ಅಬ್ಬಬ್ಬಾ ಇದೆಂಥಾ ಕೆಟ್ಟ ಪರಿಸ್ಥಿತಿ..!? ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಯಾಗಿದೆ. ದೇಶದೆಲ್ಲೆಡೆ ಜೀವ ವಾಯು ಆಮ್ಲಜನಕಕ್ಕಾಗಿ ಹಾಹಾಕಾರ ಉಲ್ಬಣವಾಗಿದೆ. ಆ್ಯಕ್ಸಿಜನ್​​​ ಪೂರೈಕೆಗಾಗಿ ಸರ್ಕಾರಗಳು ಸರ್ಕಸ್ ಮಾಡ್ತಿವೆ. ಆದ್ರೆ ಕೆಲ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಆ್ಯಕ್ಸಿಜನ್ ಪೂರೈಸಿ ಹತ್ತಾರು ಜನರ ಜೀವ ಉಳಿಸುತ್ತಿದ್ದಾರೆ.

ಈಗಾಗಲೇ ಕೊರೊನಾ ಮಹಾಮಾರಿಗೆ ಆ್ಯಕ್ಸಿಜನ್ ಸಿಗದೆ ಜನ ಸಾಲು ಸಾಲಾಗಿ ಪ್ರಾಣ ಬಿಡ್ತಿರೋ ಘಟನೆಯನ್ನ ನೀವು ನಾವು ನೋಡ್ತಾ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ನಿಂತಿದ್ದೇವೆ. ಚಾಮರಾಜನಗರದಂತೆ ದೇಶದ ನಾನಾ ಭಾಗದಲ್ಲಿ ಎಟ್​ ಎ ಟೈಮ್ ಒಂದೇ ಆಸ್ಪತ್ರೆಯಲ್ಲಿ 25ಕ್ಕೂ ಹೆಚ್ಚೆಚ್ಚು ಜನ ಆಕ್ಸಿಜನ್​​ ಇಲ್ಲದೆ ಸಾವಿಗಿಡಾಗುತ್ತಲೇ ಇದ್ದಾರೆ. ಈ ಕೆಟ್ಟ ಸಂದರ್ಭದಲ್ಲಿ ನಮ್ಮ ಸ್ಯಾಂಡಲ್​ವುಡ್​​ನ ಹೃದಯವಂತ ಮನಸುಗಳು ಸೇರಿ ಜೀವ ವಾಯುವನ್ನು ಒದಗಿಸೋ ಮಹತ್ಕಾರ್ಯ ಮುಂದಾಗಿದ್ದಾರೆ..

ಬಾಲಿವುಡ್​​ನ ರಿಯಲ್ ಹೀರೋ ಸೋನು ಸೂದ್ ಅವರು ದೇಶದ ನಾಲ್ಕು ಪ್ರಮುಖ ನಗರಗಳಲ್ಲಿ ಆ್ಯಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಲು ಮುಂದಾಗಿರೋ ವಿಚಾರ ನಿಮ್ಗೆ ಗೊತ್ತಿದೆ.. ಕೊರೊನಾ ಎಮರ್ಜೆನ್ಸಿ ಟೈಮ್​​ನಲ್ಲಿ ದೇಶಾದ್ಯಂತ ಬಡವರಿಗೆ ಸಹಾಯ ಮಾಡುತ್ತಾ ಆ್ಯಕ್ಸಿಜನ್ ಪೂರೈಕೆಯನ್ನು ಮಾಡ್ತಿದ್ದಾರೆ ಸೋನು ಸೂದ್​.. ಸೋನ್ ಸೂದ್​ ರೀತಿಯೇ ಅನೇಕ ಬಾಲಿವುಡ್ ನಟರು ತಮ್ಮ ತಮ್ಮ ಕೈಲಾದಷ್ಟು ಸೇವೆಯನ್ನ ಮಾಡ್ತಿದ್ದಾರೆ. ಬಾಲಿವುಡ್​ ಮಂದಿಯಂತೆ ನಮ್ಮ ಸ್ಯಾಂಡಲ್​ವುಡ್ ಸ್ಟಾರ್ಸ್ ಕೂಡ ಅದ್ಭುತ ಕಾರ್ಯವನ್ನ ಮಾಡ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಉಪ್ಪಿ ಫೌಂಡೇಷನ್ ವತಿಯಿಂದ ಕಲಾವಿದರಿಗೆ ಫುಡ್ ಕಿಟ್​​ ಕೊಡೋ ಜವಾಬ್ದಾರಿಯನ್ನ ಹೊತ್ತಿದ್ದಾರೆ.

ಕಿಚ್ಚ ಸುದೀಪ್ ಕಿಚ್ಚನ ಕೈ ತುತ್ತು ಅನ್ನೋ ಟ್ಯಾಗ್​ಲೈನ್ ನಡಿ ಕೊರೊನಾ ವಾರಿಯರ್ಸ್​​​ಗಳಿಗೆ ಊಟದ ವ್ಯವಸ್ಥೆಯನ್ನ ಮಾಡ್ತಿದ್ದಾರೆ. ನಟಿ ರಾಗಿಣಿ , ಹರ್ಷಿಕಾ ಪುಣ್ಣಚ್ಚ , ಭೂವನ್ ಪೊನ್ನಣ್ಣ ಹೇಗೆ ಕನ್ನಡದ ಸಾಕಷ್ಟು ನಟ ನಟಿಯರು ತಮ್ಮದೆಯಾದ ಅದ್ಭುತ ಸೇವಾಕಾರ್ಯವನ್ನ ಹಗಲಿರುಳು ಮಾಡ್ತಿದ್ದಾರೆ.. ಆದ್ರೆ ಈ ಕಾರ್ಯ ಎಲ್ಲರಿಗಿಂತ ಕೊಂಚ ವಿಭಿನ್ನ ವಿಶಿಷ್ಠ ಅರ್ಥಪೂರ್ಣ.

ಇಂದಿನ ಪರಿಸ್ಥಿತಿ ಹೇಗಿದೆ ಅಂದ್ರೆ ಕೊರೊನಾ ಸೋಂಕು ಬಂದವರಿಗೆಲ್ಲ ಆಸ್ಪೆತ್ರೆಯಲ್ಲಿ ಬೆಡ್ ಸಿಗಲ್ಲ. ಕೊರೊನಾ ಬಂದ್ರೆ ಆಸ್ಪೆತ್ರೆಗೆ ಹೋಗ ಬೇಕೆಂದೇನಿಲ್ಲ. ಸೂಕ್ತ ಚಿಕಿತ್ಸೆ , ಅತಿ ಸೂಕ್ತ ಮಾರ್ಗದರ್ಶನ, ಒಂದುಹಿಡಿ ಆತ್ಮವಿಶ್ವಾಸ ಸಿಕ್ರೆ ಸಾಕು. ಮನೆಯಲ್ಲೇ ಇದ್ಕೊಂಡು ಕೊರೊನಾವನ್ನ ಒದ್ದು ಓಡಿಸಬಹುದು.. ಶ್ರೀ ಗುರು ತೇಜ್ ಬಹದ್ದೂರ್ ಕೋವಿಡ್-19 ಕೇರ್ ಸೆಂಟರ್‌ ನವರು ದೆಹಲಿ ರೋಡ್ ರೋಡ್​ ನಲ್ಲಿ ಆಕ್ಸಿಜನ್ ಸಿಲಿಂಡರ್ ಕೊಟ್ಟು ಬಹಳಷ್ಟು ಪ್ರಾಣಗಳನ್ನ ಉಳಿಸಿದ್ರು.. ಈ ಕಾರಣಕ್ಕೆ ಅಮಿತಾಭ್ ಬಚ್ಚನ್ ಈ ಸಂಸ್ಥೆಗೆ ಎರಡು ಕೋಟಿ ದೇಣಿಗೆ ನೀಡಿದ್ದು. ಈಗ ಇದೇ ರೀತಿಯ ಒಂದು ವಿಭಿನ್ನ ಉಪಕಾರಕ್ಕೆ ಸ್ಯಾಂಡಲ್​ವುಡ್ ತಾರೆಗಳು ಮುಂದಾಗಿದ್ದಾರೆ.

ನಿರ್ದೇಶಕ ಕಮ್ ಚಿತ್ರ ಸಾಹಿತಿ ಕವಿರಾಜ್ , ಕವಿತಾ ಲಂಕೇಶ್ , ಸಾಧು ಕೋಕಿಲಾ , ದಿನಕರ್ ತೂಗುದೀಪ್ , ನಿರ್ದೇಶಕ ಚೈತನ್ಯ , ನಟಿ ನೀತು , ನಟ ಸಂಚಾರಿ ವಿಜಯ್ , ಸಂಗೀತ ನಿರ್ದೇಶಕ ಡಾ.ಕಿರಣ್ ತೋಟಂಬೈಲ್​ ಸೇರಿದಂತೆ ಅನೇಕ ಸಮಾನ ಮನಸ್ಕರೆಲ್ಲ ಸೇರಿ ‘‘ಉಸಿರು-ಕೋವಿಡ್ ಆಕ್ಸಿಜನ್ ಕೇರ್’’ ಅನ್ನ ಸ್ಥಾಪಿಸಿದ್ದಾರೆ.. ಈ ಉಸಿರು-ಕೋವಿಡ್ ಆಕ್ಸಿಜನ್ ಕೇರ್ ತಂಡ ಒಂದೊಳ್ಳೆ ಕಾರ್ಯಕ್ಕೆ ಮುಂದಾಗಿದೆ. ಆಕ್ಸಿಜನ್ ಸಮಸ್ಯೆಯಿಂದ ಬಳಲುತ್ತಿರುವ ಕೊರೊನಾ ಸೋಂಕಿತ ಮಂದಿಗೆ, ಆಸ್ಪೆತ್ರೆಯಲ್ಲಿ ಬೆಡ್​​ ಸಿಗದೆ ಇರೋ ಪೇಶೇಷಂಟ್​ಗಳಿಗೆ, ಮನೆಗೆ ಆಕ್ಸಿಜನ್ ಪೂರೈಸಲು ಮುಂದಾಗಿದ್ದಾರೆ.

ಹತ್ತು ಲಕ್ಷ ವೆಚ್ಚದಲ್ಲಿ ಉಸಿರು-ಕೋವಿಡ್ ಆಕ್ಸಿಜನ್ ಕೇರ್​ ಸದ್ಯ ಕಾರ್ಯ ನಿರ್ವಹಿಸುತ್ತಿದೆ. 5 ಆ್ಯಕ್ಸಿಜನ್ ಕಾನ್​​ಸಂಟ್ರೇಟರ್ಸ್ ಕೊಂಡಿರುವ ಉಸಿರು ತಂಡ ಮುಂದಿನ ದಿನಗಳಲ್ಲಿ ಇನ್ನಷ್ಟು ಆ್ಯಕ್ಸಿಜನ್ ಕಾನ್​​ಸಂಟ್ರೇಟರ್​​​​ ಗಳನ್ನ ಖರೀದಿಸುವ ಇರಾದೆಯಲ್ಲಿದೆ. ಬೆಡ್ ಸಿಗದೆ, ಉಸಿರಾಟದ ತೊಂದರೆ ಎದುರಾದವರಿಗೆ ಉಸಿರು ತಂಡ ಮನೆಗೆ ಹೋಗಿ ಆ್ಯಕ್ಸಿಜನ್ ಕಾನ್​ಸಂಟ್ರೇಟರ್​​ಗಳ ಮೂಲಕ ಆಮ್ಲಜನಕ ಹೆಚ್ಚು ಮಾಡಿಸಿ ಅವರಿಗೆ ಬೆಡ್ ಸಿಕ್ಕ ಮೇಲೆ ವಾಪಾಸ್ ಆಗೋ ಕಾರ್ಯ ಮಾಡ್ತಿದೆ.. ಇದ್ರ ಜೊತೆಗೆ ಕೊರೊನಾದ ‘ಎ’ ಗುಣ ಲಕ್ಷಣವಿರೋರಿಗೆ ವೈದ್ಯರು ಹಾಗೂ ಸಂಗೀತ ನಿರ್ದೇಶಕರು ಆಗಿರೋ ಕಿರಣ್ ತೋಟಂಬೈಲು ಆರೋಗ್ಯ ಮಾರ್ಗದರ್ಶನ ನೀಡುತ್ತಾರೆ.

ಹನಿ ಹನಿ ಕೂಡಿದರೆ ಹಳ್ಳ, ತೆನೆ ತೆನೆ ಕೂಡಿದರೆ ಬಳ್ಳ ಅನ್ನೋ ಮಾತಿನಂತೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾನವೀಯತೆ ಮೆರೆಯ ಬೇಕು.. ಮಾನವೀಯತೆಯೇ ಕೊರೊನಾಸುರನ ಸಂಹಾರಕ್ಕೆ ಅಸ್ತ್ರವಾಗಬೇಕು. ನಮ್ಮ ಸ್ಯಾಂಡಲ್​ವುಡ್​​ನ ಉಸಿರು ತಂಡಕ್ಕೆ ಮತ್ತಷ್ಟು ಸೇವೆ ಮಾಡೋ ಸ್ಫೂರ್ತಿ, ಶಕ್ತಿ ಬರ್ಲಿ.

The post ಕೊರೊನಾ ಸೋಂಕಿತರಿಗೆ ‘ಸಿನಿ ಕಲಾವಿದರ ಉಸಿರು’ -ಸಹಾಯಕ್ಕೆ ನಿಂತ ಸ್ಯಾಂಡಲ್​ವುಡ್ ತಾರೆಯರು appeared first on News First Kannada.

Source: newsfirstlive.com

Source link