ಬೆಂಗಳೂರು: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಹಿರಿಯ ಪತ್ರಕರ್ತ ಮಹದೇವ್‌ ಪ್ರಕಾಶ್‌ (65) ಇಂದು ವಿಧಿವಶರಾಗಿದ್ದಾರೆ.

ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ನಾರಾಯಣ ಹೆಲ್ತ್​ಗೆ ದಾಖಲಾಗಿದ್ದರು. ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಮಹದೇವ್ ಪ್ರಕಾಶ್ ಇಂದು ಸಾವನ್ನಪ್ಪಿದ್ದಾರೆ.

ಮಹದೇವ್ ಪ್ರಕಾಶ್ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾಧ್ಯಮ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಈ ಭಾನುವಾರ ಪತ್ರಿಕೆಯ ಸಂಪಾದಕರು ಕೂಡ ಆಗಿದ್ದರು.

The post ಕೊರೊನಾ ಸೋಂಕಿಗೆ ಒಳಗಾಗಿದ್ದ ಹಿರಿಯ ಪತ್ರಕರ್ತ ಮಹದೇವ್‌ ಪ್ರಕಾಶ್‌ ನಿಧನ appeared first on News First Kannada.

Source: newsfirstlive.com

Source link