ಕೊಪ್ಪಳ: ಕೊರೊನಾ ಸೋಂಕಿತರ ಕೈಗೆ ಸ್ಮಾರ್ಟ್ ಫೋನ್ ಕೊಡಬೇಡಿ ಎಂದು ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಕನಕಗಿರಿ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರು ಅವರು ವೈದ್ಯರಿಗೆ ತಿಳಿಸಿದ್ದಾರೆ.

ಜನ ಭಯದಿಂದಲೇ ಜಾಸ್ತಿ ಸಾಯುತ್ತಿದ್ದಾರೆ. ಯಾರ ಕಡೆನೂ ಸ್ಮಾರ್ಟ್ ಫೋನ್ ಕೊಡಬೇಡಿ. ರೋಗಿಗಳ ಕೈಯಲ್ಲಿ ಫೋನ್ ಕೊಡಬೇಡಿ ಎಂದು ಶಾಸಕರು ವೈದ್ಯರಿಗೆ ತಿಳಿಸಿದ್ದಾರೆ.

ಇದೇನು ದೊಡ್ಡ ಕಾಯಿಲೆ ಅಲ್ಲ, ಭಯದಿಂದ ಸಾಯ್ತಿದ್ದಾರೆ. ಎಂಪಿ ಹೇಳಲಿ, ಎಂಎಲ್‍ಎ ಹೇಳಲಿ ಫೋನ್ ಕೊಡಬೇಡಿ. ರೋಗಿಗಳಿಗೆ ನೀವೇ ಧೈರ್ಯ ಹೇಳಿ, ಮೊಬೈಲ್ ಕಟ್ ಮಾಡಿ ಎಂದು ಹೇಳಿದ್ದಾರೆ.

ನೀವು ಏನೇ ಹೇಳಿದರೂ ಮೊಬೈಲ್ ನೋಡಿದ್ರೆ ಮುಗೀತು. ಮಾತಾಡಬೇಕು ಅಂದ್ರೆ ಅವರ ಕಡೆ ಬೇರೆ ಫೋನ್ ಕೋಡಿ ಎಂದು ಶಾಸಕರು ತಿಳಿಸಿದ್ದಾರೆ.

The post ಕೊರೊನಾ ಸೋಂಕಿತರ ಕೈಗೆ ಮೊಬೈಲ್ ಕೊಡ್ಬೇಡಿ: ಬಸವರಾಜ್ ದಡೇಸಗೂರು appeared first on Public TV.

Source: publictv.in

Source link