ಬೆಂಗಳೂರು: ಇಂದು ಕೊರೊನಾ ವಾರ್​​ ರೂಮ್​ಗೆ ಭೇಟಿ ಕೊಟ್ಟ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಪರಿಶೀಲನೆ ನಡೆಸಿದರು. ನಂತರ ಮಾಧ್ಯಮಗಳಿಗೆ ಹೇಳಿಕೆ ನೀಡಿ. ಕೊರೊನಾ ಸೋಂಕಿನ ನಂಬರ್ ನೋಡಿ ಆತಂಕ ಬೇಡ.. ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯಗಳಲ್ಲೂ ಪಾಸಿಟಿವ್ ರೇಟ್ ಹೆಚ್ಚಿದೆ. .ಶೇ 30 ರಷ್ಟು ಬೇರೆ ರಾಜ್ಯಗಳಲ್ಲಿ ಇದೆ ಎಂದು ಹೇಳಿದ್ದಾರೆ.

ಆಕ್ಸಿಜನ್ ಸಮಸ್ಯೆ ನೀಗಿದೆ.. ಕೊರತೆ ಆಗದಂತೆ ಹಗಲಿರುಳು ಅಧಿಕಾರಿಗಳು ಕೆಲಸ ಮಾಡ್ತಿದ್ದಾರೆ. ಅಡಿಷನಲ್ ಡ್ರಗ್ ಕಂಟ್ರೋಲರ್ ಕೂಡ ಇಲ್ಲೇ ಇರ್ತಾರೆ. ರೆಮ್ಡಿಸಿವರ್ ಸರಬರಾಜು ಬಗ್ಗೆ, ನ್ಯೂನತೆ, ಇನ್ನು ಉತ್ತಮ ರೀತಿಯಲ್ಲಿ ವಿತರಣೆ ಬಗ್ಗೆ ಮಾಹಿತಿ ಪಡೆಯಲಾಗಿದೆ. ಇರುವ ಇತಿ ಮಿತಿಯಲ್ಲಿ ಸಾಕಷ್ಟು ಶ್ರಮ ವಹಿಸಬೇಕಾಗಿದೆ. ಸರ್ಕಾರದ ಎಲ್ಲಾ ಸಚಿವರೂ ಅಯಾ ಜಿಲ್ಲೆಗಳಲ್ಲಿ ಜೀವ ಉಳಿಸುವ ಕೆಲಸ ಮಾಡ್ತಿದಾರೆ.

3-4 ದಿನಗಳಲ್ಲಿ ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಾಳೆ ಕ್ಯಾಬಿನೆಟ್ ಮಿಟಿಂಗ್ ಇದೆ, CM ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತಾರೆ. ಜೀವ ಉಳಿಸುವ ಕೆಲಸ ಆಗಬೇಕು ಜೀವ ಭದ್ರತೆ ಮುಖ್ಯ ಎಂದಿದ್ದಾರೆ.

The post ಕೊರೊನಾ ಸೋಂಕಿನ ನಂಬರ್ ನೋಡಿ ಆತಂಕ ಬೇಡ- ಡಾ.ಕೆ. ಸುಧಾಕರ್ appeared first on News First Kannada.

Source: News First Kannada
Read More