇಗವಾಗಿ ಹಾರುತ್ತೆ ಸೂಪರ್ ಹರ್ಕ್ಯುಲಸ್.

ಮಲ್ಟಿ-ಮಿಷನ್ ಹೆಲಿಕಾಪ್ಟರ್, ಸಿಎಚ್ -47 ಎಫ್ ಚಿನೂಕ್
ಸಾಟಿಯಿಲ್ಲದ ಕಾರ್ಯತಂತ್ರದ ಸಾಮರ್ಥ್ಯದ ಹೆಲಿಕಾಪ್ಟರ್

ಚಿನೂಕ್ ಒಂದು ಸುಧಾರಿತ ಮಲ್ಟಿ-ಮಿಷನ್ ಹೆಲಿಕಾಪ್ಟರ್. ಇದು ಭಾರತೀಯ ವಾಯುಪಡೆಗೆ ಯುದ್ಧ ಮತ್ತು ಆಪತ್ಕಾಲದ ಕಾರ್ಯಾಚರಣೆಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳತ್ತದೆ. ಇದರ ಕಾರ್ಯತಂತ್ರದ ಸಾಮರ್ಥ್ಯ ಸಾಟಿಯಿಲ್ಲದ್ದು. ಚಿನೂಕ್ ಹೆಚ್ಚಿನ ಎತ್ತರಕ್ಕೆ 10 ಟನ್ ಗಳಷ್ಟು ಭಾರವಾದ ಪೇಲೋಡ್‌ಗಳನ್ನು ತಲುಪಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದನ್ನು ಹೆಚ್ಚಾಗಿ ಹಿಮಾಲಯದ ಕಾರ್ಯಾಚರಣೆಗಳಿಗೆ ಬಳಸಲಾಗುತ್ತಿತ್ತು. ಆದರೆ ಇದೀಗ ಕೋವಿಡ್ ವಿರುದ್ಧ ಸಮರದಲ್ಲಿ ವಾಯುಪಡೆ ಬಳಿ ಇರುವ 15 ಚಿನೂಕ್ ಕಾರ್ಯನಿರ್ವಹಿಸುತ್ತಿದೆ.

ಎರಡು ಇಂಜಿನ್ ಇರುವ ಏರ್​ಕ್ರಾಪ್ಟ್ ಆಂಟೊನೊವ್- 32

 

2019ರಲ್ಲಿ ಉಕ್ಕ್ರೇನ್ ನಿಂದ ಇಂಡಿಯನ್ ಏರ್ ಪೋರ್ಸ್ ತರಿಸಿಕೊಂಡಿರುವ ಆಂಟೊನೊವ್ 32 ಪ್ರಾಕೃತಿಕ ದುರಂತಗಳಾದಾಗ ಬಳಸಲಾಗುತ್ತಿತ್ತು. ಕರ್ನಾಟಕದ ಕೊಡಗಿನಲ್ಲಿ ಅತಿವೃಷ್ಟಿ ಆದಾಗ ವಾಯು ಪಡೆ ಇದೆ ಏರ್ ಕ್ರಾಫ್ಟ್ ಬಳಸಿ ಸಮೀಕ್ಷೆ ನಡೆಸಲಾಗಿತ್ತು. ಇದೀಗ ಕೋವಿಡ್ ಅಗತ್ಯ ಪೂರೈಕೆಗೆ ಇದನ್ನು ಬಳಸಲಾಗುತ್ತಿದೆ. ಭಾರತೀಯರ ಬಳಿ ಬರೋಬರಿ 104 ಆಂಟೊನೊವ್ ಏರ್ ಕ್ರಾಫ್ಟ್ ಗಳಿದ್ದಾವೆ. ಇದರ ಸಾಮರ್ಥ್ಯ 6.5 ಟನ್ ಗಳಷ್ಟಿದ್ದು ಡಬಲ್ ಇಂಜಿನ್ ಏರ್​ಕ್ರಾಪ್ಟ್ ಇದಾಗಿದೆ. ಎರಡು ಇಂಜಿನ್ ಇರುವುದರಿಂದ ಇದರ ಸಾಮರ್ಥ್ಯ ಗಂಟೆಗೆ 540 ಕಿಲೋ ಮೀಟರ್ ವೇಗವಾಗಿ ಹಾರಬಲ್ಲದಾಗಿದೆ.

ಕೊರೊನಾ ತುರ್ತು ಅಗತ್ಯಕ್ಕೆ ಆವ್ರೋ ವಿಮಾನ ನಿಯೋಜನೆ

ಬ್ರಿಟನ್ ಮೂಲಕ ಅವ್ರೊ ಬ್ರಿಟಿಷ್ ವಿಮಾನ ಮೊದಲ ವಿಶ್ವಯುದ್ಧದಲ್ಲಿ ತರಬೇತುದಾರನಾಗಿ ಬಳಸಲಾಗಿತ್ತು. ಎರಡನೆಯ ಮಹಾಯುದ್ಧದ ಪ್ರಮುಖ ಬಾಂಬರ್‌ಗಳಲ್ಲಿ ಒಂದಾಗಿ ಕಾರ್ಯ ನಿರ್ವಹಿಸಿತ್ತು. ಈ ಏರ್​ಕ್ರಾಪ್ಟ್ ಭಾರತದ ಬಳಿ 57 ವಿಮಾನಗಳಿವೆ. 5 ಟನ್ ಗಳಷ್ಟು ತೂಕವನ್ನು ಹೊತ್ತು ಹಾರ ಬಲ್ಲ ಈ ವಿಮಾನ ಕೋವಿಡ್ ಅಗತ್ಯ ಸೇವೆಗಳಿಗೆ ಮೀಸಲಾಗಿದೆ.

ಕೊರೊನಾ ಸಮರಕ್ಕೆ 223 ಎಮ್-ಐ 17 ಹೆಲಿಕಾಪ್ಟರ್ ಬಳಕೆ

 

ಎಮ್-ಐ 17 ಪ್ರಬಲ ಹೆಲಿಕಾಪ್ಟರ್ ಪ್ಲಾಟ್‌ಫಾರ್ಮ್ ಆಗಿದ್ದು, ಆಧುನಿಕ ಏವಿಯಾನಿಕ್ಸ್ ಉಪಕರಣಗಳನ್ನು ಹೊಂದಿದೆ. ಅವುಗಳು ಅತ್ಯಾಧುನಿಕ ನ್ಯಾವಿಗೇಷನಲ್ ಉಪಕರಣಗಳು, ಹವಾಮಾನ ರಾಡಾರ್ ಹೊಂದಿರೊದು ವಿಶೇಷ. ಇದನ್ನು ಕೂಡ ಕೋವಿಡ್ ಪರಿಸ್ಥಿತಿ ನಿಭಾಯಿಸುವ ಕಾರ್ಯಗಳಿಗೆ ಬಳಸಲು ನಿರ್ಧರಿಸಲಾಗಿದೆ.

ಈಗಾಗಲೇ ಇಂಡಿಯನ್ ಏರ್ ಪೊರ್ಸ್ ಪಿಪಿಇ, ಪರೀಕ್ಷಾ ಕಿಟ್‌ಗಳು, ಅಗತ್ಯ ವಸ್ತುಗಳು ಮತ್ತು ಸಂಬಂಧಿತ ಉಪಕರಣಗಳು ಸೇರಿದಂತೆ ವೈದ್ಯಕೀಯ ಸಾಮಗ್ರಿಗಳ ಸಾಗಣೆಯನ್ನು, ವೈದ್ಯಕೀಯ ಸಿಬ್ಬಂದಿಗಳನ್ನು ವಾಯುಮಾರ್ಗದ ಮೂಲಕ ಸಾಗಿಸುವುವ ಕಾರ್ಯವನ್ನು ಕೈಗೊಂಡಿದೆ. ಅಷ್ಟೆ ಅಲ್ಲದೆ ಕೇಂದ್ರಾಡಳಿತ ಪ್ರದೇಶ ಲಡಾಖ್‌ ನಿಂದ ಪರೀಕ್ಷೆಗೆ ಸ್ವ್ಯಾಬ್ ಮಾದರಿಗಳನ್ನು ಸಾಗಿಸುವ ಬಹುಮುಖ್ಯ ಕೆಲಸವನ್ನು ಇಂಡಿಯನ್ ಏರ್ ಪೊರ್ಸ್ ಮುಂದುವರೆಸುತ್ತಿದೆ .

ಕೊರೊನಾ ಸಮರ ಗೆಲ್ಲಲು ಇಂಡಿಯನ್ ಏರ್ ಫೋರ್ಸ್ ಹಗಲಿರುಳು ಶ್ರಮಿಸ್ತಾ ಇದೆ. ಇದರಿಂದ ಕೊರೊನಾ ವಿರುದ್ಧದ ಆಪರೇಷನ್ ನ ವೇಗ ಹೆಚ್ಚಿದೆ. ದೇಶ-ವಿದೇಶಗಳಿಂದ ಕೆಲವೇ ಗಂಟೆಗಳಲ್ಲಿ ಅಗತ್ಯತೆ ಪೂರೈಸುತ್ತಿರುವ ಇಂಡಿಯನ್ ಏರ್ ಫೋರ್ಸ್ ಕಾರ್ಯವನ್ನು ಶ್ಲಾಘಿಸಲೇಬೇಕು.

The post ಕೊರೊನಾ ಸಮರಕ್ಕೆ IAF ನೆರವು: ಯಾವೆಲ್ಲಾ ಸ್ಪೆಷಲ್ ಫ್ಲೈಟ್- ಚಾಪರ್​​​​​ಗಳನ್ನ ಬಳಸಲಾಗ್ತಿದೆ? appeared first on News First Kannada.

Source: newsfirstlive.com

Source link