ಮೊದಲಿನಿಂದಲೂ ಸಾಮಾಜಿಕ ಕಾರ್ಯಗಳಲ್ಲಿ ಸೋನು ಸೂದ್ ಮುಂಚೂಣಿಯಲ್ಲಿದ್ದಾರೆ. ಕೊರೊನಾ ಬಂದಾಗಿನಿಂದಲಂತೂ ಅವರು ಮಾಡಿದ ಸೇವಾ, ಕಾರ್ಯ ಒಂದೆರಡಲ್ಲ. ಈಗಂತೂ ಮತ್ತೊಂದು ಹೆಜ್ಜೆ ಮುಂದೆ ಹೋಗಿ ತಾವೇ ಖುದ್ದು ಆಕ್ಸಿಜನ್ ಪ್ಲಾಂಟ್ ಸ್ಥಾಪನೆ ಮಾಡಲು ಮುಂದಾಗಿದ್ದಾರೆ ಬಾಲಿವುಡ್ ನಟ ಸೂದ್.

ಸಾಮಾಜಿಕ ಕಾರ್ಯಗಳಲ್ಲಿ ಸೋನು ಸೂದ್ ಮುಂಚೂಣಿ
ಬಾಲಿವುಡ್ ನಟ ಸೋನು ಸೂದ್ ಸಮಾಜ ಸೇವೆಯಲ್ಲಿ ಎತ್ತಿದ ಕೈ. ಮೊದಲಿನಿಂದಲೂ ಇವರ ಸ್ವಭಾವವೇ ಹೀಗೆ. ಕಷ್ಟದಲ್ಲಿದ್ದವರಿಗೆ ತಕ್ಷಣ ಸ್ಪಂದಿಸಿ ಅವರ ನೆರವಿಗೆ ಧಾವಿಸುತ್ತಾರೆ. ಕಳೆದ ವರ್ಷ ಕೊರೊನಾ ಬಂದು ಲಾಕ್ ಡೌನ್ ಆಗ್ತಾ ಇದ್ದ ಸಂದರ್ಭದಲ್ಲಿ ಮಹಾ ವಲಸೆ ಶುರುವಾಗಿತ್ತು. ಆಗ ತಮ್ಮ ತಮ್ಮ ಊರುಗಳಿಗೆ ತೆರಳಲು ಬಡಕಾರ್ಮಿಕರು ಪರದಾಡ್ತಾ ಇದ್ರು. ಆಗ ಅವರಿಗೆ ಬಸ್​​ ವ್ಯವಸ್ಥೆ ಮಾಡಿ ಜನರ ಜೊತೆ ನಿಂತಿದ್ರು ಸೋನು ಸೂದ್.

ಕೊರೊನಾ ಟೈಮ್ನಲ್ಲಿ ಇವರು ಮಾಡ್ತಾ ಇರುವ ಕೆಲಸ ಅಷ್ಟಿಷ್ಟಲ್ಲ. ಒಂದು ರೀತಿ ಅಪತ್ಬಾಂಧವನಂತೆ ಕಾಣ್ತಾ ಇದ್ದಾರೆ ಸೋನು ಸೂದ್. ಈಗ ದೇಶದ ಎಲ್ಲಾ ಕಡೆ ಆಕ್ಸಿಜನ್ಗಾಗಿ ಜನ ಪರದಾಡ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ ದುರಂತಗಳೂ ಸಂಭವಿಸಿವೆ. ಇನ್ನು ದೆಹಲಿಯಲ್ಲಂತೂ ರಸ್ತೆ ರಸ್ತೆಯಲ್ಲೇ ಆಕ್ಸಿಜನ್ ಕೊಟ್ಟು ಪ್ರಾಣ ಉಳಿಸ್ತಾ ಇರೋ ದೃಶ್ಯಗಳು ವೈರಲ್ ಆಗಿವೆ. ಇಷ್ಟೆಲ್ಲ ಆದ ಮೇಲೆ ಎಲ್ಲೆಲ್ಲಿ ಆಕ್ಸಿಜನ್ ಲಭ್ಯವಿದ್ಯೋ ಅಲ್ಲಿಂದೆಲ್ಲ ತರಿಸಲಾಗುತ್ತಿದೆ. ದೇಶ-ವಿದೇಶಗಳಿಂದ ಆಕ್ಸಿಜನ್ ಟ್ಯಾಂಕರ್​ಗಳು, ವಿಮಾನಗಳಲ್ಲಿ, ರೈಲುಗಳಲ್ಲಿ, ಹಡಗುಗಳಲ್ಲಿ ಬಂದಿಳಿಯುತ್ತಿವೆ. ಇಷ್ಟೊಂದು ಆಕ್ಸಿಜನ್ ಕೊರತೆ ಇರೋ ಸಂದರ್ಭದಲ್ಲಿ ಸೋನು ಸೂದ್ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಪ್ರಾಣವಾಯುವಿಗಾಗಿ ಆಕ್ಸಿಜನ್ ಪ್ಲಾಂಟ್ ಒಂದನ್ನು ತಾವೇ ಸ್ಥಾಪಿಸಲು ತೀರ್ಮಾನಿಸಿದ್ದಾರೆ.

ಇದು ನಟ ಸೋನು ಸೂದ್​ರವರ ಮತ್ತೊಂದು ಸಾಹಸ
ಸೋನು ಸೂದ್ ಅನ್ನೋ ಆಪತ್ಬಾಂಧವನ ಹೆಸರು ಈಗ ಕಾಶ್ಮೀರದಿಂದ ಕನ್ಯಾಕುಮಾರಿಯವರಿಗೆ ದೇಶದ ಮೂಲೆ ಮೂಲೆಯಲ್ಲೂ ಹಬ್ಬಿದೆ, ಅಭಿಮಾನದ ಹೆಸರಾಗುತ್ತಿದೆ. ಕಲಾವಿದ ಹಾಗೂ ಕಲಾವಿದರ ಕಲೆಗೆ ನಾಡು ನುಡಿಯ ಗಡಿ ರೇಖೆ ಇರೋದಿಲ್ಲ ಅನ್ನೋ ಹಾಗೆ ಸೋನು ಸೂದ್ ನಿಸ್ವಾರ್ಥ ಉಪಕಾರಕ್ಕೆ ಯಾವುದೇ ಗಡಿ ಗುಡಿ ರೇಖೆ ಇಲ್ಲ.

ಪ್ರಾಣ ವಾಯುಗಾಗಿ ಹಾಹಾಕಾರ ಉಂಟಾಗಿರೋ ಈ ಸಂದರ್ಭದಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕಾಗಿ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ ಆಪತ್ಬಾಂಧವ ಸೋನು ಸೂದ್​​. ಕಾಲ ನೋಡಿ ಹೆಂಗೆಲ್ಲ ಬದಲಾಗ್ತಿದೆ. ಒಂದು ಕಾಲದಲ್ಲಿ ತುರ್ತು ಸಂದರ್ಭ ಬಂದಾಗ ರಕ್ತಕ್ಕಾಗಿ ಜನ ಅಲೆದಾಡುತ್ತಿದ್ದರು. ಆದ್ರೆ ಈಗ ಗಾಳಿಗಾಗಿ, ಜೀವ ವಾಯುಗಾಗಿ ಅಲೆದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಆಕ್ಸಿಜನ್​ಗಾಗಿ ನಟ ಸೋನು ಸೂದ್​ ಮಾಡ್ತಿರೋದೇನು?
ಈ ಕೊರೊನಾ ಕಾಲದಲ್ಲಿ ಸೋನು ಸೂದ್​ ಎಂಬ ಕಲಾವಿದನೊಳಗೆ ಇದ್ದ ರಿಯಲ್ ಹೀರೋ ಹೊರ ಬಂದಿದ್ದಾನೆ. ಒಬ್ಬ ಕಲಾವಿದ ಅದ್ರಲೂ ವಿಲನ್​​ ಪಾತ್ರಧಾರಿ ಇಷ್ಟೆಲ್ಲ ಸಹಾಯ ಮಾಡಬಹುದಾ ಅನ್ನೋ ಅಚ್ಚರಿಯ ಆನಂದವನ್ನ ತೋರಿಸಿಕೊಟ್ಟಿದ್ದು ಸೋನು ಸೂದ್ ಅವರ ನಿಸ್ವಾರ್ಥ ಕಾರ್ಯ. ಕಳೆದ ವರ್ಷದ ಲಾಕ್ಡೌನ್ ಟೈಮ್​​ನಲ್ಲಿ ಮಹಾನಗರಿ ಮುಂಬೈಗೆ ಕೆಲಸಕ್ಕಾಗಿ ಹೋಗಿದ್ದ ಕೂಲಿಕಾರ್ಮಿಕರಿಗೆ ಊರಿಗೆ ಸೇಫಾಗಿ ಸೇರಿಸಿದ ಸಂಪರ್ಕ ಸಿಂಧು, ಅಭಿಮಾನ ಬಂಧು ಸೋನು ಸೂದ್​.

ಕಳೆದ ವರ್ಷ ಲಾಕ್ಡೌನ್ ಟೈಮ್​​ನಿಂದ ಸೋನು ಸೂದ್ ಸಹಾಯ ಹಸ್ತದ ಮನಮುಟ್ಟುವ ಮ್ಯಾರಥನ್ ಇಂದಿಗೂ ನಡೆಯುತ್ತಿದೆ. ಹಗಲು ರಾತ್ರಿ ಎನ್ನದೆ ಕಷ್ಟದಲ್ಲಿದ್ದವರಿಗೆ ಸಹಾಯ ಹಸ್ತವನ್ನ ಚಾಚುತ್ತಿದ್ದಾರೆ ರಿಯಲ್ ಹೀರೋ. ನಿಸ್ವಾರ್ಥ ಸೇವಾಕಾರ್ಯಗಳಿಂದಾಗಿ ಸೋನು ಸೂದ್ ಖ್ಯಾತಿ ಏಷ್ಯಾದ ಟಾಪ್ 50 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದ ತನಕ ತಂದು ನಿಲ್ಲಿಸಿದೆ. ಮಾತ್ ಎತ್ತಿದ್ರೆ ಕಲ್ಟ್ ಕಾಂಟ್ರೊವರ್ಶಿಯಲ್ ಸ್ಟೇಟ್​​​ಮೆಂಟ್ ಕೊಡೋ ರಾಖೀ ಸಾವಂತ್ ಬಾಯಲ್ಲಿ ಸೋನು ಸೂದ್ ಪ್ರಧಾನಮಂತ್ರಿಯಾದ್ರೆ ದೇಶಕ್ಕೆ ಒಳ್ಳೆದು ಅನ್ನೋ ಮಟ್ಟಕ್ಕೆ ಸೋನು ಸೂದ್ ಖ್ಯಾತಿ ಹೆಚ್ಚಾಗುತ್ತಿದೆ. ಈ ಮನಷ್ಯನಲ್ಲಿ ಇರೋ ಉಪಕಾರ ಮನೋಭವ ನಿಜಕ್ಕೂ ದೊಡ್ಡದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋನ್ ಸೂದ್ ಅಂತಹ ಮನಸ್ಥಿತಿ ಇರೋರು ಈ ದೇಶಕ್ಕೆ ಬೇಕೇ ಬೇಕು. ಅ

ಕೈಲಾದಷ್ಟು ಸಹಾಯದ ಹಸ್ತ ಚಾಚುತ್ತಿದ್ದಾರೆ ಖ್ಯಾತ ನಟ
ಸಾಮಾನ್ಯ ಜನರಿಗೆ ಕಳೆದ ತಿಂಗಳಿನ ತನಕ ಗ್ಯಾಸ್ ಸಿಲೆಂಡರ್ ಬಗ್ಗೆ ಮಾತ್ರ ಗೊತ್ತಿತ್ತು. ಪೆಟ್ರೋಲ್ ಡಿಸೇಲ್ಗಳ ಜೊತೆಗೆ ಅಡುಗೆ ಗ್ಯಾಸ್ ಸಿಲೆಂಡರ್ ಬೆಲೆಯು ಹೆಚ್ಚಾದಾಗ ಚಿಂತೆ ಶುರುವಾಗುತ್ತಿತ್ತು. ಆದ್ರೆ ಈಗ ಆ್ಯಕ್ಸಿಜನ್ ಸಿಲೆಂಡರ್​ಗಳ ಬಗ್ಗೆ ಚಿಂತೆ ಶುರುವಾಗಿದೆ. ಆ್ಯಕ್ಸಿಜನ್ ಸಿಲೆಂಡರ್​​​​​ ಬೇಡಿಕೆ ಹೆಚ್ಚಾಗಿದೆ. ಕೊರೊನಾಸುರ ಕೇಕೆ ಹಾಕುತ್ತಿರೋ ಈ ಕೆಟ್ಟ ಕಾಲದಲ್ಲಿ ಆಕ್ಸಿಜನ್ ಅಗತ್ಯತೆ ಅವಶ್ಯವಾಗಿದೆ. ಈ ಸಂದರ್ಭದಲ್ಲಿ ಒಂದು ದೃಢ ನಿರ್ಧಾರಕ್ಕೆ ಸೋನು ಸನ್ನದ್ಧರಾಗಿದ್ದಾರೆ. ಅದೇನಪ್ಪ ಅಂದ್ರೆ ತನ್ನದೆ ಖರ್ಚಿನಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಆಕ್ಸಿಜನ್ ಪ್ಲಾಂಟ್​ ನಿರ್ಮಾಣಕ್ಕೆ ನಟ ಸೋನು ಸಿದ್ದ
ಕೊರೊನಾ ಕತ್ತಲೆಯ ವಿರುದ್ಧ ಸೂರ್ಯನಾಗಿ, ಬಡತನವೆಂಬ ಕಷ್ಟದ ಎದುರು ಶೌರ್ಯನಾಗಿ ನಿಲ್ತಿದ್ದಾರೆ ಸೋನು ಸೂದ್​​. ದೇಶದಲ್ಲಿ ಹೆಚ್ಚಾಗಿರುವ ಪ್ರಮುಖ ನಾಲ್ಕು ನಗರಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಸೋನು ಸೂದ್ ನಿರ್ಧರಿಸಿದ್ದಾರಂತೆ. ಈಗಾಗಲೇ ಆಕ್ಸಿಜನ್ ಪ್ಲಾಂಟ್ ಅನ್ನು ಫ್ರಾನ್ಸ್​​​ನಿಂದ ಆರ್ಡರ್ ಮಾಡಲಾಗಿದ್ದು ಇನ್ನು 10ರಿಂದ 12 ದಿನಗಳ ಅಂತರದಲ್ಲಿ ಭಾರತಕ್ಕೆ ಬರಲಿದೆ. ಆದಷ್ಟು ಕಡು ಬಡವರನ್ನ ಈ ಕೊರೊನಾ ಮಾರಿಯಿಂದ ರಕ್ಷಿಸಬೇಕು ಅನ್ನೋ ಪಣದಲ್ಲಿ ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ ಸೋನು ಸೂದ್​​​.

ಸದಾ ಸೋಶಿಯಲ್ ಮೀಡಿಯದಲ್ಲಿ ಐ ಆ್ಯಮ್ ವಿಥ್ ಯೂ ಅಂತ ಭರವಸೆ ಕೊಡೋ ಸೋನು ಸೂದ್ ನನ್ನ ದೇಶ ಸಂಕಷ್ಟದಲ್ಲಿದೆ ಈಗ ನಾವೇನಾದ್ರು ಮಾಡ್ಲೇಬೇಕು ಅನ್ನೋ ಮನೋಭಾವದಿಂದ ಕಾರ್ಯ ಪ್ರೌವೃತರಾಗಿದ್ದಾರೆ. ಯಾವುದೇ ಊರಿನಿಂದ ಆಕ್ಸಿಜನ್​ಗಾಗಿ, ವೆಂಟಿಲೇಟರ್​​​ಗಾಗಿ, ಬೆಡ್​​ಗಾಗಿ ಕರೆ ಬಂದ್ರು ತಮ್ಮ ಟ್ರಸ್ಟ್​​​ ಕಡೆಯಿಂದ ತಕ್ಷಣವೇ ಸ್ಪಂದಿಸಿ ಸಹಾಯ ಮಾಡ್ತಿದ್ದಾರೆ. ಈ ಕಾರಣಕ್ಕೆ ಸೋನು ಸೂದ್ ಅವರನ್ನ ರಿಯಲ್ ಹೀರೋ ಎನ್ನುತ್ತಿದೆ ದೇಶ. ನಿಮ್ಮಲ್ಲೊಬ್ಬ ಸೋನು ಸೂದ್ ಇದ್ದೇ ಇರ್ತಾನೆ, ನೀವು ಮನಸ್ಸು ಮಾಡಿದರೆ ನಿಮ್ಮ ಕೈಲಾದಷ್ಟು ಸಹಾಯ ಮಾಡೇ ಮಾಡಬಹುದು.

ಸೋನು ಸೂದ್ ಒಬ್ಬರೇ ಅಲ್ಲ, ಹಲವಾರು ಉದ್ಯಮಿಗಳು, ಬೇರೆ ಬೇರೆ ಕ್ಷೇತ್ರದಲ್ಲಿ ಕೆಲಸ ಮಾಡ್ತಾ ಇರೋರು ಕೂಡ ಕೊರೊನಾ ಸಂಕಷ್ಟ ಕಾಲದಲ್ಲಿ ಕೈ ಜೋಡಿಸಿದ್ದಾರೆ, ನೆರವು ಕೊಡ್ತಾ ಇದ್ದಾರೆ. ಸೋನು ಸೂದ್ರಂತೆ ಇನ್ನಷ್ಟು ಮಂದಿಗೆ ಇದು ಸ್ಫೂರ್ತಿಯಾಗಲಿ ಅನ್ನೋದೇ ನಮ್ಮ ಉದ್ದೇಶ.

The post ಕೊರೊನಾ ಸೋಂಕಿತರಿಗಾಗಿ ಆಕ್ಸಿಜನ್ ಪ್ಲಾಂಟ್​ ಸ್ಥಾಪನೆಗೆ ಮುಂದಾದ ಸೋನು ಸೂದ್ appeared first on News First Kannada.

Source: newsfirstlive.com

Source link